
ಸಿರುಗುಪ್ಪ : ಡೆಂಗ್ಯೂ ಜಾಗೃತಿ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,13- ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಟ್ಟ ವಾರ್ಡ್ ನಂಬರ್ 27 ಎಲ್ಲಮ್ಮ ದೇವಿ ಪ್ರೌಢಶಾಲೆಯಲ್ಲಿ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ ಬಿ ಈರಣ್ಣ ಅಧ್ಯಕ್ಷತೆಯಲ್ಲಿ ಡೆಂಗ್ಯೂ ಜಾಗೃತಿ ಕಾರ್ಯಕ್ರಮ ನಡೆಯಿತು.
ಶಾಲೆಯ ಮಕ್ಕಳಿಗೆ ಡೆಂಗ್ಯೂ ಜ್ವರದ ಲಕ್ಷಣಗಳು ಮುನ್ನೆಚ್ಚರಿಕೆ ಕ್ರಮಗಳು ತಡೆಗಟ್ಟುವ ವಿಧಾನಗಳ ಬಗ್ಗೆ ಅವರು ಮಕ್ಕಳಿಗೆ ಮಾಹಿತಿ ನೀಡಿದರು.
ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ ರವರು 4 ತಂಡಗಳನ್ನು ಮಾಡಿ ಮಕ್ಕಳಿಗೆ ಲಾರ್ವ ಸಮೀಕ್ಷೆ ಫಾರಂ ವಿತರಿಸಿ ತಮ್ಮ ಮನೆ ಮತ್ತು ಮನೆಯ ಸುತ್ತಮುತ್ತ 10 ಮನೆಗಳಲ್ಲಿ ಸಮೀಕ್ಷೆ ಮಾಡಿ ಸೋಮವಾರ ವರದಿ ತರಲು ಹೇಳಿ ಮಾದರಿ ವಿಧಾನ ತೋರಿಸಿದರು.
ಮುಖ್ಯ ಗುರುಗಳು ಮಾರಕ ಡೆಂಗ್ಯೂ ತೊಲಗಿಸುವಲ್ಲಿ ನಾವೆಲ್ಲರೂ ಪಣ ತೊಡೋಣ ಎಂದರು.
ತಾಲೂಕು ಎಂಟಿಎಸ್ ಶ್ರೀನಿವಾಸ್ ಹಿರಿಯ ಆರೋಗ್ಯ ನಿರಕ್ಷಣಾಧಿಕಾರಿ ಚಂದ್ರಶೇಖರ್ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಶೋಭಾ ರಾಷ್ಟ್ರೀಯ ಸಾಕ್ಷರತಾ ಅಬ್ದುಲ್ ನಬಿ ಆಶಾ ಕಾರ್ಯಕರ್ತೆ ಭಾಗ್ಯಮ್ಮ ಹಾಗೂ ಶಾಲೆಯ ಶಿಕ್ಷಕ ವೃಂದ ಹಾಜರಿದ್ದು ಸಹಕಾರ ನೀಡಿದರು.