WhatsApp Image 2024-02-08 at 5.15.58 PM

ಸಂವಿಧಾನ ಜಾಗೃತಿ ಜಾಥಾ: ಸಂವಿಧಾನ ಮೌಲ್ಯಗಳ ಸ್ಮರಣೆ, ವಿವಿಧೆಡೆ ಅದ್ದೂರಿ ಸ್ವಾಗತ

ಕರುನಾಡ ಬೆಳಗಹು ಸುದ್ದಿ

ಬಳ್ಳಾರಿ,8- ಜಿಲ್ಲೆಯಲ್ಲಿ “ಸಂವಿಧಾನ ಜಾಗೃತಿ ಜಾಥಾ” ಸಂಚಾರ ಮುಂದುವರೆದ ಹಿನ್ನಲೆಯಲ್ಲಿ ಬುಧವಾರ ಸಿರುಗುಪ್ಪ ತಾಲ್ಲೂಕಿನ ಕೆಂಚನಗುಡ್ಡ, ನಡಿವಿ, ಎಂ.ಸೂಗೂರು, ಮುದ್ದಟನೂರು ಹಾಗೂ ಸಿರಿಗೇರಿ ಗ್ರಾಮಗಳ ಗ್ರಾಮ ಪಂಚಾಯಿತಿಗಳ ಮಾರ್ಗದಲ್ಲಿ ಸಂಚರಿಸಿತು.

ಕೆಂಚನಗುಡ್ಡ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಲಂಬಾಣಿ ನೃತ್ಯದ ಮೂಲಕ ಹಾಗೂ ಗ್ರಾಮಸ್ಥರು ಪಟಾಕಿಗಳನ್ನು ಸಿಡಿಸುವ ಮೂಲಕ ಜಾಥಾವನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು. ಗ್ರಾಮ ಪಂಚಾಯಿತಿಯ ವತಿಯಿಂದ ಬಲೂನುಗಳನ್ನು ಹಾರಿಸಲಾಯಿತು. ಮಾರ್ಗದಲ್ಲಿ ಹೆರಕಲ್ಲು, ನಿಟ್ಟೂರು ಹಾಗೂ ಉಡೇಗೋಳ ಗ್ರಾಮಗಳಲ್ಲಿ ಜಾಥಾವನ್ನು ಸ್ವಾಗತಿಸಿ ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು.

ನಡಿವಿ ಗ್ರಾಮದಲ್ಲಿ ಜಾಥಾಗೆ ವಿಶೇಷವಾಗಿ ಎತ್ತಿನ ಬಂಡಿಗಳು, ಪೂರ್ಣ ಕುಂಭ ಹಾಗೂ ಕಳಶ ಹಿಡಿದ ಮಹಿಳೆಯರು ಸ್ವಾಗತಿಸಿದರು.

ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ವಿದ್ಯಾರ್ಥಿನಿಯರು ಲೇಜಿಮ್ ಹಾಗೂ ಡೊಳ್ಳು ಬಾರಿಸುವ ಮೂಲಕ ಜನ ಮನ ಸೆಳೆಯುವ ಪ್ರದರ್ಶನ ನೀಡಿದರು. ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿನಿಯರು ಸೈನಿಕರ ವೇಷದಲ್ಲಿ ಅತ್ಯುತ್ತಮವಾಗಿ ಪಥ ಸಂಚಲನ ಮಾಡಿದರು.

ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಂವಿಧಾನ ರಚನಾ ಸಭೆ ಹಾಗೂ ಸಂವಿಧಾನ ಕುರಿತ ವೀಡಿಯೋ ತುಣುಕುಗಳನ್ನು ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು. ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿ ಜಾಥಾದ ಉದ್ದಕ್ಕೂ ಸಂವಿಧಾನ ಪ್ರಸ್ತಾವನೆಯ ಪ್ರತಿಗಳನ್ನು ಹಂಚಿಕೆ ಮಾಡಲಾಯಿತು.

ಈ ವೇಳೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗದವರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗದವರು, ಗ್ರಾಮ ಪಂಚಾಯಿತಿಗಳ ಜನಪ್ರತಿನಿಧಿಗಳು, ಕಳಶ ಹಿಡಿದ ಹಾಗೂ ಪೂರ್ಣ ಕುಂಭ ಹೊತ್ತ ಮಹಿಳೆಯರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!