
ಸಿರುಗುಪ್ಪ : ನಗರಸಭೆಯಿಂದ ಮತದಾನ ಜಾಗೃತಿ ಅರಿವು ಅಭಿಯಾನ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 22- ಲೋಕಸಭೆ ಸಾರ್ವತ್ರಿಕ ಚುನಾವಣೆ ಮೇ 7ರಂದು ಮತದಾನ ನಡೆಯಲಿದೆ ಪ್ರತಿಯೊಬ್ಬ ಮತದಾರರು ತಪ್ಪದೆ ಮತ ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಬೇಕು ಎಂದು ನಗರಸಭೆಯ ಅಧಿಕಾರಿಗಳು ವಿವಿಧ ಅಧಿಕಾರಿಗಳು ಸಾರ್ವಜನಿಕರು ಕರೆ ನೀಡಿದರು.
ನಗರದ ಸಂತೆ ಮಾರುಕಟ್ಟೆ ಮುಖ್ಯ ರಸ್ತೆಗಳಲ್ಲಿ ಜಿಲ್ಲಾ ಆಡಳಿತ ತಾಲೂಕ ಆಡಳಿತ ಜಿಲ್ಲಾ ಸ್ವೀಪ್ ತಾಲೂಕ ಸ್ವೀಪ್ ಸಮಿತಿ ನಗರಸಭಾ ಸಹಭಾಗಿತ್ವದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಮತದಾನ ಜಾಗೃತಿ ಅಭಿಯಾನ ಸಾರ್ವಜನಿಕರಲ್ಲಿ ಮತದಾನದ ಕುರಿತು ಅರಿವು ಮೂಡಿಸಿದರು ಹೆಚ್ಚಿನ ಮತದಾನ ಪ್ರಮಾಣ ದಾಖಲಿಸುವಂತೆ ಶ್ರಮಿಸಲು ಮತದಾರರಲ್ಲಿ ಪ್ರತಿಯೊಬ್ಬ ಮತದಾರರು ಹರ್ಷದಿಂದ ಮತ ಚಲಾಯಿಸಬೇಕು ಎಂದರು.
ಭವಿಷ್ಯದ ಉತ್ತಮ ದೇಶಕ್ಕೆ ಎಲ್ಲಾ ಸಾರ್ವಜನಿಕರು ನಾಗರಿಕರು ಯುವಕರು ಯುವತಿಯರು ಮತ ಚಲಾವಣೆ ಮಾಡುವಂತೆ ಮತದಾರರಲ್ಲಿ ಜಾಗೃತಿ ಮೂಡಿಸಿದರು,
ನಗರಸಭೆಯ ಅಂಬರೇಶ, ವೆಂಕೋಬ, ರಾಜಭಕ್ಷಿ, ರಾಷ್ಟ್ರೀಯ ಸಾಕ್ಷರತಾ ಅಬ್ದುಲ್ ನಬಿ, ಪಂಪ ಖಾದರ್ ತಹೇರ್, ಮಹಿಳೆಯರು, ಸಾರ್ವಜನಿಕರು, ಸಿಬ್ಬಂದಿ ವರ್ಗದವರರು ಇದ್ದರು.