
ಸಾಲಬಾಧೆ : ರೈತ ಆತ್ಮಹತ್ಯೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ ,೨೭- ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರ ಹೊಬಳಿಯಲ್ಲಿ ಸಾಲಬಾಧೆಯಿಂದ ರೈತನೊಬ್ಬನು ಕ್ರೀಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಜರುಗಿದೆ.
ತಾವರಗೇರಾ ಬಳಿಯ ಹುಲಿಯಾಪೂರು ಗ್ರಾಮದ ರೈತ ಕಲ್ಲಪ್ಪ ಹನಮಪ್ಪ ಕತಿಗೇರ (42) ಎಂದು ತಿಳಿದು ಬಂದಿದೆ. ಹಲವು ದಿನಗಳಿಂದ ಸಾಲಭಾದೆಯಿಂದ ಬಳಲುತ್ತಿದ್ದ ಮನನೊಂದು ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಶರಣಾಗಿದ್ದಾನೆ. ಅದನ್ನು ನೋಡಿದವರು ಅನುಮಾನ ಗೊಂಡು ಚಿಕಿತ್ಸೆ ಗಾಗಿ ಕೊಪ್ಪಳದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಪ್ರಕರಣ ತಾವರಗೇರಾ ಠಾಣೆಯಲ್ಲಿ ದಾಖಲಾಗಿದೆ.