
ಶಾಂತಿಯುತವಾಗಿ ಮೊಹರಂ ಹಬ್ಬ ಆಚರಿಸಿ : ಸಿದ್ದಲಿಂಗಪ್ಪಗೌಡ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 4- ಎಲ್ಲಾ ಹಬ್ಬಗಳು ಸೌರ್ಹದತೆ ಸಲುವಾಗಿ ಆಚರಿಸುತ್ತವೆ. ಶಾಂತಿಯುತವಾಗಿ-ಮೊಹರಂ ಹಬ್ಬ ಆಚರಿಸಲು ಕೈ ಜೋಡಿಸಿ ಎಂದು ಪೋಲಿಸ ಉಪವಿಭಾಗಧಿಕಾರಿ ಸಿದ್ದಲಿಂಗಪ್ಪಗೌಡ ಪಾಟೀಲ ಹೇಳಿದರು.
-ನಗರದ ಪೋಲಿಸಠಾಣೆಯಲ್ಲಿ ಮೋಹರಂ ಹಬ್ಬದ ಪೂರ್ವಭಾವಿ ಶಾಂತಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿ ಹಬ್ಬಗಳಲ್ಲಿ ಗಲಾಟೆ ಮಾಡುವವರ ವಿರುದ್ದ ಕಠಿಣ ಕ್ರಮ ಜರುಗಿಸುತ್ತವೆ. ನಗರದಲ್ಲಿ ೩೭ ಕಡೆ ಅಲ್ಲಾಯಿ ಪಂಜುಗಳನ್ನು ಸ್ಥಾಪಿಸುತ್ತಿದ್ದರಿ. ಕಡ್ಡಾಯವಾಗಿ ಪರವಾನಿಗೆ ತೆಗೆದುಕೊಳ್ಳಬೇಕು.ಇಲ್ಲದಿದ್ದರೇ ಆಗುವ ಸಣ್ಣ ಪುಟ್ಟ ಲೋಪ ದೋಷಗಳಿಗೆ ಮುಜಾವರಗಳು ಹೋಣೆಯಾಗುತ್ತಿರಿ ಎಚ್ಚರದಿಂದ ಹಬ್ಬ ಆಚರಿಸಿ ಎಂದರು.
ನಗರ ಪೋಲಿಸ ಠಾಣೆ ಪಿಐ ಪ್ರಕಾಶ ಮಾಳಿ ಮಾತನಾಡಿ ಶಾಂತಿಯುತವಾಗಿ ಹಬ್ಬ ಆಚರಿಸಿದರೆ ಪೋಲಿಸ ಇಲಾಖೆಯಿಂದ ಸಹಕಾರ ನಿರಂತರವಾಗಿರುತ್ತದೆ. ಗಲಾಟೆ ಮಾಡಲು ಅವಕಾಶವಿಲ್ಲ.ಕಾನೂನು ಕೈಗಳು ದೊಡ್ಡದಾಗಿರುತ್ತವೆ. ಮುಜಾವರಗಳುಎಚ್ಚರವಹಿಸಬೇಕು ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಹನುಮಂತಪ್ಪ ನಾಯಕ ಜೋಗದ, ದುರುಗಪ್ಪ ದಳಪತಿ ಜೋಗದ,ಸಜ್ಜಾದ ಹೈದರ ಮುಂತಾದವರು ಅನಿಸಿಕೆ ವ್ಯಕ್ತಪಡಿಸಿದರು.
ನಗರ ಪೋಲಿಸಠಾಣೆ ಪಿಎಸ್.ಐ ನಾಗರಾಜ ಹಾಗೂ ನಗರದದ ೩೭ಕ್ಕೂ ಹೆಚ್ಚು ಮುಜಾವರಗಳು, ಪಿಸಿಗಳಾದ ಮಹೇಶ,ರಮೇಶ,ಶ್ರೀಶೈಲ ಕಂದಕೂರ ಉಪಸ್ಥೀತರಿದ್ದರು.