5019d952-18f4-4270-8515-326c74293368

ಸಾಮೂಹಿಕ ವಿವಾಹಗಳಿಂದ ಸಾಮಾಜಿಕ ಪರಿವರ್ತನೆ

ಶ್ರೀ ಗುರು ಶಾಂತವೀರ ಶಿವಾಚಾರ್ಯ  ಸ್ವಾಮಿಜಿ

 

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ 8 – ಸಾಮೂಹಿಕ ವಿವಾಹಗಳು ಮಾಡುವದರಿಂದ ಬಡವರಿಗೆ ತುಂಬಾ ಅನುಕೂಲ ಮತ್ತು ಸಾಮಾಜಿಕ ಪರಿವರ್ತನೆ ಮದುವೆಯಾದ ನವದಂಪತಿಗಳು ತಂದೆ ತಾಯಿ ಅತ್ತೆ. ಮಾವ.ಮತ್ತು ಹಿರಿಯರಿಗೆ ಭಕ್ತಿ.ಜ್ಞಾನ.ತಿಳುವಳಿಕೆಯಿಂದ ಎಲ್ಲರನ್ನು ಗೌರವದಿಂದ ಕಾಣಬೇಕು .ಷ.ಬ್ರ.ಶ್ರೀ ಗುರು ಶಾಂತವೀರ ಶಿವಾಚಾರ್ಯ ಮಹಾ ಸ್ವಾಮಿಜೀ ಅಭಿಮತ ವ್ಯಕ್ತಪಡಿಸಿದರು.
ಅವರು  ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಶ್ರೀಶರಣಬಸವೇಶ್ವರ ಪುರಾಣ ಮಂಗಲೋತ್ಸವ. ಮತ್ತು ಸಾಮೂಹಿಕ ವಿವಾಹ ಮಹೋತ್ಸವ ಧಾರ್ಮಿಕ. ಸಾಂಸ್ಕೃತಿಕ. ಶಿವದಿಕ್ಷ.ಅಯ್ಯಾಚಾರ ಕಾರ್ಯಕ್ರಮವನ್ನು ಜೋತಿ ಬೆಳಗುವ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು ಪ್ರತಿ ಮಠ-ಮಾನ್ಯಗಳಲ್ಲಿ ಮತ್ತು ಪ್ರತಿಯೊಂದು ಗ್ರಾಮೀಣ ಪ್ರದೇಶದ ಜಾತ್ತಾ ಮಹೋತ್ಸವ ಗಳಲ್ಲಿ ಸಾಮೂಹಿಕ ವಿವಾಹಗಳನ್ನು ಮಾಡಿಕೊಳ್ಳುವವರೇ ನೀವೆ ಭಾಗ್ಯವಂತರು ಸತಿ ಪತಿ ಒಬ್ಬರನೂಬ್ಬರು ಪರಸ್ಪರ ಅಥ೯ ಮಾಡಿಕೊಂಡು ಜೀವನ ನಡೆಸಬೇಕು ಸತಿ-ಪತಿಗಳು ಇಬ್ಬರು ಒಂದೇ ನ್ಯಾಣದ ಎರಡು ಮುಖಗಳು.

ಅತ್ತೆ ಮಾವರನ್ನು ತಂದೆ ತಾಯಿಗಳಂತೆ ಕಾಣಬೇಕು ಮತ್ತು ಹಿರಿಯರನ್ನು ಗೌರವಿಸಿ ಮತ್ತು ಸಾಮೂಹಿಕ ವಿವಾಹ ಬಡವರಿಗೆ ವರದಾನ ಮತ್ತು ತುಂಬಾ ಅನುಕೂಲವಾಗುತ್ತದೆ ಗ್ರಾಮದ ಶ್ರೀ ಈಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹ 19ನೇ ವಷ೯ದ ಶ್ರೀಶರಣಬಸವೇಶ್ವರ ಪುರಾಣ.ಪ್ರವಚನ.ಆಶಿ೯ವಚನ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ನಿಮಿತ್ಯ ಬೆಳ್ಳಿಗೆ ಈಶ್ವರ ಮೂತಿ೯ಗೆ ಅಭಿಷೇಕ ವಿವಿಧ ರೀತಿಯ ಪೂಜೆ. ಮತ್ತು ಶಿವದಿಕ್ಷ.ಅಯ್ಯಚಾರ .ನಂತರ ಶ್ರೀಶರಣಬಸವೇಶ್ವರ ಭಾವಚಿತ್ರ ಮೆರವಣಿಗೆಯು ಗ್ರಾಮದ ಪ್ರಮುಖ ರಾಜ ಬೀದಿಗಳ ಮುಖಾಂತರ ಮಹಿಳೆಯರು ಕುಂಭ ಕಳಸ ಕನ್ನಡಿ ಹಾಗು ಸಕಲ ವಾದ್ಯ ಮೇಳಗಳೊಂದಿಗೆ ವಿಜ್ರಂಭಣೆಯಿಂದ ಮೆರವಣಿಗೆ ಸಾಗುತ್ತಾ ವೇದಿಕೆ ಬಂದು ತಲುಪಿತ್ತು ಕುಷ್ಟಗಿ ಶ್ರೀ ಗಳು ಕಾಯ೯ಕ್ರಮದ ದಿವ್ಯ ಸಾನಿಧ್ಯವಹಿಸಿದರು ಈ ಕಾಯ೯ಕ್ರಮದಲ್ಲಿ 17 ಜೋಡಿಗಳ ಸಾಮೂಹಿಕ ವಿವಾಹ ಮಹೋತ್ಸವ ನೇರವೇರಿತ್ತು ಇಂದಿನ ದುಬಾರಿ ಕಾಲದಲ್ಲಿ ಜನಸಾಮಾನ್ಯರು. ಬಡವರು. ಶ್ರೀಮಂತರು.ಭೇದಭಾವ ಮಾಡದೆ ಎಲ್ಲರೂ ಒಗ್ಗಾಟ್ಟನಿಂದ ಎಲ್ಲರೂ ಸೇರಿ ಇಂತಹ ಸಾಮಾಜಿಕ ಕಾಯ೯ಗಳನ್ನು ಮಾಡುವದು ತುಂಬಾ ಒಳ್ಳೇಯ ಕೆಲಸ.

ಈ ಸಾಮೂಹಿಕ ವಿವಾಹ ಮಾಡುವುದರಿಂದ ದುಂದವೆಚ್ಚಕ್ಕೆ ಕಡಿವಾಣ ಹಾಕಿದಂತಾಗುತ್ತದೆ
ಶೈಕ್ಷಣಿಕ. ಕ್ಷೇತ್ರಗಳು ಸೌಹಾರ್ದ ಕೇಂದ್ರಗಳಾಗಿ ಪರಿವರ್ತನೆ ಯಾಗಬೇಕಾದರೆ ಸಾಮೂಹಿಕ ವಿವಾಹಗಳನ್ನು ಮಾಡುವ ಸಮಾಜಮುಖಿ ಕಾರ್ಯಕ್ರಮಗಳಲ್ಲಿ. ಇನ್ನೂ ಹೆಚ್ಚೆು ಹಚ್ಚು ನಡೆಯಬೇಕು.ಎಂದು ಹೇಳಿದರು ನಂತರ ಕುಷ್ಟಗಿಯ ಷ.ಬ್ರ.ಕೆರಿಮದ್ದಾನೇಶ್ವರ ಶಿವಾಚಾರ್ಯ ಸ್ವಾಮಿಜೀ ಆಶೀವಚನ ನೀಡಿ ಮಾತನಾಡಿದ ಅವರು ಪ್ರತಿಯೂಬ್ಬರು ಸಾಮೂಹಿಕ ವಿವಾಹಗಳು ಮಾಡುವದರಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿಯ ಬದುಕು ಕಂಡುಕೊಳ್ಳಬಹುದು ಇಂದಿನ ದಿನಮಾನಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆ ಕಬ್ಬಿಣದ ಕಡಲೆ ಇದ್ದಂತೆ.

ಉಳ್ಳವರು ಸಾಮೂಹಿಕ ವಿವಾಹದಂತಹ ಸತ್ಕಾರ ಕಾರ್ಯಕ್ಕೆ ಮುಂದಾಗಬೇಕು ಬಡವ, ಶ್ರೀಮಂತ, ಮೇಲು, ಕೀಳು ಎನ್ನದೆ ಎಲ್ಲರೂ ಒಂದೇ ಎನ್ನುವ ಭಾವನೆಯೊಂದಿಗೆ ನಡೆಸುವ ಎಲ್ಲ ಸತ್ಕಾರ್ಯಗಳಿಗೆ ಜಯ ಖಂಡಿತ. ಇಂತಹ ಸಾಮಾಜಿಕ ಕಳಕಳಿಯಿಂದ ನಡೆಯುವ ಸರ್ವ ಧರ್ಮ ಕಾರ್ಯಗಳು ಭಗವಂತನಿಗೆ ಇಷ್ಟ. ಜೊತೆಗೆ ಸಮಾಜವನ್ನು ಈಗಲೂ ಕಾಡುತ್ತಿರುವ ವರದಕ್ಷಿಣೆ ನಿರ್ಮೂಲನೆಗೆ ಎಲ್ಲರೂ ಸಂಕಲ್ಪ ತೊಡಬೇಕು ಸಮಾಜದಲ್ಲಿ ಆರ್ಥಿಕ ಹೊರೆಯಿಂದ ಬಳಲುತ್ತಿರುವರ ಜನರು ಆಂಡಬರ ಮದುವೆ ಮಾಡುವದಕ್ಕಿಂತ ಸಾಮೂಹಿಕ ವಿವಾಹ ಮಾಡುವದರಿಂದ ಉತ್ತಮ ಭವಿಷ್ಯ. ಈಗೀನ ಕಾಲದಲ್ಲಿ ಸಾಮೂಹಿಕ ಹೆಚ್ಚು ಹೆಚ್ಚು ಮಾಡುವದರಿಂದ ಬಡವರಿಗೆ ತುಂಬಾ ಅನುಕೂಲವಾಗುತ್ತದೆ ಅದ್ದೂರಿ ಮದುವೆ ಮಾಡುವುದರಿಂದ ಸಾಲ ಮಾಡಿ ಮದುವೆ ಮಾಡುವುದು ಬೇಡ ಅದಕ್ಕೆ ಕಡಿವಾಣ ಹಾಕುವ ಮೂಲಕ ಮಠ-ಮಾನ್ಯಗಳಲ್ಲಿ.ಮತ್ತು ಜಾತ್ರಾ ಮಹೋತ್ಸವದಲ್ಲಿ ‌ ಸಾಮೂಹಿಕ ವಿವಾಹಗಳು ನಡೆಯುತ್ತವೆ ಇಂತಹ ಕಾರ್ಯ ಕ್ರಮದಲ್ಲಿ ಎಲ್ಲರೂ ಸಾಮೂಹಿಕ ವಿವಾಹ ಮಾಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಉಭಯ ಶ್ರೀಗಳಾದ ಕುಷ್ಟಗಿ ಯ ಶ್ರೀ ಷ. ಬ್ರ. ಕೆರಿಮದ್ದಾನೇಶ್ವರ ಶಿವಾಚಾರ್ಯ ಸ್ವಾಮಿಜೀ. ಇಟಗಿ-ಚಿಕ್ಕಮ್ಯಾಗೇರಿ ಶ್ರೀ ಷ. ಬ್ರ. ಗುರು ಶಾಂತವೀರ ಮಹಾಸ್ವಾಮಿಜೀ. ಸೂಳ್ಳೇಕಲ್ ಶ್ರೀಗಳು .ಮತ್ತು ಇತರರು ಮುಖಂಡರಾದ ಬಸವಂತಪ್ಪ. ಬಂಗಾರಿ ಮಲ್ಲಿಕಾರ್ಜುನ ಹಲಾ೯ಪೂರ. ವೀರುಪಯ್ಯ ಹಿರೇಮಠ.ಬಾಳಪ್ಪ ಸಜ್ಜನ್.ವೀರುಪಾಕ್ಷಪ್ಪ ಬಂಗಾರಿ. ನಿಂಗಪ್ಪ ತೊಣಸಿಹಾಳ. ರುದ್ರಪ್ಪ.ಚನ್ನಪ್ರ.ವೀರಣ್ಣ ಪ್ರದೀಪಕುಮಾರ ಕೆ. ಮಲ್ಲಪ್ಪ ಬಂಗಾರಿ. ತಾಲೂಕಿನ ಸುತ್ತ ಮುತ್ತಲಿನ ಗ್ರಾಮದ ಗ್ರಾಮಸ್ಥರು ಸಕಲ ಸದ್ಬಕ್ತರು ಮತ್ತು ಇತರರು ಭಾಗವಹಿಸಿದ್ದರು,

Leave a Reply

Your email address will not be published. Required fields are marked *

error: Content is protected !!