
ಸೌದಾಗರ್ ಮಸೀದಿಯಲ್ಲಿ ರೋಜಾ ಇಫ್ತಾರ್ ಔತಣ ಕೂಟ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,24- ರೋಜಾ ಉಪವಾಸ ಇನ್ನೊಬ್ಬರ ಹಸಿವನ್ನು ಹರಿಯುವುದೇ ಮಾಹೆ ರಂಜಾನ್ ಹಬ್ಬದ ಔತಣ ಕೂಟ ಅಲ್ಲಾಹನ ತತ್ವಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿ ಕೊಂಡು ಪಾಲಿಸುವುದು ಪವಿತ್ರ ಖುರಾನ್ ಓದುವುದು ಕಲಿಯುವದು ಕಲಿಸುವುದು ಕೇಳುವದು ರೋಜಾ ಸ್ವಯಂ ನಿಯಂತ್ರಣ ಶಿಸ್ತು ತ್ಯಾಗ ಐದು ಬಾರಿ ನಮಾಜ್ ನಿರ್ವಹಿಸುವುದು ರೋಜಾ ಉಪವಾಸ ನಿರತರಿಗೆ ರೋಜಾ ಇಫ್ತಾರ್ ಸಹರಿ ಕೂಟ ಕೈಗೊಳ್ಳುವುದು ಪವಿತ್ರ ಪುಣ್ಯದ ಕಾರ್ಯವಾಗಿದೆ ಎಂದು ಮೌಲಾನ ಹಾಜಿ ಎಸ್ ಅಬ್ದುಲ್ ಸಮದ್ ನಿಜಾಮಿ ಹಾಪಿಜೆ ಕುರಾನ್ ಸೈಯದ್ ಮುನಿರ್ ಪಾಶ ಖಾದ್ರಿ ಸಾಹೇಬ್ ಅವರು ನುಡಿದರು.
ಸಿರುಗುಪ್ಪ ನಗರದ ಸೌದಾಗರ್ ಸುನ್ನಿ ಜುಮ್ಮ ಮಸೀದಿಯಲ್ಲಿ ಹಾಜಿ ಎ ಅಬ್ದುಲ್ ನಬಿ ಚಿಸ್ತಿ ನಿಜಾಮಿ ಅವರಿಂದ ರೋಜಾ ಇಫ್ತಾರ್ ಔತಣ ಕೂಟ ಏರ್ಪಡಿಸಲಾಗಿತ್ತು ಹಾಜಿ ಎ. ಮೊಹಮ್ಮದ್ ಇಬ್ರಾಹಿಂ ಎ. ಮೊಹಮ್ಮದ್ ರಫೀಕ್ ಎ ಮೊಹಮ್ಮದ್ ನೌಶಾದ್ ಅಲಿ ಮತ್ತು ಮಕ್ಕಳು ವ್ಯವಸ್ಥೆ ಗೊಳಿಸಿ ಸ್ವಾಗತಿಸಿದರು ಈ ಸಂದರ್ಭದಲ್ಲಿ ಮಕಾಂದಾರ್ ಮಹೆಬೂಬ್ ಬಾಷಾ ರಬ್ಬಾನಿ ಹಾಜಿ ಹಂಡಿ ಹುಸೇನ್ ಬಾಷಾ ಹಂಡಿ ಹಾಶಿಂ ಹಾಜಿ ಅಬ್ದುಲ್ ಹಮೀದ್ ಫಾರೂಕಿ ಖಾಲಿ ಚೀಲ ಹಾಜಿ ಹುಸೇನ್ ಸಾಬ್ ಡಾ ಮೊಹಮ್ಮದ್ ಅಲಿ ಖತೀಬ್ ಜೈರುದ್ದೀನ್ ಬಾಬು ಎ. ಟಿ .ಮೊಹಮ್ಮದ್ ಗೌಸ್ ಎ. ಟಿ. ಇಬ್ರಾಹಿಂ ಹಂಡಿ ಹುಸೇನ್ ಪ್ರಮುಖರು ಸಮುದಾಯದವರು ಔತಣ ಕೂಟದಲ್ಲಿ ಇದ್ದರು.