
ಶಾಸಕರಿಂದ ಮುಸ್ಲಿಂ ಸಮಾಜಕ್ಕೆ ಅವಮಾನ : ನಿಯಜಿ ಗಂಭೀರ ಆರೋಪ
ಕರುನಾಡ ಬೆಳಗು ಸುದ್ದಿ
ವಿಜಯನಗರ,18- ನಗರದ ಅಂಜುಮನ್ ಕಮಿಟಿ ಕಚೇರಿಯಲ್ಲಿ ಮಸೀದಿಯ ಮುತ್ತಲಿಗಳು ಸೇರಿದಂತೆ ಮುಸ್ಲಿಂ ಸಮಾಜದ ಹಿರಿಯರು ಮತ್ತು ಯುವ ಮುಖಂಡರು ಸಭೆ ಸೇರಿದ್ದರು.
ಮಾ.14 ರಂದು ಮೊಹಮ್ಮದ್ ಇಮಾಮ ನಿಯಝಿ ಅವರನ್ನು ನಗರದ ಹೂಡ ಅಧ್ಯಕ್ಷರನ್ನಾಗಿ ಮಾಡಿ ಆದೇಶ ಹೊರಡಿಸಿ ಅದೆ ಮಾ.15. ರಂದು ಬೆಳಗ್ಗೆ ಆದೇಶ ಹಿಂಪಡೆದಿದ್ದರು. ಮುಸ್ಲಿಂ ಸಮುದಾಯವನ್ನು ಚುನಾವಣೆಗೆ ಬಳಸಿಕೊಳ್ಳುತ್ತಾರೆ. ಅವರು ಹೇಳಿವ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿಮಾಡುತ್ತೇವೆ. ಅವರಿಗೆ ಅಧಿಕಾರ ಸಿಕ್ಕ ತಕ್ಷಣ ನಮ್ಮ ಸಮಾಜವನ್ನು ಮತ್ತು ನಮ್ಮ ಮುಖಂಡರನ್ನು ಮರೆತು ಹೋಗುತ್ತಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೇವೆ. ನಮ್ಮ ಮುಸ್ಲಿಂ ಓಟುಗಳನ್ನು ಬೈಕಟ್ ಮಾಡುತ್ತೇವೆ ಎಂದು ಮುಸ್ಲಿಂ ಸಮಾಜದ ಯುವ ಮುಖಂಡರು ಶಾಸಕರ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.
ಅಂಜುಮನ್ ಕಮಿಟಿಯ ಅಧ್ಯಕ್ಷರಾದ ಇಮಾಮ ನಿಯಝಿ ಸಭೆಯನಂತರ ಮಾತನಾಡಿ ಹೂಡಾ ಅಧ್ಯಕ್ಷ ಸ್ಥಾನ ಆದೇಶ ಮಾಡಿ 10ಘಂಟೆಗಳಲ್ಲಿ ಹಿಂಪಡೆದಿದ್ದಾರೆ ಈ ಘಟನೆ ಸ್ಥಳೀಯ ಶಾಸಕರಾದ ಗವಿಯಪ್ಪನವರ ಒತ್ತಡ ದಿಂದ ಆದೇಶ ಹಿಂಪಾದೆಯಲಾಗಿದೆ ಎಂದು ತಿಳಿದು ಬಂದಿದೆ. ಇದು ನನಗಾದ ಅವಮಾನವಲ್ಲ ಇಡೀ ಮುಸ್ಲಿಂ ಸಮಾಜಕ್ಕೆ ಮಾಡಿದ ಅವಮಾನ ಎಂದು ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದರು . ಇವತ್ತು ನಮ್ಮ ಸಮುದಾಯ ಕಾಂಗ್ರೇಸ್ ಪಕ್ಷಕ್ಕೆ ಅತೀ ಹೆಚ್ಚು ಮತ ನೀಡಿ ಗೆಲ್ಲಿಸಿದೆ. ಅವರು ಏನು ನಿರ್ಧಾರ ಕೈಗೊಳ್ಳುತ್ತಾರೋ ಅವರಂತೆ ನಾವಿರಬೇಕಾಗುತ್ತದೆ ಸಮುದಾಯಕ್ಕೆ ನಾವು ಹೇಳುವುದಕ್ಕೆ ಆಗುವುದಿಲ್ಲ. ಈ ಕುರಿತು ಹೈಕಮಾಂಡ್ ಗೆ ತಿಳಿಸಿದ್ದೇನೆ ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕು ಎಂದರು.
ಶ್ರೀರಾಮುಲು. (ಮಾತಾಡಿರುವುದು)
ಕೆಲವೊಂದು ರಾಜಕೀಯ ಪಕ್ಷಗಳು ಸಮುದಾಯಗಳನ್ನು ರಾಜಕೀಯಕ್ಕೋಸ್ಕರ ಬಳಸಿಕೊಳ್ಳುತ್ತಾರೆ. ಮತ ಹಾಕುವ ಸಂದರ್ಭದಲ್ಲಿ ಮುಸಲ್ಮಾನರು ಬೇಕು, ಅಧಿಕಾರ ಕೊಡುವ ಸಂದರ್ಭ ಬಂದಾಗ ಅವರನ್ನ ದೂರ ಇಡುವ ಕೆಲಸ ನೆಹರು ಕಾಲದಿಂದಲೂ ನಡೆದು ಬಂದಿರುತ್ತದೆ.
ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿಯು ಪಾಕಿಸ್ತಾನಕ್ಕೆ ಜಿಂದಾಬಾದ್ ಅನ್ನುವವರನ್ನು ನಾವು ಒಪ್ಪಲ್ಲ.ಆದರೆ ಭಾರತ ದೇಶದಲ್ಲಿರುವ ಯಾವುದೇ ಜಾತಿಯ ವ್ಯಕ್ತಿ ಇರಬಹುದು ಭಾರತ ದೇಶಕ್ಕೆ ಜಿಂದಾಬಾದ್ ಎನ್ನುವವರನ್ನು ನಾವು ಸ್ವೀಕರಿಸುತ್ತೇವೆ.
ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವಂತಹ ಕೆಲಸ ಕಾಂಗ್ರೆಸ್ ಪಕ್ಷದ ರಾಜಕಾರಣಿಗಳು ಮಾಡಿಕೊಂಡು ಬಂದಿದೆ. ಇವತ್ತು ಉದಾರಣೆಗೆ ಹೇಳಬೇಕಾದರೆ ಇಮಾಮ್ ನಿಯಾಝಿ 20 ವರ್ಷಗಳ ಕಾಲ ಕಷ್ಟಪಟ್ಟು ಪಕ್ಷಕ್ಕೆ ದುಡಿದಿದ್ದಾರೆ ಮಾ,14ರಂದು ಹೂಡ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿ ಮಾ,15 ರಂದು ಹಿಂಪಡೆದಿದ್ದಾರೆ ಇದರ ಅರ್ಥ ಮುಸ್ಲಿಂ ಜನಾಂಗ ಅಂದರೆ ಇವರು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಬೇರೆ ಯಾವುದೇ ಪಕ್ಷಕ್ಕೆ ಹೋಗಲ್ಲ ಎನ್ನುವ ಅಹಂ ಅವರಲ್ಲಿದೆ. ಇದನ್ನು ಹೋಗಲಾಡಿಸಬೇಕೆಂದರೆ ಜನರು ಜಾಗೃತರಾಗಬೇಕು ಈ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕು.