
ವಿದ್ಯಾವಂತ ಸಮಾಜ ನಿರ್ಮಾಣ ಮಾಡುವುದೇ ಪ್ರಥಮ ಆದ್ಯತೆ : ಡಾ.ಟಿ.ಹನುಮಂತ ರೆಡ್ಡಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 2- ಸಂಪೂರ್ಣ ವಿದ್ಯಾವಂತ ಸಮಾಜ ಮಾಡುವುದಕ್ಕೆ, ಪ್ರತಿಷ್ಠಿತ ವಿ ವಿ ಸಂಘದ ಪ್ರಥಮ ಆದ್ಯತೆ ಆಗಿರುವುದಾಗಿ, ಆರ್ ವೈ ಎಂ ಇ .ಸಿ, ಕಾಲೇಜಿನ, ಪ್ರಾಚಾರ್ಯ, ಡಾ.ಟಿ. ಹನುಮಂತರೆಡ್ಡಿ ಹೇಳಿದರು.
ನಮ್ಮ ಪತ್ರಿಕೆಯ ಪ್ರತಿನಿಧಿಯೊಂದಿಗೆ ಅವರು ಮಾತನಾಡುತ್ತಾ, ಇಂದಿನ ಸಾಂಕೇತಿಕ ಯುಗಕ್ಕೆ ಅನುಗುಣವಾಗಿ ಬೇಕಾದ ಹೊಸ ಹೊಸ ಕೋರ್ಸುಗಳನ್ನು ಪ್ರವೇಶವಿಡುತ್ತಾ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಲು ಶ್ರಮಿಸುತ್ತಿರುವದಾಗಿ ತಿಳಿಸಿದ್ದಾರೆ.
ಕಳೆದ ವರ್ಷ ನಮ್ಮ ಕಾಲೇಜಿನಲ್ಲಿ ನೂತನವಾಗಿ ಪ್ರವೇಶವಿಟ್ಟಿರುವ ಆರ್ಟಿಫಿಶಿಯಲ್ ಇಂಜಿನಿಯರಿಂಗ್, ಮತ್ತು ಡಾಟಾ ಸೈನ್ಸ್ ಕೋರ್ಸುಗಳಲ್ಲಿ ಉತ್ತಮ ಫಲಿತಾಂಶವನ್ನು ಕಂಡಿರುವದಾಗಿ ತಿಳಿಸಿದರು. ಹೊಸ ತಾಂತ್ರಿಕತೆ ಬೆಳದಾಗೆಲ್ಲ ಹೊಸ ಹೊಸ ಉದ್ಯೋಗ ಅವಕಾಶಗಳು ಸಿಗುತ್ತವೆ ಎಂದು ಸ್ಪಷ್ಟನೆ ಮಾಡಿದರು. ಆದರೆ ಆ ಸವಾಲನ್ನು ಯುವತ ಸ್ವೀಕರಿಸಲು ಅಗತ್ಯವಾಗುವ ಶಿಕ್ಷಣ ವಿದ್ಯಾ ಸಂಸ್ಥೆಗಳು ಒದುಗುಸುವ ಅವಶ್ಯಕತೆ ಇದೆ ಎಂದರು.
ವಿ ವಿ ಸಂಘ ಆಡಳಿತದಲ್ಲಿ ನಡೆಯುತ್ತಿರುವ ವಿದ್ಯಾ ಸಂಸ್ಥೆಗಳ ಪ್ರಥಮ ಆದ್ಯತೆ ವಿದ್ಯಾವಂತ ಸಮಾಜ ಸ್ಥಾಪನೆ ಪ್ರಥಮ ಆದ್ಯತೆ ಆಗಿದೆ ಎಂದರು. ಆರ್ ವೈ ಈ ಸಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಪ್ರಪಂಚದ ನಾನಾ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವದಾಗಿ ತಿಳಿಸಿದರು.
ವಿದ್ಯಾರ್ಥಿಗಳಿಗೆ ಬೇಕಾದ, ಲೈಬ್ರರಿ, ನುರಿತ ತಜ್ಞರಿಂದ ಪಾಠ್ಯಾಂಶಗಳ ಬೋಧನೆ, ಎಲ್ಲಾ ವರ್ಗಗಳಿಗೆ ಅನುಕೂಲಕರವಾಗುವಂತ ಕಾಲೇಜಿ ಶುಲ್ಕಗಳು ಮ್ಯಾನೇಜ್ಮೆಂಟ್ ಒದಗಿಸುತ್ತಿರುವದಾಗಿ ತಿಳಿಸಿದರು. ತಮ್ಮ ಕಾಲೇಜಿಗೆ nac ಎ ಗ್ರೇಡ್ ನೀಡಿರುವದಾಗಿ ತಿಳಿಸಿದರು.
ಅಷ್ಟೇ ಅಲ್ಲದೆ ಕೋರ್ಸು ಮುಗಿಸುವ ವಿದ್ಯಾರ್ಥಿಗಳ ಉದ್ಯೋಗ ಅವಕಾಶಗಳಿಗಾಗಿ ಟಿಸಿಎಸ್, ಕಗ್ನಿಜೆಂಟ್, ಕ್ಯಾಪ್ ಜಮಿನಿ, ಬಿಇಎಲ್ ಮಾದರಿ 60 ಕಂಪನಿಗಳ ಸಹಯೋಗದೊಂದಿಗೆ ಪ್ರತಿ ವರ್ಷ ಉದ್ಯೋಗ ಕ್ಯಾಂಪಸ್ಗಳು ನಡೆಯುತ್ತದೆ ಎಂದು ತಿಳಿಸಿದರು..
ಕಳೆದ ವರ್ಷ ಎಂಜಿನಿಯರಿಂಗ್ ಕೋರ್ಸ್ಗಳು 100 ಪರ್ಸೆಂಟ್ ರಿಸಲ್ಟ್ ಸಾಧಿಸುವದಾಗಿ,ತಿಳಿಸಿದರು. ಇಷ್ಟೆಲ್ಲಾ ವಿಜಯಗಳು ಸಾಧಿಸಲು, ಕಾರಣರಾದ ಕಾಲೇಜಿನ ಮ್ಯಾನೇಜ್ಮೆಂಟ್ ಕಮಿಟಿ ಮತ್ತು ಉಪನ್ಯಾಸಕರು ಬೋಧನೆ ತರ ಸಿಬ್ಬಂದಿಯಿಂದ ನನಗೆ ಸಾಧ್ಯವಾಗಿದೆ ಎಂದು ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ, ಹನುಮಂತರೆಡ್ಡಿ ಅವರು ತಿಳಿಸಿದರು.