WhatsApp Image 2024-02-04 at 3.29.06 PM

ಸಂವಿಧಾನ ಜಾಗೃತಿ ಜಾಥಾಕ್ಕೆ ಅದ್ದೂರಿ ಸ್ವಾಗತ ಸಂವಿಧಾನದ ನಿಯಮ ಪ್ರತಿಯೊಬ್ಬರು ಪಾಲಿಸಿ : ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ಬಿ. ರಾಜೇಶ್ವರಿ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ,4- ತಾಲೂಕಿನ ಬಗ್ಗೂರು ಕುರುವಳ್ಳಿ ಬಿಎಂ ಸೂಗೂರು ರಾವಿಹಾಳು ಗ್ರಾಮಗಳಲ್ಲಿ ಸಂವಿಧಾನದ ಮಹತ್ವ ಮತ್ತು ಅದರ ಅರಿವು ಕುರಿತಾಗಿ ಸಾರ್ವಜನಿಕರಲ್ಲಿ ಜಾಗೃತಿ ಜಾಥಾಕ್ಕೆ ಅದ್ದೂರಿ ಸ್ವಾಗತ ವನ್ನು ಗ್ರಾಮಸ್ಥರು ಜಾನಪದ ನೃತ್ಯ ಡೊಳ್ಳು ಕುಣಿತ ಕುಂಭಮೇಳ ಅಂಗನವಾಡಿ ಕಾರ್ಯಕರ್ತರು ಕಳಸವನ್ನು ಹಿಡಿದುಕೊಂಡು ಮೆರವಣಿಗೆಗಳಲ್ಲಿ ಪಾಲ್ಗೊಂಡು ಮೆರಗನ್ನು ತಂದರು.

ವಿವಿಧ ಶಾಲಾ ಮಕ್ಕಳಿಂದ ಆಕರ್ಷಿಕಣಿಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಿ ರಾಜೇಶ್ವರಿ ಅವರು ಮಾತನಾಡಿ ಜಗತ್ತಿನಲ್ಲಿ ವಿಶಾಲವಾದ ಸಂವಿಧಾನವು ನಿರ್ಮಿಸಿ ಕೊಟ್ಟಿದ್ದಾರೆ ಸಂವಿಧಾನದ ನಿಯಮಗಳನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿದೆ ಅಲ್ಲದೆ ಅದರಂತೆಯೇ ನಾವೆಲ್ಲ ನಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಬಗ್ಗೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಜೆ ನಾಗಮ್ಮ ಉಪಾಧ್ಯಕ್ಷರು ವೀರೇಶ್ ಆಯಾ ಗ್ರಾಮ ಪಂಚಾಯತ್ ಆಡಳಿತದಿಂದ ಸಂವಿಧಾನ ಜಾಗೃತಿ ಜಾಥಾ ಸಂಚಾರಕ್ಕೆ ಸಹಕಾರ ನೀಡಿ ಅರ್ಥಗರ್ಭಿತವಾಗಿ ಕಾರ್ಯಕ್ರಮಗಳು ನಡೆದವು ತಾಲೂಕ ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಪವನ್ ಕುಮಾರ್ ತಾಲೂಕು ವೈದ್ಯಾಧಿಕಾರಿ ಡಾ ಬಿ ಈರಣ್ಣ ತೋಟಗಾರಿಕೆ ಸಹಾಯಕ ನಿರ್ದೇಶಕ ಖಾದರ್ ಭಾಷಾ ಪವನ್ ಕುಮಾರ್ ಎಸ್ ದಂಡ ಪ್ಪನವರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿ ಜಿ ಪ್ರದೀಪ್ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಗಾದಿಲಿಂಗಪ್ಪ ಕೃಷಿ ಅಧಿಕಾರಿ ಗರ್ಜಪ್ಪ ಪಿ ಡಿ ಓ ಬಸವರಾಜ ಗ್ರಾಮದ ಮುಖಂಡರಾದ ಪಂಪನಗೌಡ ಮಾರೆಪ್ಪ ಚಂದ್ರಯ್ಯ ಸ್ವಾಮಿ ವೀರೇಶ ರಾಷ್ಟ್ರೀಯ ಸಾಕ್ಷರತಾ ಸಾಮಾಜಿಕ ಕಾರ್ಯಕರ್ತ ಎ ಅಬ್ದುಲ್ ನಬಿ ರೈತ ಮುಖಂಡ ವಾ ಹುಲಗಯ್ಯ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಪಿಡಿಒ ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!