WhatsApp Image 2024-02-27 at 7.17.38 PM

ರೋಟರಿ ಸಂಸ್ಥೆಯಿಂದ ಐ.ಸಿ.ಯು ಅ್ಯಂಭ್ಯುಲೆನ್ಸ ಲೋಕಾರ್ಪಣೆ

ಕರುನಾಡಬೆಳಗು ಸುದ್ದಿ

ವಿಜಯನಗರ,27- ಒಬ್ಬ ವ್ಯಕ್ತಿಯ ಜೀವ ಉಳಿಸುವುದು ,ನೂರು ಜನರಿಗೆ ಹಸಿವು ಇಂಗಿಸುದುದಕ್ಕೆ ಸಮನಾದುದು,ಸಾವಿನ ಅಂಚಿನಲ್ಲಿದ್ದವರನ್ನು ,ಬದುಕಿಸುವ ಪ್ರಯತ್ನ ಕ್ಕೆ ಸಮನಾದುದು ಜಗತ್ತಿನಲ್ಲಿ ಬೇರೊಂದಿಲ್ಲ ಎಂದು ವಿಜಯನಗರ ಜಿಲ್ಲಾಧಿಕಾರಿ ದಿವಾಕರ್ ಹೇಳಿದರು.

ನಗರದ‌ ರೋಟರಿ ಕ್ಲಬ್ ನಿಂದ ರೋಗಿಗಳಿಗೆ ಸಂಕಷ್ಟದ ಪರಿಸ್ಥಿತಿಯಲ್ಲಿ ಉಚಿತವಾಗಿ ನೀಡುವ ನೂತನ ” ಐ.ಸಿ.ಯು ಅ್ಯಂಭ್ಯುಲೆನ್ಸ ” ನ್ನು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಅವರು ಕೆಲವು ಸಾಮಾಜಿಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವ ಅಭ್ಯರ್ಥಿಗಳ ಬಗ್ಗೆ ಹಾಸ್ಯಮಯವಾಗಿ ಮಾತನಾಡುತ್ತಾ ಅಂತಹ ಜನರು ಕಾಲ ಕಳೆಯಲು ಕೆಲ ಸ್ಥಳಗಳನ್ನು ಹುಟ್ಟುಹಾಕಿ, ಅಲ್ಲಿ ಸಮಯ ಕಳೆದು ಮನಸ್ಸು ಹಗುರ ಮಾಡಿಕೊಂಡು ಮನೆಗಳಿಗೆ ,ತೆರಳುವರು.ಅದರೆ ರೋಟರಿ‌ಸದಸ್ಯರು ಕೇವಲ‌ ವೃತಾ ಕಾಲಹರಣ ಮಾಡದೆ .ತಮ್ಮ ಸಮಯವನ್ನು ಸಾರ್ವಜನಿಕರ ಒಳಿತಿಗಾಗಿ ವ್ಯಯಿಸುವುದರ ಜೊತೆಗೆ , ತಮ್ಮ ಸ್ವಂತ ಹಣ ಸಾಮಾಜಿಕ ಕಾರ್ಯಗಳಿಗೆ ಮೀಸಲಿಡುತ್ತಿದ್ದಾರೆಂದರೆ ,ಅದು ಶ್ಲಾಘನೀಯ ಎಂದರು.

ಸೇವಾ ಮನೋಭವನೆಯನ್ನು ಮಹಾಭಾರತದ ಕೌರವ ಮತ್ತು ಪಾಂಡವರ ಕತೆ ಹೇಳುವುದರ ಮೂಲಕ ನಮ್ಮ ಜೊತೆ ಗಿರುವ ಸಂಗಾತಿಗಳ ಸ್ವಭಾವಗಳು ಅವಲಂಭಿಸುವವು ಎಂದು ಅವರು ಹೇಳಿದರು. ರೋಟರಿ ಗವನ೯ರ್ ” ಮನಿಕ ಪವಾರ್” ಪೌಡೇಶನ್ ಸ್ಟೋನ್ ಉದ್ಘಾಟಿಸಿದರು. ರೋಟರಿ ಅದ್ಯಕ್ಷ ಸತ್ಯನಾರಾಯಣ ಸ್ವಾಗತಿಸಿದರು. ಡಿಸ್ಟಿಕ್ ಗವರ್ನರ್ ತಿರುಪತಿ ನಾಯ್ಡು ಅವರು ತಮ್ಮ ತಂದೆಯ ಜ್ಞಾಪಕಾರ್ಥ ಅಂಭ್ಯುಲೆನ್ಸ್ ನ್ನು ರೋಟರಿ ಸಂಸ್ಥೆ ಗೆ ದೇಣಿಗೆ ನೀಡಿದ್ದಾರೆ. ಇದೇ ಸಂಧರ್ಭದಲ್ಲಿ ಮಾಜಿ ಶಾಸಕ ಆನಂದ್ ಸಿಂಗ್ ರವರ ಸೇವೆಯನ್ನು ಸ್ಮರಿಸಿ ಶ್ಲಾಘಿಸಿದರು ಕಾರ್ಯಕ್ರಮ ದಲ್ಲಿ ಡಿಹೆಚ್ಓ ಶಂಕರ್ ನಾಯ್ಕ,ಅಶ್ವಿನ್ ಕೊತಂಬರಿ,ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!