ಸಿರುಗುಪ್ಪ ಕೆ ಎ ಎಸ್ ಅಧಿಕಾರಿ ಮಂಜುನಾಥ ಪಿ ಎಸ್

ತಾಲೂಕ ಉಸ್ತುವಾರಿ ಅಧಿಕಾರಿಯಾಗಿ ನೇಮಕ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, ೦೧- ತಾಲೂಕಿನ ಸಾಮಾಜಿಕ ಆರ್ಥಿಕ ಮತ್ತು ಭೌತಿಕ ಅಭಿವೃದ್ಧಿ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಸಿರುಗುಪ್ಪ ತಾಲೂಕಿಗೆ ಕೆಎಎಸ್ ಅಧಿಕಾರಿ ಡಿಎಂ ಎಫ್ ವಿಶೇಷ ಅಧಿಕಾರಿಗಳಾದ ಮಂಜುನಾಥ್ ಪಿ ಎಸ್ ಅವರನ್ನು ನೇಮಕ ಮಾಡಲಾಗಿದೆ .

ಮಂಜುನಾಥ್ ಇವರು ಸರ್ಕಾರದ ಯೋಜನೆಗಳ ಅನುಷ್ಠಾನದ ಪರಿಶೀಲನೆ ಹಾಸ್ಟೆಲ್ ಶಾಲಾ ಕಾಲೇಜುಗಳಿಗೆ ಅನಿರೀಕ್ಷಿತ ಭೇಟಿ ಪರಿಶೀಲನೆ ಹಾಗೂ ಸಮಸ್ಯೆ ಪರಿಹರಿಸುವುದು ಅಂಗನವಾಡಿ ಕೇಂದ್ರ ಕಟ್ಟಡಗಳ ನಿವೇಶನ ಸೇರಿ ಆ ಪೌಷ್ಟಿಕ ನಿವಾರಣೆಗಳ ಅನುಷ್ಠಾನಕ್ಕೆ ಕ್ರಮ.

ಗ್ರಾಮೀಣಾಭಿವೃದ್ಧಿ ನಗರ ಅಭಿವೃದ್ದಿ ಸರ್ಕಾರದ ವಿವಿಧ ಇಲಾಖೆಗಳ ಆರ್ಥಿಕ ಮತ್ತು ಭೌತಿಕ ಪ್ರಗತಿ ಪರಿಶೀಲನೆ ಯುವಕರಿಗೆ ಉದ್ಯೋಗ ಆಧಾರಿತ ತರಬೇತಿ ಕುರಿತು ಸಮನ್ವಯ ಹಾಗೂ ಸಾಲ ಮಂಜೂರಾತಿಗೆ ಕ್ರಮ ಕುಡಿಯುವ ನೀರಿನ ವ್ಯವಸ್ಥೆ ಪರಿಶೀಲಿಸಿ ವರದಿ ಸಲ್ಲಿಸುವುದು ಪ್ರಕೃತಿ ವಿಕೋಪಕ್ಕೆ ಈಡಾದ ಪ್ರದೇಶದಲ್ಲಿ ತುರ್ತು ಕ್ರಮ ವಹಿಸುವದು ದೌರ್ಜನ್ಯ ಪ್ರಕರಣಗಳನ್ನು ಪರಿಶೀಲಿಸಿ ಕ್ರಮ ವಹಿಸುವದು .

ಪ್ರತಿ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯದರ್ಶಿ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ತ್ರಿಲೋಕ್ ಚಂದ್ರ ಐಎಎಸ್ ಹಾಗೂ ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಐಎಎಸ್ ಅವರಿಗೆ ವರದಿ ಒಪ್ಪಿಸಬೇಕು ಪ್ರಕಟಣೆ ಆದೇಶದಲ್ಲಿ ತಿಳಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಾಕ್ಷರತಾ ಸದಸ್ಯ ಅಬ್ದುಲ್ ನಬಿ ಅವರು ತಿಳಿಸಿದ್ದಾರೆ ಮತ್ತು ಮಂಜುನಾಥ ಅವರಿಗೆ ದೊರೆತ ಗೌರವಕ್ಕೆ ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!