
ಶಿಕ್ಷಕರ ಸಂಘದ ಕಾರು ಕಳ್ಳತನ
ತಡರಾತ್ರಿ ದೂರು ದಾಖಲು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 21- ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಸಂಘದ ಕಾರು ಕಳ್ಳತನವಾಗಿರುವ ಕುರಿತು ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ರವಿವಾರ ತಡ ರಾತ್ರಿ ತಮ್ಮ ಕಾರು ಕಳ್ಳತನ ವಾಗಿರುವ ಕುರಿತು ದೂರು ನೀಡಲು ಸೋಮವಾರ ಬೆಳಿಗ್ಗೆ ಯಿಂದ ಅಧ್ಯಕ್ಷರು ಪ್ರಯತ್ನಿಸಿದರು ಪೊಲೀಸ್ ರು ಬೇಗನೆ ದೂರು ದಾಖಲಿಸಿ ಕೋಳದೇ ಸತಾಯಿಸಿದರು ಎನ್ನಲಾಗಿದೆ.
ಸೋಮವಾ ರಾತ್ರಿ ಎಫ್ಐಆರ್ ದಾಖಲು ಮಾಡಿದ್ದು . ದೂರಿನಲ್ಲಿ ತಾಲ್ಲೂಕಿನ ಹಲಗೇರಿ ಗ್ರಾಮದಲ್ಲಿ ನನ್ನ ಮನೆಯ ಬಳಿ ನಿಲ್ಲಿಸಲಾಗಿದ್ದ ಸಂಘದ ಕಾರು ಯಾರೊ ಭಾನುವಾರ ಮಧ್ಯರಾತ್ರಿ ಯಾರೊ ಕಾರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಅದು ₹26 ಲಕ್ಷ ಮೌಲ್ಯ ಹೊಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಶಿಕ್ಷಕ ಸಂಘದ ರಾಜ್ಯಾಧ್ಯಕ್ಷರನ್ನು ಇಡಿ ದಿನ ಕಾಯಿಸಿ ಕೊನೆಗೂ ಕೊಪ್ಪಳ ಗ್ರಾಮೀಣ ಠಾಣಾ ಪೋಲಿಸರು ದೂರು ದಾಖಲಿಸಿದ್ದಾರೆ.