a013c2b9-6c40-4fb7-99e6-9eadc3360af9

ಹಂಪಿ ಉತ್ಸವದಲ್ಲಿ ಮಳಿಗೆ ವ್ಯಾಪಾರಸ್ಥರಿಗೆ ನಷ್ಟ | ಸ್ಟಾಲ್ ಬಾಡಿಗೆ ಹಣ ವಾಪಾಸ್ ಗೆ ಜಿಲ್ಲಾಧಿಕಾರಿಗೆ ಸಚಿವ ಜಮೀರ್ ಖಾನ್ ಸೂಚನೆ

ಕರುನಾಡ ಬೆಳಗು ಸುದ್ದಿ
ಹಂಪಿ (ವಿಜಯನಗರ )ಫೆ.05-  ಉತ್ಸವದಲ್ಲಿ ವ್ಯಾಪಾರಕ್ಕಾಗಿ ಮಳಿಗೆಗಳನ್ನು ಜಿಲ್ಲಾಡಳಿತ ಮಳಿಗೆಗಳಿಗೆ 3ಸಾವಿರ ರೂ. ಡಿಡಿ ಪಡೆದು ಸ್ಟಾಲ್ ಕೊಡಲಾಗಿತ್ತು.

ಉತ್ಸವಕ್ಕೆ ಜನಸಾಗರವೇ ಹರಿದು ಬಂದಿತ್ತು. ಆದರೆ ಮೂರು ದಿನದಿಂದ ಬಂಡವಾಳ ಹಾಕಿ ಲಾಭದ ನಿರೀಕ್ಷ ಯಲ್ಲಿದ್ದವರು ಹತಾಷ ರಾದರು, ತಮಗೆ ಕೂಲಿಯೂ ಹಾಗೂ ಹಾಕಿದ ಬಂಡವಾಳವೂ ಸಹ ವಾಪಸ್ ಬರಲಿಲ್ಲ ಎಂದು ತಿಂಡಿ ತಿನಿಸು ವ್ಯಾಪಾರ ಮಾಡುತ್ತಿದ್ದ ಸ್ಟಾಲ್ ಗಳ ವ್ಯಾಪಾರಸ್ತರು ಪತ್ರಿಕೆಯೊಂದಿಗೆ ಅವರ ಅಳಲನ್ನು ತೋಡಿಕೊಂಡರು.

ವಿಷಯವನ್ನು ಸ್ಥಳೀಯ ಪತ್ರಕರ್ತ ಮಂಜುನಾಥ ಲಕ್ಕಿಮರ ವಿಷಯವನ್ನು ಸಚಿವ ಜಮೀರ್ ಅಹಮದ್ ರವರ ಗಮನಕ್ಕೆ ತರಲು. ಸಚಿವ ಕೂಡಲೇ ಸ್ಥಳದಲ್ಲಿಯೇ ಇದ್ದ ಜಿಲ್ಲಾಧಿಕಾರಿ ದಿವಾಕರ್ ಅವರಿಗೆ ಕ್ರಮಕೈಗೊಳ್ಳಲು ತಿಳಿಸಿದರಲ್ಲದೆ ,ವಿಷಯವನ್ನು ಮುಖ್ಯ ವೇದಿಕೆಯಲ್ಲಿ ಹೇಳುವುದರ ಮುಖಾಂತರ ವ್ಯಾಪಾರಿಗಳಿಗೆ ಧೈರ್ಯ ತುಂಬಿದರು.

ಉತ್ಸವದಲ್ಲಿ ನಮ್ಮ ಸ್ಟಾಲ್ ಗಳು ನೋಡುಗರಿಗೆ ವಸ್ತು ಪ್ರದರ್ಶನದಂತೆ ಕಂಡುಬದಿವೆ ಯಾರು ಕೊಂಡುಕೊಳ್ಳಲಿಲ್ಲ ಹಾಗಾಗಿ ನಮಗೆ ಲಾಸ್ ಆಯಿತು. ಎಂದು ವ್ಯಾಪಾರಿ ಭಾಗ್ಯಮ್ಮ ಹೇಳಿದರು.ಉತ್ಸವದಲ್ಲಿ ತಮ್ಮ ಸಂಘದ ಸದಸ್ಯರಿಗೆ ದುಡಿಮೆ ಯಾಗಲು ಸ್ಥಳೀಯ” ತಾಯಮ್ನ ಶಕ್ತಿ ಸಂಘ” ತನ್ನ ಸದಸ್ಯರಿಗೆ ಸಣ್ಣ ಮಟ್ಟದ ವ್ಯಾಪಾರ ಗಳನ್ನು ಒಳಗೊಂಡಂತೆ ಅರ್ಥಿಕ ಸಹಾಯ ಕಲ್ಪಿಸಿ ಕೊಟ್ಟಿತು. ಅದರೆ ದುಡಿಮೆ ಆಗದೆ ಬಂಡವಾಳವು ವಾಪಾಸ್ ಬರದೇ ನಷ್ಟ ಅನುಭವಿಸಿದ ವ್ಯಾಪರಿಗಳಿಗೆ ಸ್ಥಳದಲ್ಲೇ ದೈರ್ಯ ತುಂಬಿದ ತಾಯಮ್ಮ ಸಂಘದ ಅದ್ಯಕ್ಷೆ ಕವಿತಾ ಸಿಂಗ್ ಮುಂದಿನ ದಿನಗಳಲ್ಲಿ ತಮ್ಮಸದಸ್ಯರಿಗೆ ಇನ್ನು ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ .

 

Leave a Reply

Your email address will not be published. Required fields are marked *

error: Content is protected !!