
ಸಿದ್ದರಾಮಯ್ಯ ರೈತ ವಿರೋದಿ ಮುಖ್ಯಮಂತ್ರಿ
ಸಂಸದ ಸಂಗಣ್ಣ ಕರಡಿ ಆರೋಪ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 06- ರೈತರ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಪರಿವರ್ತಕ ಸೇರಿ ಇತರ ಸೌಲಭ್ಯಕ್ಕೆ ರೈತ ಹಣ ಪಡೆಯುವ ಸರ್ಕಾರದ ಕ್ರಮ ರೈತರನ್ನು ಸಂಕಷ್ಟಕ್ಕೆ ದೂಡಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತ ವಿರೋಧಿ ಎಂದು ಸಂಸದ ಸಂಗಣ್ಣ ಕರಡಿ ಆರೋಪಿಸಿದರು.
ಅವರು ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿಯ ಎದುರು ಹಮ್ಮಿಕೊಂಡಿರು ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು ರೈತರು ಮುಂಗಾರು ಹಾಗೂ ಹಿಂಗಾರು ವೈಫಲ್ಯ ದಿಂದ ಸಂಕಷ್ಟದಲ್ಲಿದ್ದಾರೆ ಅವರ ಮೇಲೆ ಸರ್ಕಾರ ಮತ್ತೆ ಹೊರೆ ಖಂಡನೀಯ ಎಂದರು.
ಬರಗಾಲ ಸಮಯದಲ್ಲಿ ರೈತರು ಪಂಪಸೇಟ್ ವಿದ್ಯುತ್ ಪರಿವರ್ತಕಗಳಿಗೆ ಸರ್ಕಾರ ಹಣ ಪಡೆಯುತ್ತಿರುವ ಕ್ರಮ ಈ ಆದೇಶ ಮಾಡಿದ್ದಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಬುದ್ದಿ ಇಲ್ಲವಾ ಎಂದು ಕಿಡಿ ಕಾರಿದರು.
ಈ ಮೊದಲು ಐಪಿ ಸೆಟ್ ಗಳನ್ನು ಅಕ್ರಮ, ಸಕ್ರಮದಡಿ ಸೌಲಭ್ಯ ನೀಡಲಾಗುತ್ತಿತ್ತು. ಸೌರ ವಿದ್ಯುತ್ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯೋಜನೆ ರದ್ದುಪಡಿಸಲಾಗಿದೆ. ಇದರಿಂದ ರೈತರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಅಲ್ಲದೇ ಲೋಡ್ ಶೆಡ್ಡಿಂಗ್ ಕಾರಣ ನೀರಾವರಿ ಸೌಲಭ್ಯ ಇರುವ ರೈತರಿಗೂ ಸೌಲಭ್ಯ ಮರೀಚಿಕೆಯಾಗಿದೆ. ಮೊದಲೇ ರಾಜ್ಯದಲ್ಲಿ ಬರ ಇದೆ. ರೈತರು ಚಿಂತೆಯಲ್ಲಿದ್ದಾರೆ. ಅವರ ಪರ ಸರ್ಕಾರ ನಿಲ್ಲಬೇಕು. ಅದು ಬಿಟ್ಟು ಅವರ ಹೊಟ್ಟೆ ಮೇಲೆ ಬಂಡೆ ಎಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನಿರ್ಧಿಷ್ಟಾವಧಿ ಸತ್ಯಾಗ್ರಹ : ಸರ್ಕಾರದ ನಡೆ ಖಂಡಿಸಿ ಸಂಸದ ಸಂಗಣ್ಣ ಕರಡಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಸರ್ಕರ ಆದೇಶ ರದ್ದುಪಡಿಸುವವರೆಗೆ ಹಗಲು-ರಾತ್ರಿ ಉಪವಾಸ ಮುಂದುವರಿಸುವುದಾಗಿ ತಿಳಿಸಿದರು.
ಸಂಗಟಿ ಬೆಂಬಲ: ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವ ಮೂಲಕ ವಿಪ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರು, ಮಾಜಿ, ಹಾಲಿ ಜನ ಪ್ರತಿನಿಧಿಗಳು ಭಾಗಿಯಾಗಿ ಬೆಂಬಲ ಸೂಚಿಸಿದರು.