
ಸ್ವಾಭಿಮಾನಿ ಭಾರತ ಬೋಸ್ ರ ಕನಸು ಸ್ವತಂತ್ರ ಭಾರತ ಮರುಕಳಿಸಬೇಕಾಗಿದೆ : ಡಾ. ವಿಠ್ಠಲರಾವ್ ಗಾಯಕವಾಡ
ಕರುನಾಡ ಬೆಳಗು ಸುದ್ದಿ
ಹೊಸಪೇಟೆ,23- ಸ್ವಾಭಿಮಾನದ ಅಲೆಯನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಹುಟ್ಟುಹಾಕುವ ಮೂಲಕ ದೇಶದ ಸ್ವಾತಂತ್ರದ ಚಳುವಳಿಗೆ ಹೊಸ ದಿಕ್ಕು ನೀಡಿದ ಕಿರ್ತಿ ಸುಭಾಷ್ ಚಂದ್ರ ಬೋಸ್ ರಿಗೆ ಸಲ್ಲುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ವಿಠ್ಠಲರಾವ್ ಗಾಯಕವಾಡ್ ಅಭಿಪ್ರಾಯಪಟ್ಟರು.
ಅವರು ಹೊಸಪೇಟೆಯ ಮಹಾಲಕ್ಷ್ಮೀ ಯೋಗ ಕೇಂದ್ರದಲ್ಲಿ ಪತಂಜಲಿ ಯೋಗ ಸಮಿತಿ ಹಮ್ಮಿಕೊಂಡಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 127ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬೋಸ್ ಬಹು ದೂರ ದೃಷ್ಟಿಯ ಅಖಂಡ ಭಾರತದ ಕನಸು ಕಂಡ ಹೋರಾಟಗಾರರಾಗಿದ್ದರು. ಸ್ವತಂತ್ರಭಾರತ ವಿಭಜನೆಯಾದರೆ ಮುಂದೆ ದೊಡ್ಡ ಸಮಸ್ಯೆಯಾಗಲಿದೆ ಎಂದು ಅಂದೆ ಮನಗಂಡು ವಿರೋಧಿಸಿದ್ದರು ಅದಕ್ಕೆ ಸಾಕ್ಷಿ ಎನ್ನುವಂತೆ ಇಂದು ಪಾಕಿಸ್ತಾನ ದೇಶಕ್ಕೆ ಮಾರಕವಾಗಿದೆ ಎಂದರು.
ಒಬ್ಬ ವೀರ ಸೇನಾನಿಯನ್ನು ನಾವು ಹೇಗೆ ನಡೆಸಿಕೊಂಡಿದ್ದೇವೆ ಎನ್ನುವ ಆತ್ಮಾವಲೋಕ ಮಾಡಿಕೊಳ್ಳಬೇಕು ಯುವ ಜನಾಂಗ ನಿಜವಾದ ಸ್ವಾತಂತ್ರ್ಯ ಗಳಿಸಲು ಮುಂದಾಗಬೇಕಿದೆ ಎಂದರು. ನವ ಹೊಸಹಾತು ಷಾಹಿ ಕಪಿ ಮುಷ್ಠಿಯಿಂದ ಹೊರತಂದು ಸ್ವಾಭಿಮಾನದ ಭಾರತವನ್ನು ಮುನ್ನಡೆಸಬೇಕಾಗಿದೆ ಎಂದರು.
ಪ್ರಾಸ್ತಾವಿಕವಾಗಿ ವಿಜಯನಗರ ಜಿಲ್ಲಾ ಪತಂಜಲಿ ಯೋಗ ಸಮಿತಿಯ ಪ್ರಭಾರಿ ಡಾ.ಎಫ್.ಟಿ. ಹಳ್ಳಿಕೇರಿ ಮಾತನಾಡಿದರು.
ವೇದಿಕೆಯಲ್ಲಿ ಅಶೋಕ ಚಿತ್ರಗಾರ, ರಾಜ್ಯ ಯುವ ಪ್ರಭಾರಿ ಕಿರಣಕುಮಾರ, ಶ್ರೀರಾಮ, ಯರ್ರಿಯಪ್ಪ, ಪ್ರಕಾಶ ಕುಲಕರ್ಣಿ, ಶ್ರೀಧರ ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ನಾಗರತ್ನಾ ನಿರೂಪಿಸಿದ್ದು ಗಾಯಕ ಜಯಣ್ಣ ಪ್ರಾರ್ಥನಾ ಗೀತೆ ಹಾಡಿದರು, ಶ್ರೀಧರ ಸ್ವಾಗತಿಸಿದರೆ ಕೊನೆಯಲ್ಲಿ ವಿಠೋಬ ವಂದಿಸಿದರು.