
ಶಾಸಕ ಬಿ.ಎಂ.ನಾಗರಾಜ ಅವರ ನಿವಾಸದಲ್ಲಿ ಬಿಜೆಪಿಯ ಮುಖಂಡರು ಕಾಂಗ್ರೆಸ್ ಸೇರ್ಪಡೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 30- ನಗರದ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರ ನಿವಾಸದ ಕಚೇರಿಯಲ್ಲಿ ಸಿರುಗುಪ್ಪ ತಾಲೂಕಿನ ನಡಿವಿ ಗ್ರಾಮದ ಬಿಜೆಪಿಯ ಮುಖಂಡರು ಹಾಗೂ ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷರಾದ ದ್ಯಾವಮ್ಮ ಫಕೀರಪ್ಪ ಬಿಜೆಪಿ ಮುಖಂಡರಾದ ಮರಿ ವೀರಪ್ಪ ಅವರು ಶಾಸಕ ಬಿ ಎಂ ನಾಗರಾಜ್ ಮತ್ತು ಸಿರುಗುಪ್ಪ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು ಶಾಸಕರು ಅವರನ್ನು ಸ್ವಾಗತಿಸಿ ಗೌರವಿಸಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪ ತಾಲೂಕು ಗ್ಯಾರಂಟಿ ಅನುಷ್ಠಾನಗಳ ಸಮಿತಿ ಅಧ್ಯಕ್ಷ ಎಂ ಮಾರುತಿ ವರ ಪ್ರಸಾದ್ ರೆಡ್ಡಿ ಕಾಂಗ್ರೆಸ್ ಮುಖಂಡ ದಮ್ಮೂರು ಸೋಮಪ್ಪ ಸೈಯದ್ ಮೋಹಿಯಿದ್ದೀನ್ ಖಾದ್ರಿ ಗೊರವರ ಶ್ರೀನಿವಾಸ್ ಉಡೆಗೋಳು ಟಿ ನರಸಿಂಹ ನಾಯಕ ಉಲ್ತಿ ಭೀಮಪ್ಪ ನಿಟ್ಟೂರು ಹನುಮಂತಪ್ಪ ನಗರಸಭಾ ಸದಸ್ಯರಾದ ಆರ್ ನಾಗರಾಜ ಎಚ್ ಗಣೇಶ ಗುರುರಾಜ ನಾಯಕ ಯೇಸು ಸ್ವಾಮಿ ಗಾದಿಲಿಂಗಪ್ಪ ತೆಕ್ಕಲಕೋಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಮತ್ತಿತರ ಮುಖಂಡರು ಇದ್ದರು.