
ಲೋಕಸಭಾ ಚುನಾವಣೆ : ಜಿಲ್ಲೆಯ 14 ಕಡೆಗಳಲ್ಲಿ ಚೆಕ್‌ಪೋಸ್ಟ್ ನಿರ್ಮಾಣ
ಕರುನಾಡ ಬೆಳಗು ಸುದ್ದಿ
ವಿಜಯನಗರ,26- ಲೋಕಸಭಾ ಚುನಾವಣೆ-2024ರ ಹಿನ್ನಲೆಯಲ್ಲಿ ವಿಜಯನಗರ ಜಿಲ್ಲೆಯ ವಿವಿಧ ತಾಲೂಕಿನ 14 ಕಡೆಗಳಲ್ಲಿ ಚೆಕ್‌ಪೋಸ್ಟ್ಗಳನ್ನು ನಿರ್ಮಿಸಲಾಗಿದೆ.
ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನಲ್ಲಿ ಹರವಿ ಬ್ರಿಡ್ಜ್, ಮೈಲಾರ, ಗುತ್ತಲ ರೋಡ್ ಮದಲಗಟ್ಟದಲ್ಲಿ, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಗರಗ-ನಾಗಲಾಪುರ ಹಾಗೂ ಹರಾಳುದಲ್ಲಿ, ಹೊಸಪೇಟೆ ತಾಲೂಕಿನಲ್ಲಿ ಗಣೇಶ್ ಗುಡಿ ಕೊಪ್ಪಳ ರೋಡ್ ಹೊಸಪೇಟೆ ಮತ್ತು ಬುಕ್ಕಸಾಗರದಲ್ಲಿ, ಕೂಡ್ಲಿಗಿ ತಾಲೂಕಿನಲ್ಲಿ ಡಿ ಸಿದ್ದಾಪುರ (ರಾಂಪುರ ರೋಡ್), ಕೊಂಬಿಹಳ್ಳಿ (ಮೊಳಕಾಲ್ಮೂರ್ ರೋಡ್), ಆಲೂರು (ಚಿತ್ರದುರ್ಗ ರೋಡ್ ಎನ್‌ಹೆಚ್-50), ಉಜ್ಜಿನಿ(ಸೊಕ್ಕೆ ರೋಡ್)ದಲ್ಲಿ ಹಾಗೂ ಹರಪನಹಳ್ಳಿ ತಾಲೂಕಿನಲ್ಲಿ ನಂದಿಬೇವೂರು, ಕಾನಹಳ್ಳಿ, ಮತ್ತಿಹಳ್ಳಿಯ ಹತ್ತಿರದಲ್ಲಿ ಚೆಕ್ ಪೋಸ್ಟ್ಗಳನ್ನು ನಿರ್ಮಿಸಲಾಗಿದ್ದು, ಚುನಾವಣಾ ಅಕ್ರಮಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮವಹಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ತಿಳಿಸಿದ್ದಾರೆ.