
ಸಂಭ್ರಮದ ಕಲ್ಲೂರ ಶ್ರೀ ಕಲ್ಲಿನಾಥೇಶ್ವರ ಕಾರ್ತಿ ಕೋತ್ಸವ
ತಾಯಂದಿರು ಮಕ್ಕಳಿಗೆ ಒಳ್ಳೇಯ ಸಂಸ್ಕಾರ ನೀಡಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ12 – ತಾಯಿಂದಿರು ತಮ್ಮ ತಮ್ಮ ಮಕ್ಕಳಿಗೆ ನಡೆ. ನುಡಿ ವಿದ್ಯೆ ಒಳ್ಳೇಯ ಸಂಸ್ಕಾರ ಕಲಿಸಬೇಕು ಮತ್ತು ಇಡೀ ಜಗತ್ತು ಬದಲಾವಣೆ ಮಾಡುವ ಶಕ್ತಿ ತಾಯಿಗಿದೆ ಎಂದು ಸಂಸ್ಥಾನ ಹಿರೇಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ತಾಲೂಕಿನ ಕಲ್ಲೂರು ಗ್ರಾಮದ ಶ್ರೀ ಕಲ್ಲಿನಾಥೇಶ್ವರ ಕಾರ್ತಿ ಕೋತ್ಸವ ನಿಮಿತ್ಯ ಶ್ರೀ ಕಲ್ಲಯ್ಯಜ್ಜನವರು ಶ್ರೀವೀರಶ್ವರ
ಪುಣ್ಯಾಶ್ರಮ ಗದಗ ಇವರ 2199ನೇ ತುಲಾಭಾರ ಸೇವೆ ಕಲ್ಲೂರು ಗ್ರಾಮಸ್ಥರಿಂದ ಮತ್ತು ಸಂಗೀತ ಹಾಗು ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಗಣ್ಯಮಾನ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶಿ೯ವಚನ ನೀಡಿ ಮಾತನಾಡಿದರು.
ಇಂದಿನ ಕಾಲದ ಯುವಕರು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಗುರು. ಹಿರಿಯರ. ಬಗ್ಗೆ ಗೌರವವಿಲ್ಲ .ಅದಕೋಸ್ಕರ ಯುವಕರು ತಮ್ಮ ತಮ್ಮ ದುಶ್ಚಟಗಳನ್ನು ಬಿಟ್ಟು ಒಳ್ಳೆಯ ಸನ್ ಮಾರ್ಗ ದಲ್ಲಿ ನಡೆದು ಕೊಳ್ಳುವದ ಜೊತೆಗೆ ಇಂತಹ ಧಾರ್ಮಿಕ ಸಂಸ್ಕೃತಿಕ.ದೇವಸ್ಥಾನದ ಜಾತ್ರಾ ಮಹೋತ್ಸವ ಕಾತಿ೯ಕೋತ್ಸವ.ಮಠ.ಮಾನ್ಯಗಳಲ್ಲಿ ನೆಡಿಯುವ ಇಂತಹ ಸಾಮಾಜಿಕ ಕೆಲಸಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಬೇಕು ಭಕ್ತಿಯಿಂದ ತನು. ಮನ. ಧನ.ದೇವರಿಗೆ ನಿಮ್ಮನ್ನು ನೀವು ಅಪಿ೯ಸಿದರೆ ಆ ಕಲ್ಲಿನಾಥೇಶ್ವರ ನಿಮ್ಮನ್ನು ರಕ್ಷಣೆ ಮಾಡುತ್ತಾನೆನಮ್ಮ ದೇಶದಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ನಮ್ಮ ದೇಶ ಬದಲಾವಣೆಯಾಗಿ ಬಲಿಷ್ಠವಾಗಿದೆ. ಹೀಗಾಗಿ ಪ್ರತಿಯೊಬ್ಬ ತಾಯಿಂದಿರು ತಮ್ಮ ಮಗುವಿಗೆ ಸಣ್ಣ ವಯಸ್ಸಿನಲ್ಲಿ ಒಳ್ಳೆಯ ಉತ್ತಮ ಗುಣಮಟ್ಟದ ಶಿಕ್ಷಣ ಕೂಡಿಸುವ ಮೂಲಕ ದೇಶದ ಉತ್ತಮ ಪ್ರಜೆಯನ್ನಾಗಿ ಮಾಡಬೇಕು.
ವೇದಿಕೆಯಲ್ಲಿ ಧರಮುರುಡಿ ಹಿರೇಮಠದ ಶ್ರೀ ಷ.ಬ್ರ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಶ್ರೀ ಮ.ನಿ.ಪ್ರ.ಡಾಕ್ಟರ ಮಹಾದೇವ
ಮಹಾಸ್ವಾಮಿಗಳು ಮುಂಡರಗಿ ಅನ್ನದಾನೇಶ್ವರ ಶಾಖಾಮಠ ಕುಕನೂರ. ಪರಮಪೂಜ್ಯ ಡಾಕ್ಟರ್ ಪಂ ಶ್ರೀ ಕಲ್ಲಯ್ಯಜ್ಜನವರು ಪಿಠಾಧ್ಯಕ್ಷರು ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ ಮತ್ತು ಇತರ ಉಭಯ ಶ್ರೀಗಳು ದಿವ್ಯ ಸಾನಿಧ್ಯವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಲ್ಲೂರು ಗ್ರಾಮದ ಶ್ರೀ ಕಲ್ಲಿನಾಥೇಶ್ವರ ದೇವಸ್ಥಾನಕ್ಕೆ ಬಹಳ ವರ್ಷಗಳ ಇತಿಹಾಸವಿದೆ ಎಲ್ಲರೂ ಒಳ್ಳೆಯ ಮಾರ್ಗದಲ್ಲಿ ಮುಂದೆ ಸಾಗಿರಿ ಮನುಷ್ಯನಿಗೆ ಸಿರಿ ಬಂದಾಗ ಕರೆದು ದಾನವ ಮಾಡು ದಾನ. ಧರ್ಮ. ಪರೋಪಕಾರ. ಭಕ್ತಿ. ಕರ್ತವ್ಯ ನಿಷ್ಠೆ. ಪ್ರಮಾಣಕತೆ ನಿಮ್ಮ ಜೀವನದ ಮುಖ್ಯ ಗುರಿಯಾಗಿರಲಿ. ನೀವು ಮಕ್ಕಳಿಗೆ ಆಸ್ತಿ ಮಾಡುವದಕ್ಕಿಂತ ಮಕ್ಕಳನ್ನೇ ಆಸ್ತಿಯಾಗಿ ಮಾಡಿ ನಿಮ್ಮ ಹಿಂದೆ ಬರುವದು ನೀವು ಮಾಡಿದ ಪುಣ್ಯದ ಒಳ್ಳೆಯ ಕೆಲಸಗಳು ಮಾತ್ರ ಎಂದು ಹೇಳಿದರು .ನಂತರ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪಿಠಾಧ್ಯಕ್ಷರಾದ ಶ್ರೀ ಕಲ್ಲಯ್ಯಜ್ಜನವರ 2199 ನೇ ತುಲಾಭಾರ ಸೇವೆ ಕಲ್ಲೂರು ಗ್ರಾಮದ ಗ್ರಾಮಸ್ಥರು ಮತ್ತು ಎಲ್ಲರೂ ಸೇರಿ ನೆರವೇರಿಸಿದರುಕಲ್ಲಿನಾಥೇಶ್ವರ ಕಾತಿ೯ಕೋತ್ಸವಕ್ಕೆ ತಾಲೂಕಿನ ಸುತ್ತಲಿನ ಗ್ರಾಮದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನಿತರಾದರುನಂತರ ಅನ್ನಸಂತರ್ಪಣೆ ನಡೆಯಿತು.
ಕಳಕನಗೌಡ್ರ ನರಸನಗೌಡ ಪಾಟೀಲ ಅವರು ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರುನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಶ್ರೀ ಕಲ್ಲಿನಾಥೇಶ್ವರ ಪರಮ ಭಕ್ತರಾದ ಸಂತೋಷ ದೇಶಪಾಂಡೆ. ವಿ.ಎಮ್ ಭೊಸನೊರಮಠ ಹಿರಿಯ ವಕೀಲರು , ಕಲ್ಲಯ್ಯಸ್ವಾಮಿ ಸಂಗನಾಳಮಠ. ಹೇಮರಾಜ ಶಾಸ್ತ್ರಿಗಳು ಮ್ಯಾನೇಜರ ವೀರೇಶ್ವರ ಪುಣ್ಯಾಶ್ರಮ ಗದಗ. ಕೂಟ್ರಪ್ಪ ಮುತ್ತಾಳ. ವೀರಯ್ಯ ಸಂಗನಾಳಮಠ. ಮತ್ತು ದೇವಸ್ಥಾನದ ಕಮಿಟಿಯ ಅಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಸವ೯ ಸದಸ್ಯರು ಸದ್ಬಕರು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಇತರರು ಭಾಗವಹಿಸಿದ್ದರು