
ಒಂದು ಜೀವ ಉಳಿಸಿದರೆ ಎಷ್ಟೋ ಜೀವಿಗಳಿಗೆ ಸಾಂತ್ವನ ನೀಡಿದಂತೆ
ಜಿಲ್ಲಾಧಿಕಾರಿ ಎಂ ಎಸ್ ದಿವಾಕರ್
ಕರುನಾಡ ಬೆಳಗು ಸುದ್ದಿ
ಹೊಸಪೇಟೆ (ವಿಜಯನಗರ )೧೯- ಅಪಘಾತ ವಾಗದಂತೆ ಒಂದು ಜೀವ ಉಳಿಸಿದರೆ ಎಷ್ಟೋ ಜೀವಿಗಳಿಗೆ ಸಾಂತ್ವನ ನೀಡಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ ಎಸ್ ದಿವಾಕರ್ ಹೇಳಿದರು.
ಅವರು ರೋಟರಿ ಸಂಸ್ಥೆ ಸಹಯೋಗದೊಂದಿಗೆ ಜೀವ ರಕ್ಷಾ ಟ್ರಸ್ಟ್ ವತಿಯಿಂದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಾಹನ ಸವಾರರು ಅಪಘಾತದಲ್ಲಿ ಪ್ರಾಣ ಕಳೆದು ಕೊಳ್ಳುವುದು ಎರೆಡು ವಿಚಾರಗಳಿಗೆ ಒಂದು ಡ್ರಿಂಕ್ ಅಂಡ್ ಡ್ರೈವ್ ಇನ್ನೊಂದು ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವುದು. ಅಪಘಾತ ಗಳಲ್ಲಿ ಸಾವು ಆಗೋದು100ರಲ್ಲಿ ಶೇ 80ರಷ್ಟು ಭಾಗ ಬ್ರೈನ್ ಡ್ಯಾಮೇಜ್ ಆಗುತ್ತೆ ಇದರಲ್ಲಿ 90ರಷ್ಟು ಸಾವಾಗುತ್ತೆ. ಈ ರೀತಿಯಾಗಿ ಸಾವುಗಳು ಸಂಭಾವಿಸುತ್ತವೆ ಹಾಗಾಗಿ ವಾಹನ ಸವಾರರು ಪ್ರಯೊಬ್ಬರು ಖಡ್ಡಾಯವಾಗಿ ಹೆಲ್ಮೆಟ್ ಹಾಕಿಕೊಂಡು ಮತ್ತು ಸೀಟ್ ಬೆಲ್ಟ್ ಹಾಕಿಕೊಂಡು ವಾಹನ ಚಲಾಯಿಸಿ ಪ್ರಾಣ ಉಳಿಸಿಕೊಳ್ಳಿ ಎಂದು ಹೇಳುತ್ತಾ ಬೈಕ್ ಮ್ಯಾರಾಥಾನ್ ನಲ್ಲಿ ಹೊಸಪೇಟೆ ಯಿಂದ ನಗರದ ಮುಖ್ಯ ಬಿದಿಗಳಲ್ಲಿ ಸಂಚರಿಸಿ ಹಂಪಿ ಮತ್ತು ಸಂಡೂರು ವರೆಗೆ ಸಂಚರಿಸುವ ಬೈಕ್ ಜಾತಾ ದಲ್ಲಿ ಭಾಗಹಿಸಿದ ಸವಾರರಿಗೆ ಶುಭ ಆರೈಸಿ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಿರುವ ಜೀವ ರಕ್ಷಾ ಟ್ರಸ್ಟ್ ಗೆ ಶ್ಲಾಘನೆ ವ್ಯಕ್ತಪಡಿಸಿ ಬೆಂಬಲಿಸಿದರು.
ಜಿಲ್ಲಾಧಿಕಾರಿ ಎಂ ಎಸ್ ದಿವಾಕರ್, ಜೀವ ರಕ್ಷ ಟ್ರಸ್ಟ್ ನ ಮುಖ್ಯಸ್ಥ ಭಾಸ್ಕರ್ ರೆಡ್ಡಿ, ನಗರ ಸಭೆ ಅಧ್ಯಕ್ಷಿಣಿ ಲತಾ ಪರುಶುರಾಮ, ಜಿಲ್ಲಾ ವೈಧ್ಯಾಧಿಕಾರಿ ಶಂಕರ್ ನಾಯ್ಕ್, ತಾಲೂಕು ಆರೋಗ್ಯಧಿಕಾರಿ ಟಿ ಭಾಸ್ಕರ್, ಪೊಲೀಸ್ ಅಧಿಕಾರಿಗಳು, ಮತ್ತು ಸಂಚಾರಿ ಪೊಲೀಸ್ ಅಧಿಕಾರಿಗಳು ಮುಖಂಡರು ಭಾಗವಹಿಸಿದ್ದರು.