IMG_20231106_213543

     ಸಂಗಣ್ಣ ಕರಡಿ ಉಪವಾಸ ಸತ್ಯಾಗ್ರಹ ಅಂತ್ಯ

ಕರುನಾಡ ಬೆಳಗು ಸುದ್ದಿ
ಕೊಪ್ಪಳ, 07- ರೈತರ ಪಂಪ್ ಸೆಟ್ ಪರಿಕರ ಉಚಿತ ವಿತರಣೆಗೆ ಆಗ್ರಹಿಸಿ ನಡೆಸುತ್ತಿರುವ ಸಂಸದ ಸಂಗಣ್ಣ ಕರಡಿಯವರ ಉಪವಾಸ ಸತ್ಯಾಗ್ರಹ ಸಚಿವ ಶಿವರಾಜ ತಂಗಡಗಿ ಅವರ ಬರವಸೆಯಿಂದ ಹಾಗೂ ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಮಧ್ಯಸ್ಥಿಕೆಯಲ್ಲಿ ಅಂತ್ಯ ಗೊಂಡಿತು.
ಮಂಗಳವಾರ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಸಚಿವರು ಮುಖ್ಯಮಂತ್ರಿ ಹಾಗೂ ಇಂಧನ ಸಚಿವರಿಗೆ ದೂರವಾಣಿ ಮೂಲಕ ಮಾತನಾಡಿ. ಇದೇ 9 ರಂದು ಸಚಿವ ಸಂಪುಟ ಸಭೆ ಇದ್ದು ಅಂದು ಸರ್ಕಾರದ ನಿರ್ಧಾರ ಆದೇಶ ಹೊರಡಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ ಮಾತನಾಡಿ ಸೋಲಾರ್ ವ್ಯವಸ್ಥೆ ಬರುವವರೆಗೂ ಹಳೆ ಆದೇಶದಂತೆ ಸರ್ಕಾರ ಸೌಲಭ್ಯ ನೀಡಬೇಕು.
ಸರ್ಕಾರ ಭರವಸೆ ನೀಡಿದೆ ಉಪವಾಸ ಇಲ್ಲಿಗೆ ನಿಲ್ಲಿಸಿ . 9 ರಂದು ಸಚಿವ ಸಂಪುಟ ಸಭೆ ನಿರ್ಣಯಕ್ಕೆ ಕಾದು ನಂತರ ಬಿಜೆಪಿ ಹೋರಾಟ ರೂಪಿಸುವುದಾಗಿ ತಿಳಿಸಿದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ ಹಳೆ ಆದೇಶ 09 ಮುಂದುವರೇಸುವ ಭರವಸೆ ಸಚಿವ ಆದೇಶ ಹೊರ ಬರಬೇಕು ಇಲ್ಲವಾದಲ್ಲಿ ಮತ್ತೆ ಹೋರಾಟದ ಚಿಂತನೆ.
ಜಿಲ್ಲೆಯ ಅಕ್ರಮ ಪಂಪ್ ಸೆಟ್ ಸಕ್ರಮಕ್ಕೆ ಕ್ರಮಕೈಗೋಳ್ಳಬೇಕು ಎಂದು ಎಚ್ಚರಿಸಿದರು. ಸರ್ಕಾರದ ವಿಶ್ವಾಸದ ಮೇಲೆ ಉಪವಾಸ ಅಂತ್ಯ ಗೊಳಿಸವುದಾಗಿ ತಿಳಿಸಿದರು.
ಎರಡು ದಿನಗಳ ಹೋರಾಟಕ್ಕೆ ಬೆಂಬಲಿಸಿದ ಸರ್ವರಿಗೂ ಧನ್ಯವಾದಗಳನ್ನು ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!