ಕರುನಾಡ ಬೆಳಗು ಸುದ್ದಿ
ಕೊಪ್ಪಳ, 07- ನಗರಕ್ಕೆ ಶೃಂಗೇರಿ ಶಾರದಾ ಪೀಠದ ಪರಮಪೂಜ್ಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಪುರ ಪ್ರವೇಶ ಶ್ರೀ ಶಂಕರ ಸೇವಾ ಸಮಿತಿ ಟ್ರಸ್ಟ್ ನೆತೃತ್ವದಲ್ಲಿ ಸಡಗರ ಸಂಭ್ರಮದಿಂದ ಜರುಗಿತು.
ಶುಕ್ರವಾರ ‘ಮಾ.7ರಂದು ಸಂಜೆ 6 ಗಂಟೆಗೆ ನಗರದ ಈಶ್ವರ ಪಾರ್ಕ್ನಿಂದ ಕಿನ್ನಾಳ ರಸ್ತೆಯಲ್ಲಿರುವ ವಾಸವಿ ಮಂಗಲಭವನದ ತನಕ ಶೋಭಾಯಾತ್ರೆ ಜರುಗಿತು , ಶೋಭಯಾತ್ರೆಯಲ್ಲಿ ವಿವಿಧ ಮಹಿಳಾ ಭಜನಾ ಮಂಡಳಿಗಳು ಹಾಗೂ ವಾದ್ಯಗಳೋಂದಿಗಿ ಜರುಗಿತು.
ಇಂದಿನ ಕಾರ್ಯಕ್ರಮ ; ‘ಮಾರ್ಚ 8ರಂದು ಬೆಳಿಗ್ಗೆ 8 ಗಂಟೆಗೆ ಮಠದ ಅರ್ಚಕರಿಂದ ಚಂದ್ರಮೌಳೇಶ್ವರ ಪೂಜೆ, 10 ಗಂಟೆಗೆ ಕುಷ್ಟಗಿ ರಸ್ತೆಯಲ್ಲಿರುವ ಪದಕಿ ಟೌನ್ಷಿಪ್ ಬಡಾವಣೆಯಲ್ಲಿ ಶಂಕರಮಠದ ನೂತನ ಕಟ್ಟಡದ ಭೂಮಿಪೂಜೆ ನೆರವೇರಲಿದೆ. ಬಳಿಕ ಶ್ರೀಗಳಿಗೆ ಭಕ್ತರಿಂದ ಪಾದುಕಾ ಪೂಜೆ, ವಸ್ತ್ರ ಸಮರ್ಪಣೆ, ಪ್ರಸಾದ, ಫಲ ಮಂತ್ರಾಕ್ಷತೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜರುಗಲಿವೆ.