
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೇಳೆಸಿಕೊಳ್ಳಿ – ರವಿಚೇಳ್ಳಗುರ್ಕಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, ೦೮- ವಿದ್ಯಾರ್ಥಿಗಳು ಓದಿನಲ್ಲಾಗಲಿ ಮತ್ತು ಕ್ರೀಡೆಯಲ್ಲಾಗಲಿ ಸ್ಪರ್ಧಾತ್ಮಕ ಮನೋಭಾವದಿಂದ ಮುನ್ನಡೆಯಬೇಕು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ಅವರು ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ತಿಕ ಮಾಸದ ನಿಮಿತ್ತ ಶಾರದಾ ಪೂಜೆ, ವಿವಿಧ ಆಟೋಟಗಳಲ್ಲಿ ವಿಜೇತ ಹಾಗೂ ಪ್ರತಿಭಾವಂತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿ ವಿದ್ಯಾರ್ಥಿ ಜೀವನ ಬಂಗಾರವಿದ್ದಂತೆ.ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು.
ಕ್ರೀಡೆಯಲ್ಲಿ ವಿಜೇತ ಮಕ್ಕಳು ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾಗುವಂತ ಕನಸು ಕಾಣಬೇಕು.
ಹೆಸರಾಂತ ಆಟಗಾರರ ಸಾಧನೆ ಕುರಿತು ಪುಸ್ತಕ, ಪತ್ರಿಕೆಗಳನ್ನು ಓದಿ ತಿಳಿಯಬೇಕು. ಅಂತಹ ಪ್ರಸಿದ್ಧ ಆಟಗಾರರ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಮ್ಯೂಜಿಕಲ್ ಚೇರ್ನಲ್ಲಿ ವಿಜೇತರಾದ ಎಂಟನೇ ತರಗತಿ ನೇತ್ರ,ಜೆ.ಪಿ.ಶ್ರಾವಂತಿ,ಏಳನೇ ತರಗತಿ ಉಮಾ ಹಾಗೂ ಆರನೇ ತರಗತಿ ಶಾಂತಿ ಬಹುಮಾನ ಪಡೆದರು.ಪ್ರತಿಭಾವಂತ ಮಕ್ಕಳಾದ ಶಂಕ್ರಮ್ಮ ಹಾಗೂ ಕಾರ್ತಿಕ್ ಗೆ ಬಹುಮಾನ ವಿತರಿಸಲಾಯಿತು.ಶಿಕ್ಷಕರಾದ ರಾಮಾಂಜಿನೇಯ, ವಿದ್ಯಾರ್ಥಿ ಪ್ರತಿನಿಧಿ ಮಹೇಶ ಮುಂತಾದವರು ಉಪಸ್ಥಿತರಿದ್ದರು.