
ಮುಧೋಳ ಗ್ರಾಮದಿಂದ ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯಕ್ಕೆ 6ನೇ ವರ್ಷದ ಪಾದಯಾತ್ರೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 29- ಹೋಳಿ ಹುಣ್ಣಿಮೆಯ ಕಾಮನ ದಹನದ ಬೂದಿಯನ್ನು ಹೊಲಕ್ಕೆ ಚೆಲ್ಲಿದ ನಂತರ ಮರುದಿನದಿಂದಲೇ ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ನಾಡಿನಾದ್ಯಂತ ಭಕ್ತರ ಪಾದಯಾತ್ರೆ ಶುರುವಾಗುತ್ತೆ.
ಅದರಂತೆ ಈ ವರ್ಷದ ಪಾದಯಾತ್ರೆಯಲ್ಲಿ ತಾಲೂಕಿನ ಮುಧೋಳ ಗ್ರಾಮದ ಶ್ರೀಶರಣಬಸವೇಶ್ವರ ಸೇವಾ ಸಮಿತಿಯವರು ಮತ್ತು ಭೋವಿ ಸಮಾಜದ ಭಕ್ತರು 6ನೇ ವರ್ಷದಿಂದ ಶ್ರೀ ಶೈಲ ಮಲ್ಲಿಕಾರ್ಜುನ ದೇವರ ದರ್ಶನ ಕ್ಕಾಗಿ ಪ್ರಯಾಣ ಬೆಳೆಸಿದ್ದಾರೆ.
ಇವರು ಶ್ರೇಷ್ಠ ಯುಗಾದಿಯ ನಿಮಿತ್ಯ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ದರ್ಶನಕ್ಕಾಗಿ ಪಾದಯಾತ್ರೆಯ ಮೂಲಕ ಮುಧೋಳ ಗ್ರಾಮದಿಂದ ಯುವಕರು,ಮತ್ತು ಭಕ್ತವೃಂದದವರು ಸೇರಿ ಕಾಲ್ನಡಿಗೆ ಮೂಲಕ ಶ್ರೀಶೈಲದ ಕಡೆ ನಡೆಇವರು. ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನನ ಭಕ್ತಾದಿಗಳು ಕಳಕಪ್ಪ ಹಾದಿಮನಿ, ಶರಣಪ್ಪ ಜಾಡರ್, ಆನಂದ್ ಹಿರೇಮನಿ, ಹನುಮಂತ ಹೊಸಮನಿ, ದುರ್ಗಪ್ಪ ಬೋದೂರು, ಶ್ರೀಕಾಂತ್ ತಳವಾರ, ಇನ್ನು ಹಲವಾರು ಗೆಳೆಯ ಬಳಗದವರು ಪಾದಯಾತ್ರೆ ಮಾಡುವವರು ಮತ್ತು ಇತರರು ಶ್ರೀ ಶೈಲಕ್ಕೆ ಪಾದಯಾತ್ರೆ ಕೈಗೊಂಡಿರುವರು.