
ನಿಧನ ವಾರ್ತೆ
ಹನುಮಂತಪ್ಪ ರಾಮಪ್ಪ ಮರಡಿತೋಟದ ( 85) ಇನ್ನಿಲ್ಲ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 06- ನಗರದ ಹುಡ್ಕೋ ಕಾಲೋನಿ ನಿವಾಸಿ ನಿವೃತ್ತ ಸಂಗೀತ ಶಿಕ್ಷಕ ಹನುಮಂತಪ್ಪ ರಾಮಪ್ಪ ಮರಡಿತೋಟದ 85 ನಿಧನರಾಗಿದ್ದಾರೆ.
ಮೃತರು ಪತ್ನಿ ಶಾಂತಾ ಮರಡಿತೋಟದ, ಇಬ್ಬರು ಪುತ್ರಿಯರು ಇಬ್ಬರು ಪುತ್ರರು ಸೇರಿದಂತೆ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ 06 ಘಂಟೆಗೆ ಗವಿಸಿದ್ಧೇಶ್ವರ ಮಠದ ಹಿಂಭಾಗದ ರುದ್ರಭೂಮಿಯಲ್ಲಿ ಜರಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.