IMG-20240207-WA0024

ಲಿಂಗನಬಂಡಿ ಗ್ರಾಮದ ವರಗೆ ಪ್ರಾಯೋಗಿಕ ರೈಲು ಸಂಚಾರ, ಗದಗ ವಾಡಿ ರೈಲ್ವೆಗೆ ಪೂಜೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ ಗ್ರಾಮಸ್ಥರು

ಕರುನಾಡ ಬೆಳಗು ಸುದ್ದಿ 

ಯಲಬುರ್ಗಾ,7- ತಾಲೂಕಿನ ಹನಾಮಪೂರ ಮತ್ತು ಲಿಂಗನಬಂಡಿ ನಿಲ್ದಾಣದವರಿಗೂ ಪ್ರಾಯೋಗಿಕ ಗದಗ- ವಾಡಿ ಆಯೋಜಕತ್ವವನ್ನು ಪ್ರಾಯೋಗಿಕವಾಗಿ ಕೈಗೊಳ್ಳಲು ಸಂಚರಿಸಲಾಗಿರುತ್ತದೆ ಇದಕ್ಕೆ ಗ್ರಾಮಸ್ಥರು ತುಂಬಾ ಹಶ೯ ಎತ್ತರ ಗದಗ ತಳಕಲ್‌ವರೆಗೆ ತಲುಪಲು ಹಳಿ ನಿರ್ಮಾಣವಾಗಿದೆ.

ತಳಕಲ್ ನಿಂದ ಕುಷ್ಟಗಿ 57 ಕಿ.ಮೀ. ಹೊರಗೆನಬಂಡಿ ವರಗೆ ಕಾಮಗಾರಿ ಪೂರ್ಣಗೊಂಡಿದೆ, ಲಿಂಗನಬಂಡಿ ನಿಲ್ದಾಣದಿಂದ ಕುಷ್ಟಗಿಗಾಗಿ ಕಾಮಗಾರಿ ಮಾರ್ಚ್ ತಿಂಗಳೊಳಗೆ ಪೂರ್ಣಗೊಳ್ಳಲಿದೆ ಹನಮಾಪುರದಿಂದ ಲಿಂಗನಬಂಡಿ ವರಗೆ ಪ್ರಾಯೋಗಿಕ ರೈಲು ಸಂಚಾರಕ್ಕೆ ಪ್ರಥಮವಾಗಿ ಗ್ರಾಮಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಗದಗ ವಾಡಿಯಲ್ಲಿ ಗ್ರಾಮಸ್ಥರು ತಳಿರು ತೋರಣ ಹೂವಿನ ಹಾರ ಹಾಕಿ ಪಟಾಕಿ ಸಿಡಿಸಿ ಪೂಜೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ್ದಾರೆ ಇನ್ನೇನು ರೈಲು ಸಂಚಾರಕ್ಕೆ ಅಧಿಕೃತವಾಗಿ ಆರಂಭವಾದ ಕೆಲವೇ ದಿನಗಳಲ್ಲಿ ಜನರು ಬಾಕಿ ಉಳಿದುಕೊಳ್ಳುವ ಸಮಯ ನನಸು ಆಗುವ ಸಮಯ ಬರಲಿದೆ. ಪ್ರಾರಂಭಿ ಸುವ ಸಮಯ ಒದಗಿಬಂದಿದೆ.

ಸುರಕ್ಷತಾ ತಂಡ ಭೇಟಿ : ದಕ್ಷಿಣ ವಲಯದ ಸುರಕ್ಷತಾ ಆಯುಕ್ತ ಎ.ಎಂ.ಚೌಧರಿ ನೇತೃತ್ವದಲ್ಲಿ ತಪಾಸಣೆ ನಡೆಸಲಾಯಿತು. ಕನ್ನಷ್ಟ್ರಕ್ಷನ್ ವಿಭಾಗದ ಮುಖ್ಯ ಆಡಳಿತಾಧಿಕಾರಿ ಶ್ರೀರಾಮ ಗೋಪಾಲ,ರೈಲ್ವೆ ಪ್ರಬಂಧಕ ಹರ್ಷಕರೆ, ಹಿರಿಯ ವಾಣಿಜ್ಯ ಅಧಿಕಾರಿ ಸಂತೋಷ ಹೆಗಡೆ ಇತರ ಅಧಿಕಾರಿಗಳ ತಂಡ ಸಂಪೂರ್ಣ ವಿದ್ಯುದೀಕರಣ ಪರಿಶೀಲನೆ ನಡೆಸಿತು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ರಾಮಣ್ಣ ಸಾಲ ಭಾವಿ, ಮೌನೇಶ್ವರಮಠದ ಉಳಿವೇಂದ್ರಸ್ವಾಮೀಜಿ, ಗುರು ಪಾದಯ್ಯ ಹಿರೇಮಠ, ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ದೇವಿಂದ್ರಗೌಡ ಮಾಲಿಪಾಟೀಲ, ಮಹಾದೇವಪ್ಪ ದಳಪತಿ. ಹುಲಗಪ್ಪ ಬಂಡಿವಡ್ಡರ, ಬಸವರಾಜ ಜಂಬಾಳಿ, ರುದ್ರ ಗೌಡ ನಂದಿಹಾಳ, ಮೌನೇಶ ನಂದಿಹಾಳ, ಪರಪ್ಪ ಅಂಗಡಿ, ನಾಗರಾಜ ಹುಡೇದ, ಬಾಲಪ್ಪ ಬಿಜಕಲ್, ಷಣ್ಮು ಖಪ್ಪ ಮೇಲಸಕ್ರಿ, ಕುಶ ಬೇವಿನಗಿಡದ, ವಿರುಪಣ್ಣ ಬಿಜ ಕಲ್, ಶರಣಪ್ಪ ತಲ್ಲೂರು, ಪ್ರಭುಗೌಡ ಪಾಟೀಲ, ಶರಣಪ್ಪ ಗೌಡ ಬಸಾಪೂರ, ರಮೇಶ ಮಡಿವಾಳರ, ವಿರುಪಾಕ್ಷಿ ಹರಿಜನ, ಲಕ್ಷಣ ಭಂಡಾರಿ, ಬಸವರಾಜ ಚೌಡಕಿ, ಬಸಣ್ಣ ಕುಷ್ಟಗಿ, ಸುರೇಶ ಭಜೆಂತ್ರಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!