
ಸಂಘದ ಎಲ್ಲಾ ಸದಸ್ಯರು ಪ್ರೆಸ್ ಮೀಟ್ ಇನ್ನಿತರ ಕಾರ್ಯಕ್ರಮಗಳಿಗೆ ಬರುವುದು ಬಹಳ ಮುಖ್ಯ : ನಾಗರಾಜ ಬೆಣಕಲ್
ಕರುನಾಡ ಬೆಳಗು ಸುದ್ದಿ
ಕುಕನೂರ, 26- ಸಂಘದ ಎಲ್ಲಾ ಸದಸ್ಯರು ಪ್ರೆಸ್ ಮೀಟ್ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಬರುವುದು ಬಹಳ ಮುಖ್ಯವಾಗುತ್ತದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕುಕುನೂರು ತಾಲೂಕು ಘಟಕದ ಅಧ್ಯಕ್ಷ ನಾಗರಾಜ ಬೆಣಕಲ್ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಇರುವ ಪತ್ರಿಕಾ ಭವನದಲ್ಲಿ ರವಿವಾರ ಸಾಮಾನ್ಯ ಸಭೆ ನಡೆಸಲಾಯಿತು. ಸಾಮಾನ್ಯ ಸಭೆಯಲ್ಲಿ ಕುಕನೂರ ತಾಲೂಕು ಘಟಕದ ಕ ಕಾ ನಿ ಪ ಸಂಘದ ಅಧ್ಯಕ್ಷ ನಾಗರಾಜ ಬೆಣಕಲ್ ಮಾತನಾಡಿ, ಪ್ರೆಸ್ ಮೀಟ್ ಇನ್ನಿತರ ಕಾರ್ಯಕ್ರಮಗಳಿಗೆ ಸಂಘದ ಎಲ್ಲಾ ಸದಸ್ಯರು ಬರುವುದು ಬಹಳ ಮುಖ್ಯ ಪ್ರೆಸ್ ಮೀಟ್ ಇರಲಿ ಕಾರ್ಯಕ್ರಮಗಳೇ ಇರಲಿ ಆ ಸುದ್ದಿಗಳನ್ನು ಎಲ್ಲರೂ ಉತ್ತಮವಾಗಿ ಮಾಡೋಣ ಹಾಗೂ ಸಂಘದ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಈ ಸಭೆಯಲ್ಲಿ ಹೇಳಿರಿ ಎಂದರು.
ಇತ್ತೀಚಿನ ದಿನಗಳಲ್ಲಿ ಟೂ ವೀಲರ್ ಫೋರ್ ವೀಲರ್ ಬೈಕು ಮತ್ತು ವಾಹನಗಳಿಗೆ ಪ್ರೆಸ್ ಎಂದು ಹಾಕಿಕೊಂಡು ನಕಲಿ ಪತ್ರಕರ್ತರ ಬೈಕ್ ಮತ್ತು ವಾಹನಗಳು ಓಡಾಡುತ್ತಿವೆ ಅಂತವರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುವ ಕಾರ್ಯ ಆಗಬೇಕಿದೆ ಎಂದು ಸಂಘದ ಸದಸ್ಯರು ಸಭೆಯಲ್ಲಿ ತಿಳಿಸಿದರು.
ಸಾಮಾನ್ಯ ಸಭೆಯಲ್ಲಿ 2025 ನೇ ವರ್ಷದ ಸದಸ್ಯತ್ವದ ಕಾರ್ಡುಗಳನ್ನು ಅಧ್ಯಕ್ಷರು ಉಪಾಧ್ಯಕ್ಷರು ಜಿಲ್ಲಾ ಸಮಿತಿಯ ಸದಸ್ಯರು ಸೇರಿ ಸದಸ್ಯರುಗಳಿಗೆ ಕಾರ್ಡುಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ವಿರೇಶೆ ಇಟಗಿ, ಗೌರವಾಧ್ಯಕ್ಷ ವೀರಯ್ಯ ಹಿರೇಮಠ, ಖಜಾಂಚಿ ರುದ್ರೇಶ ಆರುಬೆರಳಿನ್, ಅಂಬರೀಶ ಕಂದಗಲ್ ಮಠ, ಚಂದ್ರಕಾಂತ್ ದೊಡ್ಡಮನಿ, ಮುರಾರಿ ಭಜಂತ್ರಿ, ಬಸವರಾಜ ಬಿಡ್ನಾಳ, ಬಸವರಾಜ ಕೊಪ್ಪದ, ಲಕ್ಷ್ಮಣ ಮಂಡಲಗೇರಿ, ಕನಕರಾಯ ಭಜಂತ್ರಿ, ಚಂದ್ರು ಆರುಬೆರಳಿನ್, ರವಿ ಅಗೋಲಿ, ರವಿಕುಮಾರ ಹಳ್ಳಿಕೇರಿ ಇನ್ನಿತರ ಸದಸ್ಯರು ಇದ್ದರು.