IMG-20240106-WA0021

 ವಚನ ಸಾಹಿತ್ಯ ಸಮೃದ್ಧವಾಗಿ ಎಲ್ಲೆಲ್ಲೂ ಪಸರಿಸಲಿ ತೋಂಟದ ಸಿದ್ದರಾಮ ಶ್ರೀಗಳು

ಕರುನಾಡ ಬೆಳಗು ಸುದ್ದಿ

ಕೊಪ್ಪಳ,6- ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಗದುಗಿನ ತೋಂಟದ ಸಿದ್ದರಾಮ ಶ್ರೀಗಳು ಮಾತನಾಡುತ್ತಾ, ಜನಮನದಾಳಕ್ಕೆ ವಚನ ಸಾಹಿತ್ಯದ ಅರಿವಿನ ಪ್ರಜ್ಞೆ ಮತ್ತು ಕಾಯಕ ಜೀವನದ ಸಿದ್ದಾಂತಗಳನ್ನು ಮನೆ ಮನಕ್ಕೆ ತಲುಪಿಸುವ ಅತ್ಯಗತ್ಯವಿದೆ ಈ ನಿಟ್ಟಿನಲ್ಲಿ ಯುವಜನರನ್ನು, ಮಹಿಳೆಯರನ್ನು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಶಸಕ್ತರನ್ನಾಗಿಸುವ ಕಾರ್ಯ ರಾಜ್ಯ ದೇಶದಲ್ಲಡೆ ಆಗಬೇಕಾಗಿದೆ. ಆಗ ಮಾತ್ರ ಶಾಂತಿ, ಸೌಹಾರ್ಧ್ಯತೆ, ಸಮಾನತೆ ಕಾರ್ಯಗತವಾಗಲು ಸಾಧ್ಯವಿದೆ. ಇಂತಹ ಮಹತ್ವದ ಕಾರ್ಯ ಶರಣ ಸಾಹಿತ್ಯ ಪರಿಷತ್ತಿನ ಸರ್ವ ಜಿಲ್ಲಾಧ್ಯಕ್ಷರಿಂದ ಆಗಬೇಕಾಗಿದೆ ಎಂದು ಕರೆ ನೀಡಿದರು.

ಅವರು ಬೆಂಗಳೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕೇಂದ್ರ ಕಛೇರಿಯ ಸಭಾಂಗಣದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯಲ್ಲಿ ಲೇಖಕ ಜಿ.ಎಸ್.ಗೋನಾಳರು ರಚಿಸಿದ ‘ಅಂತರಂಗದೋಳ ಚಿಗುರಲಿ ಶರಣರ ವಚನಾಮೃತಗಳು’ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತ ಮತ್ತು ಇತರೆ ಎಲ್ಲಾ ಕಾರ್ಯಕರ್ತರು ಶರಣರ ವಚನಗಳನ್ನು ಅವರ ತತ್ವಾದರ್ಶಗಳನ್ನು ಕಾಯಕ ಶೀಲ ಗುಣಗಳನ್ನು ಮನೆಮನೆಗೆ ತಲುಪಿಸಿದಾಗ ಸಮಾಜದಲ್ಲಿ ಶಾಂತಿ ಸೌಹಾರ್ಧ್ಯತೆ ಮತ್ತು ಸಮೃದ್ಧಿ ಬೆಳೆಯಲು ಸಾಧ್ಯವಿದೆ ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷರಾದ ಸುತ್ತೂರು ದೇಶಿ ಕೇಂದ್ರದ ಮಹಾಸ್ವಾಮಿಗಳು ಮಾತನಾಡಿ, ಸರಳರನ್ನು, ಸಮರ್ಥರನ್ನು ಕಾಯಕವೇ ಕೈಲಾಸ ಎಂಬ ತತ್ವದಡಿಯಲ್ಲಿ ಸರ್ವರನ್ನು ಸಕರಾತ್ಮಕವಾಗಿ ಬದುಕುವ ವಾತಾವರಣವನ್ನು ಸೃಷ್ಟಿಸಲು ಶರಣ-ಶರಣಿಯರ ಬದುಕು ಆದರ್ಶಗಳು, ವಚನ ಸಾಹಿತ್ಯ  ಎಂದೆಂದಿಗೂ ಮೌಲ್ವಿಕವಾದದ್ದು, ಆಗಾಗಿ ಯುವಜನರನ್ನು ಕ್ರೀಯಾಶೀಲವಾಗಿಸಿ, ಶರಣ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡುವ ಕಾರ್ಯವಾಗಲಿ ಎಂದ ಅವರು ಲೇಖಕ ಜಿ.ಎಸ್.ಗೋನಾಳ ಬರೆದ ‘ಅಂತರಂಗದೋಳ ಚಿಗುರಲಿ ಶರಣರ ವಚನಾಮೃತಗಳು’ ಪುಸ್ತಕ ಈ ಎಲ್ಲಾ ವಿಚಾರಧಾರೆಗಳಿಗೆ ಪೂರಕವಾದ ಅಂಶಗಳನ್ನು ಒಳಗೊಂಡಿದೆ ಎಂದು ಮಾತನಾಡಿದರು.

ಪರಿಷತ್ತಿನ ಗೌರವ ಸಲಹೆಗಾರರು ಮತ್ತು ಜಾನಪದ ವಿದ್ವಾಂಸರಾದ ಗೋ.ರು. ಚನ್ನಬಸಪ್ಪನವರು ಮಾತನಾಡಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜನರಲ್ಲಿ ಜ್ಞಾನಜ್ಯೋತಿ ಬೆಳೆಗಿಸುವ ಕಾರ್ಯ ಮಾತನಾಡುತ್ತಾ ಬಂದಿದ್ದು, ಜನಪರ ಶಕ್ತಿ ಕೇಂದ್ರವಾಗಿ ಬೆಳೆಯುತ್ತಿದೆ. ಇನ್ನಷ್ಟೂ ಆರ್ಥಿಕವಾಗಿ, ಸದೃಢವಾಗಿ ಬೆಳೆಯ ಬೇಕಾಗಿದ್ದು, ಸದಸ್ಯತ್ವ ದತ್ತಿ ಪ್ರಶಸ್ತಿ, ದತ್ತಿ ಉಪನ್ಯಾಸ ದಾನಿಗಳಿಂದ ೧೦ ಕೋಟಿ ದೇಣಿಗೆಯನ್ನು ಸಂಗ್ರಹಿಸಿ ಮುಂದೆ ನಿರಂತರವಾಗಿ ಯಾವುದೇ ಆತಂಕವಿಲ್ಲದೇ ಪರಿಷತ್ತು ಮುನ್ನುಡೆಯುವಂತೆ ಭದ್ರವಾದ ಬುನಾದಿಯನ್ನು ನೂತನ ಅಧ್ಯಕ್ಷರಾದ ಸಿ.ಸೋಮಶೇಖರ ಹಾಕಲಿ ಎಂದು ಅಭಿನಂದಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿಶಾಲ ಪ್ರಕಾಶನದ ಪ್ರಕಾಶಕ ಲೇಖಕರಾದ ಜಿ.ಎಸ್.ಗೋನಾಳ ಅವರು ನೂತನ ರಾಜ್ಯಾಧ್ಯಕ್ಷರಾದ ಸಿ.ಸೋಮಶೇಖರವರನ್ನು ಸತ್ಕರಿಸಿದರು. ಈ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಸಿ.ಸೋಮಶೇಖರ, ಪ್ರಧಾನ ಕಾರ್ಯದರ್ಶಿ ಪರಮೇಶ್ವರಗೌಡ ಯರೇಸಿಮಿ, ಉಪಾಧ್ಯಕ್ಷ ಗೊಂಡಜ್ಜಿ ಬ ಶಣ್ಮುಕಪ್ಪ, ಡಾ.ಹೊನ್ನಲಿಂಗಯ್ಯ, ಕೋಶಾಧಿಕಾರಿ ಎಸ್.ಎಂ.ಹAಪಯ್ಯ, ಕದಳಿ ವೇದಿಕೆ ರಾಜ್ಯಾಧ್ಯಕ್ಷರಾದ ಶ್ರೀಮತಿ ಸುಶೀಲಾ ಸೋಮಶೇಖರ, ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೆ.ಬಿ.ಪರಮೇಶ್ವರಪ್ಪ, ಅಶೋಕ ಗಂಗಾಧರ ಮಳಲಿ, ಮ.ಗು.ಸದಾನಂದಯ್ಯ, ಚಂದ್ರಶೇಖರ ಹಡಪದ, ಜಿ.ಎಸ್.ಗೋನಾಳ, ಎಚ್.ಎನ್.ಮಹಾರುದ್ರ, ಕೆ.ಎಂ.ವಿರೇಶ, ಮಂಜುನಾಥ ಕಂಚಾಣಿ, ಚೆನ್ನಪ್ಪ ಕಂಠಿ, ಡಾ.ಮಲ್ಲಿಕಾರ್ಜನ ವಡ್ಡನಕೇರಿ, ಜಗನ್ನಾಥಪ್ಪ ಪನ್ನಸಾಲೆ, ನಾಗರಾಜ ಮಸ್ಕಿ, ಡಾ.ರವೀಂದ್ರನಾಥ, ರವೀಶ ಕ್ಯಾತನಬೀಡು, ಶ್ರೀಮತಿ ಸುಧಾ ಮೃತ್ಯಂಜಯ್ಯ, ವಿ,ಮಲ್ಲಿಕಾರ್ಜುನ ಮೊದಲಾದವರು ಉಪಸ್ಥಿತರಿದ್ದರು. ಸ್ವಾಗತವನ್ನು ಪರಮೇಶ್ವರಗೌಡ ಯರೇಸಿಮಿ ಕೋರಿದರು, ವಂದನಾರ್ಪಣೆಯನ್ನು ಕೋಶಾಧಿಕಾರಿ ಹಂಪಯ್ಯ ನೆರವೇರಿಸಿದರು.

Leave a Reply

Your email address will not be published. Required fields are marked *

error: Content is protected !!