bbf8d728-bf72-4ba5-b95d-858b53683613

ರೂಪನ ಗುಡಿ ವೆಂಕಟೇಶ್ವರ ದೇವಸ್ಥಾನದಲ್ಲಿ, ವೈಕುಂಠ ಏಕಾದಶಿ

         ಶ್ರೀ ಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ನಾರಾ ಪ್ರತಾಪ್ ರೆಡ್ಡಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, ೨೧-  ಚಾರಿತ್ತ್ಯಾತ್ಮಕ ಪ್ರಶಸ್ತಿಯಾದ, ಜಿಲ್ಲೆಯ ಅತಿ ಪುರಾತನ ದೇವಸ್ಥಾನಗಳಲ್ಲಿ ಒಂದಾದ, ಬಳ್ಳಾರಿ ತಾಲೂಕ ವ್ಯಾಪ್ತಿಯಲ್ಲಿ ಬರುವ ರೂಪನಗೌಡ ಗ್ರಾಮದಲ್ಲಿ ನಡೆಸಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ, ಇದೇ ತಿಂಗಳು 23 ಶನಿವಾರ ಬರುವ ವೈಕುಂಠ ಏಕಾದಶಿಯನ್ನು ಅದ್ದೂರಿಯಿಂದ ಆಚರಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ, ಶ್ರೀ ಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷರು, ನಾರಾ ಪ್ರತಾಪ್ ರೆಡ್ಡಿ ಹೇಳಿದರು.

ಅವರು ಇಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿ ವೈಭವದ ವಿವರಗಳನ್ನು ನೀಡಿದರು. ಗ್ರಾಮೀಣ ಪ್ರಾಂತದ ಜನತೆಗೆ ವೈಕುಂಠ ಏಕಾದಶಿ ಆಚರಣೆಯಲ್ಲಿ ತೊಡೆಗಿಕೊಳ್ಳಲು ಪ್ರೇರೇಪಿಸಲು ಅತ್ಯಂತ ಪುರಾತನವಾದ ರೂಪನಗೊಡಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಈ ಸಾರಿ ವೈಕುಂಠ ಏಕಾದಶಿಯನ್ನು ವೈಭವದಿಂದ ನಡೆಸಲು ನಿರ್ಣಯಿಸಲಾಗಿದೆ ಎಂದು ತಿಳಿಸಿದರು.

ಪುರತನವಾದ ದೇವಸ್ಥಾನ ಅಭಿವೃದ್ಧಿಗಾಗಿ ಶ್ರಮ ಪಡಿತ್ತಿರುವದಾಗಿ, ಈ ಭಾಗದ ಜನರ ಅನುಕೂಲಕ್ಕಾಗಿ, ಬಡ ಕುಟುಂಬಗಳಿಗೆ ಸಾಕಾರ ನೀಡಲು ಉದ್ದೇಶದಿಂದ, ದೇವಸ್ಥಾನದ ಆವರಣದಲ್ಲಿ ಎಲ್ಲಾ ಸೌಲಭ್ಯಗಳೊಂದಿಗೆ ಕಲ್ಯಾಣ ಮಂಟಪ ನಿರ್ಮಿಸಲು, ಸಂಬಂಧಿತ ಶಾಖಾಧಿಕಾರಿಗಳ ಜೊತೆಗೆ ಚರ್ಚಿಸಲಾಗುತ್ತಿದೆ ಎಂದರು. ಇತ್ತೀಚೆಗೆ ಸಮಾಜದಲ್ಲಿ ಜನರನ್ನು ಪೀಡಿಸುತ್ತಿರುವ, ಕಾಯಿಲೆಗಳಲ್ಲಿ ಒಂದಾದ ಕ್ಯಾನ್ಸರ್ ಮತ್ತು ಹೃದಯ ರೋಗ, ರೋಗಗಳ ಸಂಬಂಧಿಸಿದಂತೆ, ಬೆಂಗಳೂರಿನ ಜಯದೇವ, ನಾರಾಯಣ ಹೃದಯಾಲಯ ಆಸ್ಪತ್ರಿ ಗಳ ಸಂಯೋಜನೆಯಲ್ಲಿ, ಎರಡು ದಿನಗಳ ಕಾಲ ಉಚಿತವಾಗಿ ಹೆಲ್ತ್ ಕ್ಯಾಂಪ್ ತಮ್ಮ ಸೇವಾ ಟ್ರಸ್ಟ್ ವತಿಯಿಂದ ಕೈಗೊಳ್ಳಲಾಗುವುದು ಎಂದರು.

ಹೆಲ್ತ್ ಕ್ಯಾಂಪ್ ವಿವರಗಳನ್ನು ಜನವರಿ ತಿಂಗಳಲ್ಲಿ ನೀಡಲಾಗುವುದು ಎಂದರು.. ಸಮಾಜದಲ್ಲಿ ಪ್ರಧಾನ ಸಮಸ್ಯೆಯಾದ ನಿರುದ್ಯೋಗ ನಿರ್ಮೂಲನಗಾಗಿ ಉದ್ಯೋಗ ಮೇಳ ನಡೆಸುವುದಾಗಿ ತಿಳಿಸಿದರು. ಇದರಿಂದ ನಿರುದ್ಯೋಗ ಯುವತಗೆ ಉದ್ಯೋಗಾವಕಾಶಗಳು ಕಲ್ಪಿಸಲು ತಮ್ಮ ಪ್ರಧಾನ ಉದ್ದೇಶವಾಗಿದೆಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!