IMG-20240121-WA0033

ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿ : ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ

ಕರುನಾಡ ಬೆಳಗು ಸುದ್ದಿ 

ಬಳ್ಳಾರಿ,21- ಸ್ಕೌಟ್ಸ್ ಮತ್ತು ಗೈಡ್ಸ್ನ ಸಮಾಜಮುಖಿ ಕೆಲಸಗಳು ಶಾಲಾ ಕಾಲೇಜುಗಳಲ್ಲಿ ಸಾಮಾಜಿಕ ಸೇವಾ ಮನೋಭಾವ ಬೆಳೆಸುವಲ್ಲಿ ಸಹಕಾರಿ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.

  ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಬಳ್ಳಾರಿ ನಗರದ ವಾಲ್ಮೀಕಿ ಸಮುದಾಯ ಭವನದಲ್ಲಿ ಆಯೋಜಿ ಸಿದ್ದ 7 ದಿನಗಳ ಜಿಲ್ಲಾ ಮಟ್ಟದ ಸ್ಕೌಟ್ಸ್ ಮಾಸ್ಟರ್ಸ್ ಹಾಗೂ ಗೈಡ್ ಕ್ಯಾಪ್ಟನ್ಸ್ ಮೂಲ ತರಬೇತಿ ಶಿಬಿರವನ್ನು ಭಾನುವಾರ ಉದ್ಘಾಟಿಸಲಾಯಿತು.

  ಶಿಕ್ಷಕರು ಒಂದು ವಾರ ಪಡೆದಿರುವ ತರಬೇತಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಾಕ್ಷಿಯಾಗಬೇಕು, ನಿಮ್ಮ ಶಾಲೆಯ ಮಕ್ಕಳ ವಿಕಾಸದ ಜೊತೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆಯುವ ವಿದ್ಯಾರ್ಥಿಗಳು ತಯಾ ರು ಮಾಡುವ ಸಾಮರ್ಥ್ಯ ಒಬ್ಬ ಶಿಕ್ಷಕರಲ್ಲಿದ್ದು, ಪ್ರತಿಯೊಬ್ಬ ರು ಇದರ ನಿಯಮಗಳನ್ನು ಪಾಲಿಸಬೇಕು.

  ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಅವರು ತಮ್ಮ ಬಾಲ್ಯ ಶಿಕ್ಷಣದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಸೇರಿದ ನೆನಪುಗಳನ್ನು ಮೆಲುಕು ಹಾಕಿದರು.

  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಪ್ರಧಾನ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯಾ ಅವರು ಮಾತನಾಡಿ, ಸೇವಾ ಮನೋಭಾವನೆಯಿಂದ ಶ್ರಮಿಸುತ್ತಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ತ್ಯಾಗದ ಮತ್ತೊಂದು ಶಬ್ಧವಾಗಿದೆ. ಸೇವಾ ಮನೋಭಾವನೆಯನ್ನು ರೂಪಿಸುವುದೇ ಸ್ಕೌಟ್ಸ್ ಮತ್ತು ಗೈಡ್ಸ್ ನ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

  ಸ್ಕೌಟ್ಸ್ ಮತ್ತು ಗೈಡ್ಸ್ನ ಸಮಾಜಮುಖಿ ಕೆಲಸಗಳು ಮತ್ತು ಪ್ರತಿಯೊಬ್ಬರಲ್ಲಿ ಪ್ರೇಮ ಸಾರುವ ಯೋಜನೆಗಳನ್ನು ಮನ ಗಂಡಿರುವ ಸರ್ಕಾರವು ಆಯವ್ಯಯದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳಿಗೆ ಪ್ರತ್ಯೇಕ ಅನುದಾನ ಮೀಸಲಿಟ್ಟಿದೆ.

  ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಕಡೆಗಳಲ್ಲಿಯೂ ಸ್ಕೌಟ್ಸ್ ಮತ್ತು ಗೈ ಘಟಕಗಳು ನೀಡುವ ಮೂಲಕ ಅನೇಕ ಅನುಕೂಲಗಳನ್ನು ಸರ್ಕಾರ ನೀಡುವ ಶಿಕ್ಷಕರು ಮತ್ತು ಮಕ್ಕಳು ಮುಕ್ತವಾಗಿ ಭಾಗವಹಿಸಿ ಸ್ಕೌಟ್ಸ್ ಮತ್ತು ಗೈಡ್‌ನ ಅನುಕೂಲ ಪಡೆಯುವ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಳ್ಳಿ, ಒಂದು ವಾರಗಳ ಕಾಲ ತರಬೇತಿ ಪಡೆದ ಶಿಕ್ಷಕರಿಗೆ ತರಬೇತಿ ಪಡೆದು ಸ್ಕೌಟ್ಸ್ ಮತ್ತು ನೀಡುವ ಗೈಡ್ಸ್ ಶಿಕ್ಷಕರಿಗೆ ಸಮರ್ಥರು ಎಂದು ದೀಕ್ಷೆ ಮೂಲಕ ಬ್ಯಾಡ್ಜ್ ನೀಡಲಾಗು ತ್ತದೆ, ಇದರೊಂದಿಗೆ ತರಬೇತಿ ಪ್ರಶಸ್ತಿ ಪತ್ರ, ಶಿಬಿರದಲ್ಲಿ ಸ್ಕೌಟ್ ವಿಭಾಗದಲ್ಲಿ 88 ಜನ ಶಿಕ್ಷಕರು ಹಾಗೂ ಗೈಡ್ಸ್ ವಿಭಾಗದಲ್ಲಿ 126 ಶಿಕ್ಷಕರು ಸೇರಿದಂತೆ ಒಟ್ಟು 214 ಜನ ಶಿಕ್ಷಕರ ಶಿಬಿರದಲ್ಲಿ ಭಾಗವಹಿಸಿದ್ದರು.

  ಈ ಸಂದರ್ಭದಲ್ಲಿ ಬಳ್ಳಾರಿ ಕೇಂದ್ರಸ್ಥಾನದ ಕಲ್ಯಾಣ ಕರ್ನಾಟಕ ಹಾಗೂ ರೇಂಜರಿಂಗ್ ವಿಭಾಗದ ಉಸ್ತುವಾರಿ ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಮಲ್ಲೇಶ್ವರಿ ಜುಜಾರೆ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಅಧ್ಯಕ್ಷ ವೀರೇಶ್, ಉಪಾಧ್ಯಕ್ಷರಾದ ಎಂ.ಟಿ.ಮಲ್ಲೇಶಪ್ಪ, ಜಿಲ್ಲಾ ಖಜಾಂಚಿ ವಿ.ಪ್ರಭಾಕರ್, ಜಿಲ್ಲಾ ತರಬೇತಿ ಆಯುಕ್ತರಾದ ಜಯಶ್ರೀ ಜೋಷಿ, ನಾಗರಾಜ, ತಾಲೂಕು ಕಾರ್ಯದರ್ಶಿಗಳಾದ ಜಿ. ಎಸ್.ಸೋಮಪ್ಪ, ಚಂದ್ರಯ್ಯ ಹಿರೇಮಠದ್, ನಟರಾಜ ಸ್ವಾಮಿ, ಜಿಲ್ಲಾಟಕರಾದ ಮೆಹಬೂಬ್ ಭಾಷ ಸೇರಿದಂತೆ ರೋವರ್ಸ್ ಮತ್ತು ರೇಂಜರ್ಸ್ ತರಬೇತುದಾರರು ಹಾಗೂ ಸ್ಕೌಟ್ಸ್ ಮಾಸ್ಟರ್ಸ್ ಹಾಗೂ ಗೈಡ್ ಕ್ಯಾಪ್ಟನ್ಸ್.

Leave a Reply

Your email address will not be published. Required fields are marked *

error: Content is protected !!