
ಶರಣು ಗಡ್ಡಿಗೆ ಗಿಣಿಗೇರಿ ನಾಗರಿಕ ಹೋರಾಟ ಸಮಿತಿಯ ಬೆಂಬಲ
ಕರುನಾಡ ಬೆಳಗು ಸುದ್ದಿ
ಗಿಣಿಗೇರಾ, 22- ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಶರಣು ಗಡ್ಡಿಯವರು ಗಿಣಿಗೇರಿ ಗ್ರಾಮದಲ್ಲಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು
ಗಿಣಿಗೇರಾ ಗ್ರಾಮ ಕೈಗಾರಿಕಾ ಕೇಂದ್ರದ ಸ್ಥಾನವಾಗಿದೆ. ನೂರಾರು ಜನ ವಲಸೆ ಕಾರ್ಮಿಕರು ಇಲ್ಲಿ ಜೀವ ನಡೆಸಲು ಒಂದು ಕಡೆ ಬರುತ್ತಿದ್ದರೆ?ಇಲ್ಲಿರುವ ನಿರುದ್ಯೋಗಿ ಯುವಕರಿಗೆ ಕೆಲಸದ ಅಭದ್ರತೆ ಹೆಚ್ಚಾಗುತ್ತಿದೆ. ಎರಡು ನೂರಕ್ಕೂ ಹೆಚ್ಚು ಕಂಪನಿಗಳು ಈ ಭಾಗದಲ್ಲಿದ್ದು ಕಂಪನಿಗೆ ಜಮೀನಿ ನೀಡಿದವರ ಪರಿಸ್ಥಿತಿ ಬೀದಿಪಾಲಾಗಿ ಬಿಡಿಗಾಸಿಗೆ ಕೊಟ್ಟ ಭೂಮಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಸೈಟುಗಳಾಗಿ ಮಾರ್ಪಾಡಾಗುತ್ತಿವೆ ಎಂದರು.
ಕೆಲಸ ಕೊಡುವ ಭರವಸೆಗಳು ಸುಳ್ಳಾಗಿವೆ. ಕಂಪನಿ ಪಕ್ಕದಲ್ಲಿರುವ ಭೂಮಿ ಹಾರುವ ಬೂದಿ, ಕಲುಷಿತ ಹೊಗೆಯಿಂದ, ಬೆಳೆದ ಫಸಲು ರೈತರ ಬದುಕನ್ನು ಸರ್ವನಾಶ ಮಾಡಿದೆ. ಇನ್ನೊಂದು ಕಡೆ ಜನರ ಆರೋಗ್ಯ ದಿನ ನಿತ್ಯ ಹದಗೆಡುತ್ತಿದೆ. ಕಂಪನಿಯಿಂದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಆರೋಗ್ಯ,ಶಿಕ್ಷಣ, ಸ್ವಚ್ಛತೆ, ಅರಣ್ಯ ಬೆಳೆಸುವುದು, ಶುದ್ಧ ಕುಡಿಯುವ ನೀರು, ಮುಂತಾದ ಕಾರ್ಯಕ್ರಮಗಳನ್ನು ಕೈಗೊಂಡಿಲ್ಲ. ಕಂಪನಿಯಿಂದ ಸಿಎಸ್ಆರ್ ನಿಧಿ ಇದ್ದರೂ ಸರಿಯಾಗಿ ಬಳಕೆ ಆಗಿಲ್ಲ. ನಮ್ಮ ಪಕ್ಷವೂ ನಿರಂತರ ಬೃಹತ್ ಕೈಗಾರಿಕೆಗಳಲ್ಲಿ ಸ್ಥಳೀಯ ಯುವಕರಿಗೆ ಕೆಲಸ ಕೊಡಿಸಬೇಕು ನಿರಂತರ ಗಿಣಿಗೇರಿ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಗಿಣಿಗೇರಿ ನಾಗರಿಕ ಹೋರಾಟ ಸಮಿತಿ ಹೆಸರಲ್ಲಿ ಜನ ಹೋರಾಟವನ್ನು ಕಟ್ಟುತ್ತಿದ್ದಾರೆ ಎಂದರು.
ಆರೋಗ್ಯ ಕೇಂದ್ರ ಅಗತ್ಯ ಆರೋಗ್ಯ ಸೌಲಭ್ಯ, ಮುಖ್ಯ ರಸ್ತೆ , ದೂಳ ನಿಯಂತ್ರಣ, ಸಾರಿಗೆ ವ್ಯವಸ್ಥೆ, ರಸ್ತೆ ಪಕ್ಕದಲ್ಲಿ ಹೆಚ್ಚಿನ ಮರಗಳನ್ನು ನೆಡುವುದು , ಆರೋಗ್ಯ ತಪಾಸಣೆ ಮಾಡುವುದು ಹಾಗೂ ಗಿಣಿಗೇರಿ ಪಿಯುಸಿ ಕಾಲೇಜ್ ಅಗತ್ಯ ಇರುವಷ್ಟು ಹಾಸ್ಟೆಲ್ ಸೌಲಭ್ಯ , ಉದ್ಯೋಗ ಖಾತ್ರಿ ಕೆಲಸವನ್ನು ಕನಿಷ್ಠ 200 ದಿನಕ್ಕೆ ಹೆಚ್ಚಿಸಲು, ಕನಿಷ್ಠ ಕುರಿ 600 ಕೊಡಬೇಕೆಂದು ಆಗಿರಬಹುದು, ಕಾರ್ಮಿಕರಿಗೆ ಕನಿಷ್ಠ ವೇತನ, ಇ ಎಫ್, ಪಿಎಫ್, ಆರೋಗ್ಯ ವಿಮೆ, ಗಂಗಾವತಿ ಸರ್ಕಲ್ ಇಂದ ಆರೋಗ್ಯ ಕೇಂದ್ರಕ್ಕೆ ಭೀಮನೂರು, ಕುಟಗನಹಳ್ಳಿ, ಗಬ್ಬೂರು,ಹಾಲಳ್ಳಿ ರಸ್ತೆ ಕೂಡಲೇ ಡಾಂಬರೀಕರಣ ಮಾಡಲು ಅಗ್ರಹಿಸಿ ಗಿಣಿಗೆರೆ ನಾಗರಿಕ ಹೋರಾಟ ಸಮಿತಿ ಹೆಸರಲ್ಲಿ ಯಶಸ್ವಿ ಹೋರಾಟಗಳೊಂದಿಗೆ ಜನರ ಚಳುವಳಿಯನ್ನು ಕಟ್ಟುವ ಸಂದರ್ಭದಲ್ಲಿ ಪಾರ್ಲಿಮೆಂಟರಿ ಚುನಾವಣೆಯನ್ನು ಹೋರಾಟದ ಭಾಗವೆಂದು ಪರಿಗಣಿಸಿರುವ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷವನ್ನು ಮತನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗಿಣಿಗೇರಿ ನಾಗರಿಕ ಹೋರಾಟ ಸಮಿತಿಯ ಮುಖಂಡರಾದ ಮಂಗಳೇಶ ರಾಥೋಡ್, ಮೌನೇಶ್ ಹರಿಗೇರಿ, ಗಣೇಶ್, ಮಲ್ಲಿಕಾರ್ಜುನ್, ಎಸ್ ಯು ಸಿ ಐ ಮುಖಂಡರಾದ ಶರಣು ಪಾಟೀಲ್, ಮಂಜುಳಾ, ಗಂಗರಾಜು ಆಳ್ಳಳ್ಳಿ,
ಗಿಣಿಗೇರಾ ಕಾರ್ಮಿಕ ಮುಖಂಡರು,ದಲಿತ ಮುಖಂಡರು, ಹಾಗೂ ಹಿರಿಯರು, ವರ್ತಕರು ವಿದ್ಯಾರ್ಥಿ ಯುವ ಜನರು ಭಾಗವಹಿಸಿದ್ದರು.