
ಸಾರಿಗೆ ಬಸ್ ರಿವರ್ಸ್ ಹರಿದು ಬಾಲಕ ಸಾವು
ಕರುನಾಡ ಬೆಳಗು ಸುದ್ದಿ
ಹೊಸಪೇಟೆ (ವಿಜಯನಗರ )ಮಾ.19: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಗಂಗಾವತಿ ಪ್ಲಾಟ್ ಫಾರಂಗೆ ನಿಲ್ಲಿಸಲು ಬಸ್ ಹಿಮ್ಮುಖವಾಗಿ ಚಲಿಸುವಾಗ ಅದೇ ಪ್ಲಾಟ್ ಫಾರಂ ಬಳಿ ನಿಂತಿದ್ದ ಬಾಲಕನ ಮೇಲೆ ಬಸ್ ಹರಿದ ಪರಿಣಾಮ ಬಾಲಕ ಸಾವಿಗಿಡಾಗಿರುವ ದಾರುಣ ಘಟನೆ ಜರುಗಿದಿದೆ.
ಘಟನೆ ವಿವರ : ಕೇಂದ್ರ ಬಸ್ ನಿಲ್ದಾಣದಲ್ಲಿ ಹೊಸಪೇಟೆ ಯಿಂದ ಗಂಗಾವತಿಗೆ ತೆರಳುವ ಪ್ಲಾಟ್ ಫಾರಂನಲ್ಲಿ ಪೋಷಕರೊಂದಿಗೆ ಬಾಲಕ ನಿಂತಿದ್ದ. ಅದೇ ಫಾರಂನಲ್ಲಿ ಸರ್ಕಾರಿ ಸಾರಿಗೆ ಬಸ್ ನಿಲ್ಲಿಸಲು ರಿವರ್ಸ್ ತೆಗೆದುಕೊಳ್ಳುವಾಗ ಬಸ್ ಹಿಂದೆ ನಿಂತಿದ್ದ ಮಗುವನ್ನು ನೋಡದೇ ಡ್ರೈವರ್ ರಿವರ್ಸ್ ತೆಗೆದುಕೊಂಡಿದ್ದಾನೆ. ಪರಿಣಾಮ ಹಿಂಬದಿ ಚಕ್ರದಡಿ ಸಿಲುಕಿ ಮೂರೂವರೆ ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. ಹೊಸಪೇಟೆಯ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮೃತ ಬಾಲಕ ಹೊಸಪೇಟೆ ತಾಲೂಕಿನ ನಾಗಲಾಪುರ ಗ್ರಾಮದ ರಾಚಪ್ಪ, ಮಲ್ಲಮ್ಮ ದಂಪತಿಯ ಪುತ್ರ ಕೇಸರಿ ನಂದನ್ ಎಂದು ತಿಳಿಯಲಾಗಿದೆ.
ಮಲ್ಲಮ್ಮನ ತವರು ಮನೆಯಾದ ಕೊಪ್ಪಳಕ್ಕೆ ಹೋಗಿ ವಾಪಸ್ ನಾಗಲಾಪುರಕ್ಕೆ ತೆರಳುತ್ತಿದ್ದ ಸಂಧರ್ಭದಲ್ಲಿ ಕೇಂದ್ರ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ . ಪೊಲೀಸರು ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಹೊಸಪೇಟೆ ಡಿವೈಎಸ್ಪಿ ಶರಣಬಸವೇಶ್ವರ ಮತ್ತು ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.