IMG-20240209-WA0003

ಕೆ.ಆರ್.ನಗರ ಶಾಸಕ ಡಿ.ರವಿಶಂಕರ. ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ನೀಡುವಂತೆ ಅಹಿಂದ ಯುವ ವೇದಿಕೆ ಆಗ್ರಹ

ಕರುನಾಡ ಬೆಳಗು ಸುದ್ದಿ

ಹೊಸಪೇಟೆ ,_09-   ಕೆ.ಆರ್.ನಗರ ಶಾಸಕ ಡಿ.ರವಿಶಂಕರ*. ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಹೊಸಪೇಟೆ ಅಹಿಂದ ಯುವ ವೇದಿಕೆ ಆಗ್ರಹಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅಹಿಂದ ಯುವ ವೇದಿಕೆ ಅಧ್ಯಕ್ಷ ದಲ್ಲಾಲಿ ಕುಬೇರ, ಶಾಸಕ ಡಿ.ರವಿಶಂಕರ ಅವರು, ಅಹಿಂದ ನಾಯಕರಾಗಿದ್ದು, ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಚಾತುರ್ಯ ಇದೆ. ಅವರನ್ನು ನಿಗಮ ಮಂಡಳಿಯಲ್ಲಿ ಸಿಎಂ ಸಿದ್ದರಾಮಯ್ಯನವರು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು
ಶಾಸಕ ಡಿ.ರವಿಶಂಕರ. ಅವರಿಗೆ ನಿಗಮ ಮಂಡಳಿ
ಅಧ್ಯಕ್ಷರನ್ನಾಗಿ ಮಾಡಿದರೆ ಹಳೇ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಇನ್ನಷ್ಟು ಶಕ್ತಿ ತುಂಬಲು ಕಾರಣವಾಗುತ್ತದೆ,
.  ಪಕ್ಷ ಸಂಘಟನೆಯನ್ನು ಸದೃಢ ಗೊಳಿಸಿದರು. ಸಿದ್ದರಾಮಯ್ಯನವರು ಸಿಎಂ ಆಗುತ್ತಾರೆ ಎಂಬ ಅಲೆ ಕಂಡು ಬಂತು. ಈ ಎಲ್ಲಾ ಕಾರಣಗಳಿಂದ. ಒಕ್ಕಲಿಗ ಮತಗಳ ಜೊತೆಗೆ ಬಹುತೇಕ ಮುಸ್ಲಿಂ, ದಲಿತ ಮತ್ತು ಹಿಂದುಳಿದ ವರ್ಗದ ಕುರುಬ ಮತಗಳು ದಕ್ಕಿದವು.  ಅದರಿಂದಾಗಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ.
ಬಿಜೆಪಿ, ಜೆಡಿಎಸ್ ಪ್ರಾಬಲ್ಯ ಕುಗ್ಗಿಸಲು ಶಾಸಕ ಡಿ.ರವಿಶಂಕರ. ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ  ನೀಡಿದರೆ ಅಹಿಂದ ಮತಬ್ಯಾಂಕ್ ಭದ್ರಪಡಿಸಿದಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!