
ಸಹಬಾಳ್ವೆಗೆ ಸಂವಿಧಾನ ಸಹಕಾರಿ:ಶರಣಪ್ಪ ಗಾಂಜಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ , 05- ಸಂವಿಧಾನದಿಂದ ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಅವಕಾಶಗಳು ದೊರೆಯುವ ಜತೆಗೆ ಸಹಬಾಳ್ವೆಯಿಂದ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಶರಣಪ್ಪ ಗಾಂಜಿ ಹೇಳಿದರು.
ಯಲಬುರ್ಗಾ ಪಟ್ಟಣದಲ್ಲಿ ಸೋಮವಾರ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಸಂವಿಧಾನ ಜಾರಿಯಾಗಿ 75 ವರ್ಷಗಳು ತುಂಬುತ್ತಿರುವ ಸವಿನೆನಪಿಗಾಗಿ ನಮ್ಮ ಪಟ್ಟಣಕ್ಕೆ ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆ ಬಂದಿರುವುದು ಸಂತಸದ ವಿಷಯ.
ದೇಶದಲ್ಲಿ ಒಬ್ಬ ಹೆಣ್ಣು ಮಗಳಿಗೆ ಅಧಿಕಾರ ದೊರಕುತ್ತಿವೆ ಎಂದರೆ ಅದಕ್ಕೆ ಅಂಬೇಡ್ಕರ್ ಅವರ ಸಂವಿಧಾನವೇ ಕಾರಣವಾಗಿದೆ. ಸಂವಿಧಾನ ಇಲ್ಲದ ಪ್ರಜಾಪ್ರಭುತ್ವ, ಆತ್ಮ ಇಲ್ಲದ ಜೀವ ಇದ್ದಂತೆ. ಸಂವಿಧಾನದ ಕುರಿತು ಜನಸಾಮಾನ್ಯರು ಅರಿವು ಹೊಂದಿರಬೇಕು ಎಂದರು ಪಟ್ಟಣಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ರಥವನ್ನು ತಾಲೂಕು ಆಡಳಿತ. ಹಾಗೂ ಪಟ್ಟಣ ಪಂಚಾಯಿತಿ.
ತಾಲೂಕು ಪಂಚಾಯಿತಿ ಹಾಗೂ ಶಾಲಾ ವಿದ್ಯಾರ್ಥಿಗಳು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಸ್ವಾಗತಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಪಾಟೀಲ್ , ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವಿರುಪಾಕ್ಷಪ್ಪ ಬಡಿಗೇರ್. ಕಾಂಗ್ರೆಸ್ ಪಕ್ಷದ ಯುವ ಮುಖಂಡ ಶಿವಾನಂದ ಬಣಕಾರ್. ಯುವ ಮುಖಂಡ ಶರಣಗೌಡ ಬಸಾಪುರ. ಸಾವಿತ್ರಿ ಗೊಲ್ಲರ್. ಶರಣಮ್ಮ ಪೂಜಾರ್ ಇತರರು ಇದ್ದರು