
ನಟ ಶರಣ್ ನೃತ್ಯಕ್ಕೆ ಸಂಭ್ರಮಿಸಿದ ಜನ
ಶಾರದಾ ಪರ್ವದಲ್ಲಿ ಸಾಂಸ್ಕೃತಿಕ ಲೋಕ ಅನಾವರಣ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,೧೨- ಉತ್ತರ ಕರ್ನಾಟಕದ ಜನ ಜೀವನದ ಹುಮಸ್ಸಿಗೆ ಹೆಸರಾದವರು , ಪಾಟೀಲ ಸಹೋದರರು ಈ ಭಾಗದಲ್ಲಿ ಗುಣಮಟ್ಟದ ಶಾಲೆ ನಿರ್ಮಿಸಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ ಎಂದು ನಟ ಶರಣ್ ಹೇಳದರು.
ಅವರು ರವಿವಾರದಂದು ಕಿಡದಾಳದ ಬಳಿಯಿರುವ ಶಾರದಾ ಇಂಟರ್‌ನ್ಯಾಷನಲ್ ಶಾಲೆ, ಚಿಣ್ಣರ ಲೋಕ ಹಾಗೂ ಪಿಯು ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಶಾರದಾ ಪರ್ವ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಉದ್ಘಾಟಸಿ ಮಾತನಾಡಿದರು.
ಮಕ್ಕಳಲ್ಲಿ ಪ್ರತಿಭೆ ಹೇಗೆ ಅರಳುತ್ತದೆ ಎನ್ನುವುದೇ ಗೊತ್ತಾಗುವುದಿಲ್ಲ. ನಾನು ಶಾಲೆಯ ಕಾರ್ಯಕ್ರಮಗಳಲ್ಲಿ ಮಾಡುತ್ತಿದ್ದ ನೃತ್ಯವೇ ನನ್ನೊಳಗೊಬ್ಬ ಕಲಾವಿದನನ್ನು ಬೆಳೆಯುವಂತೆ ಮಾಡಿತು. ಇಂಥ ಕಾರ್ಯಕ್ರಮಗಳು ನಿಮ್ಮ ಬದುಕು ರೂಪಿಸುತ್ತವೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ‘ಹುಟ್ಟಿದರೇ ಕನ್ನಡ ನಾಡಿನಲ್ಲಿ ಹುಟ್ಟಬೇಕು’, ‘ನೀನೇ ರಾಜಕುಮಾರ’ ಹಾಗೂ ಕಾಂತಾರ ಸಿನಿಮಾದ ಹಾಡುಗಳಿಗೆ ಮಕ್ಕಳ ಪೋಷಕರು ಹಾಗೂ ಜನ ಚಪ್ಪಾಳೆಯ ಬಹುಮಾನ ಗಿಟ್ಟಿಸಿಕೊಂಡರು.
ಶರಣ್ ಮಾಡಿದ ನೃತ್ಯಕ್ಕೆ ಜನ ಸಂಭ್ರಮಿಸಿದರು.ಸಂಸ್ಥೆಯ ಶಾಲೆಯ ಕಾರ್ಯಕಾರಿಣಿ ನಿರ್ದೇಶಕ ಎಂ. ಶಿವಪ್ರಕಾಶ್, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕಿರಣ್ ಪಾಟೀಲ್, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಸ್‌ಪಿ ಯಶೋಧಾ ವಂಟಗೋಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.