
ಸರಕಾರಿ ಭೂಮಿ ಕಬಳಿಸಿದವರ ಮೇಲೆ ಕಾನೂನು ಕ್ರಮಕ್ಕೆ
ಆಗ್ರಹಿಸಿ ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ಮನವಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೩೦- ಸರಕಾರಿ ಭೂಮಿ ಕಬಳಿಸಿದವರ ಮೇಲೆ ನೀಡಿದ ದೂರಿನಿಂದ ಸಹಿಸಿಕೊಳ್ಳದೆ ಹೋರಾಟಗಾರರ ಮೇಲೆ ದೌರ್ಜನ್ಯ ಮಾಡುತ್ತಿರುವ ಭೂಗಳ್ಳರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅನುಪಸ್ಥಿತಿಯಲ್ಲಿ ನೂತನ ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಆರ್. ಹೇಮಂತ್ ಕುಮಾರ್ ಅವರಿಗೆ ವಿವಿಧ ಸಂಘಟನೆಗಳಿಂದ ಮನವಿ ಸಲ್ಲಿಸಲಾಯಿತು.
ಕೊಪ್ಪಳ ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಾರ್ಯಾಲಯದಲ್ಲಿ ಸಲ್ಲಿಸಿದ ಮನವಿಯಲ್ಲಿ ಸರಕಾರಿ ಭೂಮಿ ಕಬಳಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ. ನಿರ್ಲಕ್ಷವಹಿಸಿದ ಅಧಿಕಾರಿಗಳ ಮೇಲೆ ದೂರು ದಾಖಲಿಸಿಕೊಳ್ಳುವಂತೆ. ಸರ್ಕಾರಿ ಆಸ್ತಿ ಉಳುವಿಗಾಗಿ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದು. ಈ ದೂರಿನ ಅನ್ವಯ ಕೆಲವೊಬ್ಬರು ಸೇರಿ ನಮ್ಮ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ. ಭೂಗಳ್ಳರಿಂದ ನಮಗೆ ಮತ್ತು ನಮ್ಮ ಕುಟುಂಬಕ್ಕೆ ಜೀವ ಬೇದರಿಕೆ ಇರುತ್ತದೆ. ಹಾಗಾಗಿ ನಮಗೆ ಸೂಕ್ತ ಕಾನೂನು ರಕ್ಷಣೆ ಕೋರುತ್ತೇವೆ.
ಸರ್ಕಾರಿ ಭೂಮಿ ಉಳಿಸುವ ಹೋರಾಟದಲ್ಲಿರುವ ನಾನು ಅಂದರೆ ಅಲಿ ಆದಿಲ್ ಪಾಷ್ ತಂ. ರಾಜಮಹ್ಮದ ಬಂದಗಿ. ವಯಾ : ೩೮. ಉದ್ಯೋಗ. ವ್ಯಾಪಾರಿ. ಸಮಾಜ ಸೇವೆ ಹಾಗೂ ವರದಿಗಾರ. ಜಾತಿ : ಮುಸ್ಲಿಂ. ವಾರ್ಡ: ೧೭. ಬಸವಣ್ಣ ಕ್ಯಾಂಪ್.ಸಾ.ತಾವರಗೇರಾ.ತಾ. ಕುಷ್ಟಗಿ.ಜಿ.ಕೊಪ್ಪಳ ಇದ್ದು. ನಾನು ಮೂಲತಃ ತಾವರಗೇರಾ ಪಟ್ಟಣದವನಾಗಿದ್ದೇನೆ.
ಜೊತೆಗೆ ತಾವರಗೇರಾ ಪಟ್ಟಣದ ಸರ್ಕಾರಿ ಆಸ್ತಿ ಉಳುವಿಗಾಗಿ ಸ್ಥಳಿಯ ಮಟ್ಟದಿಂದ ಹಿಡಿದು ಜಿಲ್ಲಾ ಮತ್ತು ರಾಜ್ಯ ಮಟ್ಟದವರೆಗೂ ಲಿಖಿತ ರೂಪದಲ್ಲಿ ಪತ್ರಗಳನ್ನು ತಲುಪಿಸಿದ್ದು. ಜೊತೆಗೆ ಕರ್ನಾಟಕ ಭೂ ಕಬಳಿಕೆ ನಿಷೇಧದ ವಿಶೇಷ ನ್ಯಾಯಾಲಯ ಬೆಂಗಳೂರು ಮತ್ತು ಉಪ- ಲೋಕಾಯುಕ್ತ ಬೆಂಗಳೂರು ಮತ್ತು ಲೋಕಾಯುಕ್ತ ಕೊಪ್ಪಳ ಇವರುಗಳಿಗೆ ದೂರು ಸಲ್ಲಿಸಿದ್ದೇವೆ.
ಸರ್ಕಾರಿ ಆಸ್ತಿಯನ್ನು ಕಬಳಿಕೆ ಮಾಡಿದ ಭೂಗಳ್ಳರು ಮತ್ತು ತಾವರಗೇರಾ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಭಿಸಾಬ ಹೆಚ್.ಖುದಾನ್ ರವರು ನಮ್ಮ ಸರ್ವ ಪದಾಧಿಕಾರಿಗಳನ್ನು ಮಟ್ಟ ಹಾಕಲು ಒಳಗೊಳಗೆ ಸಂಚು ಮಾಡುವುದಲ್ಲದೆ. ನಮ್ಮನ್ನು ನೇರವಾಗಿ ನಿಮ್ಮನ್ನು ಒಂದು ಗತಿ ಕಾಣಿಸುತ್ತೆನೆ ಎಂದು ರಾಜಾ ರೋಷವಾಗಿ ಬೇದರಿಕೆ ಹಾಕುತ್ತಿದ್ದಾರೆ. ಅಲ್ಲದೆ ದಿ. ೨೭/೧೨/೨೦೨೩ ರಂದು ಸಂಜೆ ತಾವರಗೇರಾ ಹಳೆ ಬಸ್ ನಿಲ್ದಾಣದ ಹತ್ತಿರ ನಮ್ಮ ಗೆಳೆಯನ ಹೋಟಲ್ ಅಂಗಡಿ ಮುಂಗ್ಗಟ್ಟುಗಳ ಹತ್ತಿರ ಬಂದ ಶ್ರೀ ಅಂಬಣ್ಣ ತಂ. ಮಲ್ಲಪ್ಪ ಕಂದಗಲ್ ಮತ್ತು ಅವರ ಅಣ್ಣ. ತಮ್ಮಂದಿರು ಹಾಗೂ ಅವರ ಹಿಂಬಾಲಕರು ಸುಮಾರು ೧೫ ರಿಂದ ೨೦ ಜನರ ಜೊತೆಗೆ ಶ್ಯಾಮಣ್ಣ ಶಿರವಾಟಿಯವರು ಸೇರಿ ನಮ್ಮ ಮೇಲೆ ದೌರ್ಜನ್ಯವೆಸಗಿದರು.
ನಂತರ ಮಂಜುನಾಥ ರವರಿಗೆ ಅಂದರೆ ನನ್ನ ಸಹ ಹೋರಾಟಗಾರನಿಗೆ ಅಂಬಣ್ಣ ತಂ. ಮಲ್ಲಪ್ಪ ಕಂದಗಲ್ ಇವರು ನಾನು ಎಸ್ಸಿ ಅದಿನಿ ಲೇ. ನಿಮ್ಮ ಮೇಲೆ ಅಟ್ರಾಸೀಟಿ ದೂರು ದಾಖಲಿಸಿ. ನಿಮ್ಮನ್ನು ಈ ಕೇಸ್ಸಿನಿಂದ ಜೈಲಿಗೆ ಹಾಕಿಸುತ್ತೇನೆ ಎಂದು ಏರ ದ್ವನಿಯಲ್ಲಿ ಬೇದರಿಸಿ. ಹೆರದರಿಸಿ. ಲೇ ಸೂ… ಮಕ್ಕಳ ನಿಮ್ಮನ್ನು ಬಿಡುವುದಿಲ್ಲ ಎಂದು ಬಾಯಿಗೆ ಬಂದಂತೆ ನಿಂದಿಸಿ. ಲೇ ಸಣ್ಣ ಜಾತಿ ಸೂ… ಮಗನೆ. ಕಟಗ ಸೂ… ಮಗನೆ. ನಿನ್ನ ಈ ಹಳೆ ಬಸ್ ಸ್ಟ್ಯಾಂಡ್ ನಲ್ಲಿ ಕುರಿ ಕಡಿದಂತೆ ಕಡಿದು ಬಿಡುತ್ತೇನೆ. ನಾನು ಎಸ್ಸಿ ಅದಿನಿ ಲೇ. ನೀನು ನನ್ನ ಜಾತಿ ನಿಂದನೆ ಮಾಡಿದಿಯಾ ಎಂದು ನಿನ್ನ ಮತ್ತು ನಿನ್ನ ಕುಟುಂಬದವರಿಗೂ. ನಿನ್ನ ಸಂಗಡಿಗರಿಗೂ ನಾಲ್ಕೈದು ವರ್ಷ ಜೈಲಿಗೆ ಹಾಕಿಸುವೆ ? ಇಲ್ಲದಿದ್ದರೆ ನನ್ನ ಮೇಲೆ ಮಾಡಿರುವ ಎಲ್ಲಾ ದೂರುಗಳನ್ನು ಹಿಂದಕ್ಕೆ ತೆಗೆದುಕೊಂಡಿಲ್ಲ ಅಂದರೆ ನಿನ್ನ ಬೀಡಲ್ಲ. ಅದೇನಾಗುತ್ತೋ ನೋಡೆ ಬಿಡುತ್ತೇನೆ ? ಎಂದು ಗದರಿಸಿದರು. ಈ ಮೇಲಿನ ವ್ಯಕ್ತಿಗಳು ಎಲ್ಲಾರೂ ಸೇರಿ ಸಾರ್ವಜನಿಕರ ಸ್ಥಳದಲ್ಲಿ ನಮ್ಮನ್ನು ಬಾಯಿಗೆ ಬಂದಹಾಗೆ ನಿಂದಿಸಿ. ಅವಮಾನ ಗೈದಿದ್ದಾರೆ.
ತದ ನಂತರ ನಾವುಗಳು ನೇರವಾಗಿ ತಾವರಗೇರಾ ಪೋಲಿಸ್ ಠಾಣೆಗೆ ಹೋಗಿ ಈ ವಿಷಯದ ಬಗ್ಗೆ ಪ್ರಸ್ತಾವನೆ ಮಾಡಿದಾಗ ಪಿ.ಎಸ್.ಐ ಸಾಹೇಬರು ಅವರನ್ನು ಕರೇಸಿ ತಿಳಿ ಹೇಳಿ ಒಂದು ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳಿಸಿಕೊಟ್ಟರು.ನಾವು ಮತ್ತು ನಮ್ಮ ಸಹ ಹೋರಾಟಗಾರರು ಸುಮಾರು ವರ್ಷಗಳಿಂದ ಅನ್ಯಾಯದ ವಿರುದ್ದ ಹೋರಾಟ ಮಾಡುತ್ತ ಬಂದಿದ್ದು. ಉದಾಹರಣೆಗೆ ತಾವರಗೇರಾ ಪಟ್ಟಣದ ಶ್ರೀ ಬನಶಂಕರಿ ದೇವಸ್ಥಾನದ ಕಪಟ ಪೂಜಾರಿಯು ಮಹಿಳೆಯರನ್ನು ಮೋಸ ಮಾಡಿ. ವಂಚಿಸುತ್ತಿದ್ದವನ ವಿರುದ್ದ ನಾವುಗಳು ವಿಡಿಯೋ ಮಾಡಿ ದಿ. ೨೭/೦೭/೨೦೧೪ ರಂದು ಮಾಧ್ಯಮದಲ್ಲಿ ಅಂದರೆ ಬೆಂಗಳೂರು ಪಬ್ಲಿಕ್ ಟಿ.ವಿ.ಯಲ್ಲಿ ಸುದ್ದಿ ಬಿತ್ತಾರ ಮಾಡಿರುತ್ತೆವೆ.
ಈ ಸುದ್ದಿಯಾದ ನಂತರ ತಾವರಗೇರಾದಲ್ಲಿ ದೊಡ್ಡ ಮಟ್ಟಕ್ಕೆ ಗಲಾಟೆಯಾಗಿತ್ತು.ಆ ಗಲಾಟೆಯಲ್ಲಿ ಈ ಮೇಲೆ ತಿಳಿಸಿದ ಅಂಬಣ್ಣ ತಂ. ಮಲ್ಲಪ್ಪ ಕಂದಗಲ್ ಮತ್ತು ಅವರ ಅಣ್ಣ.ತಮ್ಮಂದಿರು ಹಾಗೂ ಅವರ ಹಿಂಬಾಲಕರು ಸುಮಾರು ೧೫ ರಿಂದ ೨೦ ಜನರು ಜೊತೆಗೆ ಶ್ಯಾಮಣ್ಣ ಶಿರವಾಟಿಯವರು ಭಾಗಿಯಾಗಿದ್ದರು. ಸದ್ಯ ಇವರುಗಳ ಮೇಲೆ ನಾವುಗಳು ಭೂ ಕಬಳಿಕೆಯ ಬಗ್ಗೆ.ಮತ್ತು ಇತರೆ ಆಸ್ತಿಗಳ ಬಗ್ಗೆ ಸಂಬಂದಪಟ್ಟ ಇಲಾಖೆಗಳಿಗೆ ದೂರು ಸಲ್ಲಿಸಿರುತ್ತೆವೆ. ಹಾಗಾಗಿ ಈ ಮೇಲಿನ ವ್ಯಕ್ತಿಗಳು ಎಲ್ಲಾರೂ ಸೇರಿ ನಮ್ಮ ಮೇಲೆ ಹಲ್ಲೆಗೆ ಸಂಚು ಮಾಡುತ್ತಿದ್ದಾರೆ. ಆದ್ದರಿಂದ ನನಗೆ ಮತ್ತು ನನ್ನ ಕುಟುಂಬಕ್ಕೂ ಹಾಗೂ ನನ್ನ ಸಹ ಹೋರಾಟಗಾರರಿಗೂ ಮುಂದಿನ ದಿನಮಾನಗಳಲ್ಲಿ ಯಾವುದಾದರೊಂದು ರೂಪದಲ್ಲಿ ನಮ್ಮ ಮೇಲೆ ಹಲ್ಲೆಗೆ ಮುಂದಾದಲ್ಲಿ ಇದಕ್ಕೆ ನೇರ ಹೋಣೆಗಾರರು ಈ ಅಂಬಣ್ಣ ತಂ.ಮಲ್ಲಪ್ಪ ಕಂದಗಲ್.
ಇವರ ಅಣ್ಣ.ತಮ್ಮಂದಿರು ಹಾಗೂ ಸಂಬಂಧಿಕರು ಮತ್ತು ಇವರ ಹಿಂಬಾಲಕರು ಸುಮಾರು ೧೫ ರಿಂದ ೨೦ ಜನರು ಅಲ್ಲದೆ ಕುಟುಂಬದವರು ಜೊತೆಗೆ ಶ್ಯಾಮಣ್ಣ ಶಿರವಾಟಿ. ತಾವರಗೇರಾ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳೆ ನೇರ ಹೊಣೆಗಾರರು ಆಗುತ್ತಾರೆ. ಆದ್ದರಿಂದ ದಯಾಳುಗಳಾದ ತಾವುಗಳು ಈ ವಿಷಯದ ಬಗ್ಗೆ ಗಂಭೀರವಾಗಿ ಅರ್ಥೈಸಿಕೊಂಡು ನನಗೂ ಮತ್ತು ನಮ್ಮ ಕುಟುಂಬಕ್ಕೂ ಜೊತೆಗೆ ನಮ್ಮ ಸಹ ಹೋರಾಟಗಾರರಿಗೂ ಕಾನೂನಿನ ಸೂಕ್ತ ರಕ್ಷಣೆ ನೀಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಆರ್.ಬಿ.ಅಲಿ ಆದಿಲ್ ಪಾಶಾ.ಮಂಜುನಾಥ್ ಎಸ್.ಕಲಾಲ್. ತಾವರಗೇರಾದ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಯಮನೂರಪ್ಪ ಬಿಳೆಗುಡ್ಡ. ಬುದಂ.ಶರಣಂ.ಗಚ್ಛಾಮಿ ಸೇವಾ ಟ್ರಸ್ಟ್ (ರಿ) ವಿರೇಶ ನವಲಿ. ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ್ ಶೀಲವಂತರ್. ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್. ಪ್ರಗತಿ ಪರ ಮುಖಂಡ ಕೆ.ಬಿ.ಗೋನಾಳ. ಎಫ್.ಐ.ಟಿ.ಯು.ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಜಾ ನಾಯಕ್.ನಾಗೇಶ ಹುನಗುಂದ.ದೇವೇಂದ್ರ ಕುಮಾರ ಹುನಗುಂದ. ಯಮನೂರಪ್ಪ ಹುನಗುಂದ.ಹನುಮೇಶ ಭೋವಿ.ಉಪಳೇಶ.ವಿ.ನಾರಿನಾಳ ಇನ್ನೂ ಮುಂತಾದ ಸದಸ್ಯರು ಕೋರಿದ್ದಾರೆ.