
- ಶಿಕ್ಷಣ ಸಂಸ್ಥೆಗಳು ಸಾಮಾಜಿಕ ಬದಲಾವಣೆ ಕೇಂದ್ರಗಳು
ಕರುನಾಡ ಬೆಳಗು ಸುದ್ದಿ
ಹೊಸಪೇಟೆ, 26- ಶಿಕ್ಷಣ ಸಂಸ್ಥೆಗಳು ಸಾಮಾಜಿಕ ಶಕ್ತಿ ಕೇಂದ್ರಗಳು ಆದ್ದರಿಂದ ಸುಸ್ಥಿರ ಅಭಿವೃದ್ಧಿಯ ಶಕ್ತಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶಾಲೆಗಳು ದೃಢವಾದ ಅಡಿಪಾಯದಂತೆ ಕಾರ್ಯನಿರ್ವಹಿಸಬೇಕಾಗಿದೆ ಎಂದು ತಂತ್ರಜ್ಞಾನ ಹಾಗೂ ಬೆಂಗಳೂರಿನ ಸ್ಕಿಲ್ ಲಿಫ್ಟ್ ಸಂಸ್ಥೆಯ ಚೀಪ್ ಮೆಂಟರ್, ಡಾಕ್ಟರ್ ಎಸ್ ಎಂ ಶಶಿಧರ್ ಅಭಿಪ್ರಾಯ ಪಟ್ಟರು.
ಅವರು ಹೊಸಪೇಟೆಯ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಏರ್ಪಡಿಸಿದ ಸುಸ್ಥಿರ ಅಭಿವೃದ್ಧಿಯ ಕುರಿತು ವಿಶೇಷ ತಜ್ಞ ಉಪನ್ಯಾಸ ಕಾರ್ಯಕ್ರಮದಲ್ಲಿಪಾಲ್ಗೊಂಡು ಮಾತನಾಡಿದರು. ಎಳೆಯ ವಯಸ್ಸಿನಲ್ಲಿಯೇ ಸುಸ್ಥಿರತೆಯ ಬೀಜಗಳು ಬಿತ್ತು ಅದು ಅತ್ಯವಶ್ಯ. ಸುಸ್ಥಿರತೆಯ ತತ್ವಗಳನ್ನು ಪಠ್ಯಕ್ರಮ ಮತ್ತು ಪ್ರಾಯೋಗಿಕ ಕಲಿಕೆಗಳಲ್ಲಿ ಸಂಯೋಜಿಸಿ ಜಾಗೃತಿ ಮೂಡಿಸುವುದರ ವಿದ್ಯಾರ್ಥಿಗಳು ಸುಸ್ಥಿರ ವಿಶ್ವ ನಿರ್ಮಾಣಕ್ಕಾಗಿ ಕೆಲಸ ಮಾಡುವಂತೆ ಮಾಡಬೇಕೆಂದರು. ಕಾರ್ಯಕ್ರಮದಲ್ಲಿ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯದ ಪ್ರಿನ್ಸಿಪಾಲ್ ಆದ ಮನೋಹರ್ ಲಾಲ್., ಶಾಲೆಯ ಅಧ್ಯಪಕ ಎಸ್ ಕೆ ಪ್ರಕಾಶ್, ಶಾಲೆಯ ವಿದ್ಯಾರ್ಥಿಗಳು, ಅಧ್ಯಾಪಕರು ಪಾಲ್ಗೊಂಡಿದ್ದರು.