19gvt3

ಸಮಾಜವನ್ನು ಮುಖ್ಯವಾಹಿನಿಗೆ ತರಲು ಒಗ್ಗಟ್ಟಿನ ಕೆಲಸ

ಕರುನಾಡ ಬೆಳಗು ಸುದ್ದಿ

ಗಂಗಾವತಿ,20- ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದರುವ ವಿಶ್ವಕರ್ಮ ಸಮಾಜವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸಂಘಟಿತ ಕೆಲಸ ಮಾಡಿ ಸಮಾಜದ ಏಳ್ಗೆಗೆ ಶ್ರಮಿಸುತ್ತನೆ ಎಂದು ಕೊಪ್ಪಳ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ನಾಗೇಶ ಕುಮಾರ ಹೇಳಿದರು.

ನಗರದ ಹೊಸಳ್ಳಿ ರಸ್ತೆಯಲ್ಲಿರುವ ಮೌನೇಶ್ವರ ನಗರದ ಮೌನೇಶ್ವರ ಗಾಯತ್ರಿ ದೇಗುಲದ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕೊಪ್ಪಳ ಜಿಲ್ಲಾ ವಿಶ್ವಕರ್ಮ ಸಮಾಜದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ನಾವು ವಿಶ್ವಕ್ಕೆ ಅತ್ಯುನ್ನತವಾದ ಕಲೆ, ಸಂಸ್ಕೃತಿಯನ್ನು ನೀಡಿದ ಪರಂಪರೆಯವರು. ವೇದ-ಪುರಾಣಗಳ ಕಾಲದಿಂದ ಹಿಡಿದು ಅಧುನಿಕ ಭಾರತದ ಇತಿಹಾಸದುದ್ದಕ್ಕೂ ವಾಸ್ತುಶಿಲ್ಪ ಕಲೆ ಸೇರಿದಂತೆ ನಾನಾ ರಂಗದಲ್ಲಿ ದೊಡ್ಡ ಕೊಡುಗೆ ನೀಡಿದ ಸಮುದಾಯ ನಮ್ಮದು. ದೇವತೆಗಳಿಗೆ ಆಯುಧ ಸೇರಿದಂತೆ, ಇಡೀ ವಿಶ್ವವನ್ನು ಸೃಷ್ಟಿ ಮಾಡಿದವನೇ ವಿಶ್ವಕರ್ಮ. ವಿಶ್ವಕರ್ಮರು ನೀಡಿದ ಅನುಪಮವಾದ ಕೊಡುಗೆ ಸ್ಮರಿಸಿ ಪ್ರಧಾನಿ ಮೋದಿ ವಿಶ್ವಕರ್ಮ ಯೋಜನೆ ಜಾರಿ ಮಾಡಿದ್ದಾರೆ. ಇಂತ ಉನ್ನತ ಪರಂಪರೆ ಹೊಂದಿರುವ ನಾವು ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿದ್ದೇವೆ. ಹೀಗಾಗಿ ನಮ್ಮಗೆ ಸಿಕ್ಕಿರುವ ಕಾಲವಧಿಯಲ್ಲಿ ಉತ್ತಮ ಕೆಲಸ ಮಾಡಿ ಸರಕಾರದಿಂದ ಸಿಗುವ ಸವಲತ್ತುಗಳನ್ನು ಸಮಾಜದ ನಿಜವಾದ ಬಡವರಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದರು.

ದೈವಜ್ಞ ಬ್ರಾಹ್ಮಣ ಸಮಾಜದ ಮುಖಂಡ ಶ್ರವಣಕುಮಾರ ರಾಯ್ಕರ್, ಉದ್ಯಮಿ ಮಾಂತಗೊಂಡ ರವಿ, ನಾಗಲಿಂಗಪ್ಪ ಪತ್ತಾರ, ರುದ್ರಪ್ಪ ಬಡಿಗೇರ, ಈಶಪ್ಪ ಬಡಿಗೇರ ಸುರೇಶ ಮಾತನಾಡಿದರು.

ಈ ಸಂದರ್ಭದಲ್ಲಿ ದೇವೇಂದ್ರಕುಮಾರ, ಮಂಜುನಾಥ ಪತ್ತಾರ, ವೀರೇಶ ಪತ್ತಾರ, ನಾರಾಯಣಪ್ಪ ಪತ್ತಾರ, ಬಸವರಾಜ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!