
ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಿ ದೇಶದ ಒಳ್ಳೆಯ ಪ್ರಜೆಯಾಗಬೇಕು. ಚಂದ್ರಕಾಂತಯ್ಯ ಕಲ್ಯಾಣಮಠ.
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 6- ಎಲ್ಲಾ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ವಿದ್ಯಾಭ್ಯಾಸ ಮಾಡಿದರು ಕಡಿಮೆ. ಸತತ ವಿದ್ಯಾಭ್ಯಾಸದಿಂದ ಯಶಸ್ಸು ಸಿಗುವುದು ನಿಮ್ಮ ಊರಿಗೆ ಮತ್ತು ನಿಮ್ಮ ತಂದೆ. ತಾಯಿಗಳಿಗೆ. ಗೌರವ. ಕಿತಿ೯. ತರುವಂತೆವರಾಗಿರಿ .ದೇಶದ ಒಳ್ಳೆಯ ಪ್ರಜೆಯಾಗಬೇಕು
ಎಂದು ನಿವೃತ್ತ ಪ್ರಾಂಶುಪಾಲ ಮತ್ತು ಕಾಲೇಜಿನ ನಾಮ ನಿರ್ದೇಶಿತ ಸದಸ್ಯ ಚಂದ್ರಕಾಂತಯ್ಯ ಕಲ್ಯಾಣಮಠ ಹೇಳಿದರು
ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ
ಶ್ರೀ ಶಾಂತಾಬಾಯಿ ಅಡವಿರಾವ್ ಕುಲಕರ್ಣಿ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಹಿರೇವಂಕಲಕುಂಟಾ ಗ್ರಾಮಕ್ಕೆ ಉನ್ನತ ಶಿಕ್ಷಣ ಇಲಾಖೆಯ ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸರಕಾರಿ ಪ್ರಥಮ ದಜೆ೯ ಮಹಾ ವಿದ್ಯಾಲಯಕ್ಕೆ ಒಂದನೇ ಅಂತಸ್ತಿನಲ್ಲಿ ಖಾಲಿಯಿರುವ ಜಾಗದಲ್ಲಿ 2 ಭೋಧನಾ ಕೊಠಡಿ 1 ಗ್ರಂಥಾಲಯ ನ್ಯೂತನ ಕಟ್ಟಡಕ್ಕೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು ಈ ಹಿಂದೆ
- ನಮ್ಮ ಪ್ರೌಢ ಶಾಲೆ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಸರಕಾರಿ ಉನ್ನತ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಅದು ನಮ್ಮ ಗೆ ಸಂತೋಷದ ವಿಷಯ ಪ್ರತಿಯೊಬ್ಬ ಪಾಲಕರು ಮಕ್ಕಳಿಗೆ ಆಸ್ತಿ ಮಾಡುವದು ಬೇಡ ಮಕ್ಕಳನ್ನೇ ಆಸ್ತಿಯಾಗಿ ಮಾಡಬೇಕು ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೂಡಿಸುವದರ ಜೊತೆಗೆ ಒಳ್ಳೆಯ ನೆಡ ನುಡಿ ಸಂಸ್ಕೃತಿ ಹಿರಿಯರಿಗೆ ಗೌರವ ಕೊಡುವದನ್ನು ಕಲಿಸಬೇಕು ವಿದ್ಯಾರ್ಥಿಗಳ ಜೀವನ ಬಂಗಾರದ ಬದುಕು ಮತ್ತು ನ್ಯೊತನವಾಗಿ ಕೆ ಹೆಚ್ ಬಿ ಸಂಸ್ಥೆಯವರು ನಿರ್ಮಾಣ ಮಾಡುವ ಈ ಕಾಮಗಾರಿ ವ್ಯವಸ್ಥಿತವಾಗಿ ಹಾಗು ಉತ್ತಮ ಗುಣಮಟ್ಟದಿಂದ ನಿರ್ಮಾಣವಾಗಬೇಕು ಎಂದರು ತಾಲೂಕಿನ ಹಿರೇವಂಕಲಕುಂಟಾ ಗ್ರಾಮವು ಈ ಮಸಾರಿ ಭಾಗದ ಗ್ರಾಮೀಣ ಜನತೆಗೆ ಹೃದಯ ಭಾಗವಾಗಿರುವ ಹಿನ್ನೆಲೆಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಅತ್ಯಂತ ಮಹತ್ವದ್ದಾಗಿದೆ.
ಶೈಕ್ಷಣಿಕ ಗುಣಮಟ್ಟವು ಉತ್ತಮವಾಗಿದೆ ಕಟ್ಟಡ ನಿರ್ಮಾಣಕ್ಕೆ 1 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುವದು ಈಗ ಇರುವ ಜಾಗದಲ್ಲಿ ಕಟ್ಟಡಗಳನ್ನು ಸಮರ್ಪಕವಾಗಿ ನಿರ್ಮಾಣ ಮಾಡಬೇಕು ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಎಲ್ಲಾ ಮಕ್ಕಳು ಸರಕಾರಿ ಉನ್ನತ ಹುದ್ದೆಗಳನ್ನು ಅಲಂಕರಿಸಿಲಿ ಕಾಲೇಜ್ ಆಕರ್ಷಣೆ, ಹಾಗೂ ಉತ್ತಮ ಶೈಕ್ಷಣಿಕ ಕೇಂದ್ರವಾಗಿ
ಈ ಕಾಲೇಜು ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರುಗಳಾದ ಕಾಶಿಮಸಾಬ ಗುಬ್ಬಿ, ಗುರುರಾಜ್ ಅಡವಿರಾವ್ ಕುಲಕರ್ಣಿ, ಮಂಜುನಾಥ ಮಲ್ಲಪ್ಪ ಬಂಗಾರಿ, ವೀರೇಶ ಕಾಯಿ, ಹನುಮೇಶ ಚಿಣಗಿ,ಬಸಯ್ಯ ಹಿರೇಮಠ, ಬಸವರಾಜ್ ಸಜ್ಜನ. ನಿರುಪಾದಿ ದಾಸರ, ಹನುಮಂತಪ್ಪ ಗುರಪ್ಪ ಮಡಿವಾಳ ಪ್ರಾಂಶುಪಾಲ ಸುಮಂತ ಕುಮಾರ ಜೈನ್ , ಕೆ,ಹೆಚ್, ಬಿ, ಎಇಇ ಅನ್ನಪೂರ್ಣ ಗೊರೆಬಾಳ, ಎಇ ರಮೇಶ ,ಗುತ್ತಿಗೆದಾರ ಮುನೀರ್ ಅಹಮದ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಬಸವಂತಪ್ಪ ಕೆ ಹೊಸಳ್ಳಿ, ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಸಂದೀಪ ಸಾಳುಂಕೆ , ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಕುಮಾರಿ ಭವ್ಯ, ಬಸವರಾಜ ಬೇವಿನಕಟ್ಟಿ,
ರತ್ನಾ ಕೆಂಭಾವಿಮಠ, ನಾಗಪ್ಪ, ಹಾಗೂ ಕಾಲೇಜ್ ಅತಿಥಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು.ವಿದ್ಯಾರ್ಥಿನಿಯರು ಮತ್ತು ಇತರರು ಭಾಗವಹಿಸಿದ್ದರು