
ವಿಶ್ವ ಪ್ರಸಿದ್ಧ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ : ವ್ಯಾಪಾರಿಗಳು ನಿರಾಳ
ಕರುನಾಡ ಬೆಳಗು ಸುದ್ದಿ
ವಿಜಯನಗರ, 25- ರಣ ಬಿಸಿಲಿನಿಂದ ಪ್ರವಾಸಿಗರಿಲ್ಲದೆ ಹಂಪಿ ಬಿಕೋ ಎನ್ನುತ್ತಿತ್ತು. ಇದರಿಂದ ಪ್ರವಾಸೋದ್ಯಮವನ್ನು ನಂಬಿಕೊಂಡ ಜನರಿಗೆ ತುಂಬಾ ತೊಂದರೆ ಯಾಗಿತ್ತು.
ಇತ್ತೀಚಿಗೆ ಮಳೆಯಾಗುತ್ತಿರುವುದರಿಂದ ವಾತಾವರಣ ತಂಪಾಗಿ ಜೊತೆಗೆ ಸರಣಿ ರಜೆಗಳು ಇರುವುದರಿಂದ ಹಂಪಿಗೆ ಪ್ರವಾಸಿಗರು ಹೆಚ್ಚಿನ ಮಟ್ಟದಲ್ಲಿ ಬರುತ್ತಿದ್ದು ಇದರಿಂದ ಪ್ರವಾಸೋದ್ಯಮವನ್ನು ನಂಬಿಕೊಂಡ ಬೀದಿಬದಿ ವ್ಯಾಪಾರಿಗಳು, ಆಟೋ ಚಾಲಕರು, ಪ್ರವಾಸಿ ಮಾರ್ಗದರ್ಶಿಗಳು, ಸಣ್ಣ ಪುಟ್ಟ ಹೋಟೆಲ್ ಉದ್ಯಮಗಳಿಗೆ ನಿಟ್ಟಿಸಿರುವ ಬಿಟ್ಟಿದ್ದಾರೆ. ಸಣ್ಣಪುಟ್ಟ ಅಂಗಡಿಗಳನ್ನು ಮಾಡಿಕೊಂಡವರಿಗೆ ಪ್ರವಾಸಿಗರಿಂದ ಜೀವನ ತುಂಬಿಸಿಕೊಳ್ಳಲು ಸಾಧ್ಯವಾಗಿತ್ತು, ಬೇಸಿಗೆ ಸಮಯದಲ್ಲಿ ಹೋಲಿಸಿದರೆ ಶನಿವಾರ ಅತೀ ಹೆಚ್ಚು ಪ್ರವಾಸಿಗರು ಹಂಪಿಗೆ ಭೇಟಿ ನೀಡಿದ್ದಾರೆ, ಕಷ್ಟದ ಸಂದರ್ಭದಲ್ಲಿ ಪ್ರವಾಸಿಗರು ಹಂಪಿಗೆ ಭೇಟಿ ನೀಡಿರುವುದರಿಂದ ಪ್ರವಾಸಿ ಗೈಡ್ ಗಳಿಗೆ ಸ್ವಲ್ಪ ನೆಮ್ಮದಿಯಾಗಿದೆ.
ಸರಣಿ ರಜೆ ಇರುವುದರಿಂದ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದ್ದು, ಪ್ರವಾಸೋದ್ಯಮವನ್ನು ನಂಬಿಕೊಂಡವರಿಗೆ ಸ್ವಲ್ಪ ನಿರಾಳವಾಗಿದೆ ಪ್ರವಾಸಿ ಗೈಡ್ ಗಳಿಗೆ, ಆಟೋ ಚಾಲಕರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಪ್ರವಾಸಿಗರ ಹೆಚ್ಚಿನ ಮಟ್ಟದಲ್ಲಿ ಬಂದಿರುವುದರಿಂದ ತುಂಬಾ ಅನುಕೂಲವಾಗಿದೆ ಹಂಪಿ ಪ್ರವಾಸಿ ಮಾರ್ಗದರ್ಶಿ ವಿರೂಪಾಕ್ಷಿ ಹೇಳಿದರು.