
ಶ್ರೀಕರಿಯಮ್ಮದೇವಿ ಉತ್ಸವ ಸಂಭ್ರಮದಿಂದ ಜರುಗಿತು
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 31- ಗ್ರಾಮದ ದೇವತೆಯಾದ ಶ್ರೀ ಕರಿಯಮ್ಮದೇವಿ ಉತ್ಸವ ಅತಿ ಸಂಭ್ರಮದಿಂದ ಜರುಗಿತು ತಾಲೂಕಿನ ಉಪ್ಪಲದಿನ್ನಿ ಗ್ರಾಮದ ಗ್ರಾಮದೇವತೆ ಕರಿಯಮ್ಮದೇವಿ ಉತ್ಸವ ಮೂರ್ತಿಯನ್ನು ಹೂತ್ತ ಭಕ್ತರು ವಿವಿಧ ರಾಜ ಬೀದಿಗಳ ಮುಖಾಂತರ ಮೆರವಣಿಗೆ ಸಾಗಿ ಅಮ್ಮನಿಗೆ ಜೈಕಾರ ಕುಗುತ್ತಾ ಹಷ೯ದಿಂದ ಮೆರವಣಿಗೆಯಲ್ಲಿ ಮಹಿಳೆಯರು ಕುಂಭ ಕಳಸ ಕನ್ನಡಿಯೂಂದಿಗೆ ಸಕಲ ವಾದ್ಯ ಮೇಳಗಳೊಂದಿಗೆ ಅತಿ ಸಂಭ್ರಮದಿಂದ ನೇರವೇರಿತು.
ಗ್ರಾಮದೇವತೆ ಜಾತ್ರೆ 3 ವರ್ಷಕ್ಕೊಮ್ಮೆ ನೆಡೆಯುತ್ತದೆ ಹೀಗಾಗಿ ಗ್ರಾಮ ದೇವತೆ ಜಾತ್ರೆಯಲ್ಲಿ ಶ್ರದ್ದಾ ಭಕ್ತಿಯಿಂದ ಪೂಜೆ ನೇರವೇರಿಸಿ ಭಕ್ತರು ದಿಡ್ ನಮಸ್ಕಾರ ಹಾಕುತ್ತಾರೆ ಮತ್ತು ವಿವಿಧ ರೀತಿಯ ಹರಿಕೆ ಗಳನ್ನು ತೀರಿಸಿದರು ನಂತರ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು, ವಿವಿಧ ಗ್ರಾಮದ ಭಕ್ತರು ಮತ್ತು ಇತರರು ಭಾಗವಹಿಸಿದ್ದರು.