IMG-20231218-WA0037

ಹನುಮಮಾಲಾಧಾರಿಗಳಿಗೆ ತೊಂದರೆಯಾಗದಂತೆ ನೊಡಿಕೊಳ್ಳಿ
ಸಚಿವರು ಶಾಸಕರ ಮಧ್ಯೆ ಸಮನ್ವಯ ಕೊರತೆ

ಕರುನಾಡ ಬೆಳಗು ಸುದ್ದಿ
ಗಂಗಾವತಿ,೧೮-     ಡಿ,೨೨,೨೩,೨೪ ಮೂರು ದಿನಗಳ ಕಾಲ ನಡೆಯುವ ಹನುಮ ಮಾಲಾ ವರ‍್ಸಜನೆ ಬರುವ ಹನುಮ ಮಾಲಾ ಧಾರಿಗಳಿಗೆ ತೊಂದರೆಯಾಗದಂತೆ ಅಧಿಕಾರಿಗಳು ನೋಡಿ ಕೊಳ್ಳಬೇಕು.ಸಚಿವರು,ಶಾಸಕರು ನಿಗಾವಹಿಸಿ ಸ್ಥಳದಲ್ಲಿ ಮುಕ್ಕಾಂ ಹೂಡಬೇಕು ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಅವರು ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ನಡೆಯುವ ಹನುಮಮಾಲಾ ವರ‍್ಸಜನೆ ವ್ಯವಸ್ಥೇ ವಿಕ್ಷಿಸಿ ಧರ‍್ಮಿಕ ದತ್ತಿ ಇಲಾಖೆಯ ಆಡಳಿತ ಅಧಿಕಾರಿ ಅರವಿಂದ  ಸುತ್ತಗುಂಡಿಯವರೊಂದಿಗೆ ಮಾತನಾಡಿ ಕಳೆದ ಸಲ ನಾವು ಶಾಸಕರಾಗಿದ್ದಾಗ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದವು.
ಜಿಲ್ಲಾಡಳಿತ ಹಾಗೂ ತಾಲೂಕ ಆಡಳಿತ ಸಾಥ ನೀಡಿತ್ತು.ಅಂಜನಾದ್ರಿಯ ಕಾಣಿಕೆಯಿಂದ ಬಂದ ಭಕ್ತರ ಹಣವೇ ೩ ಕೋಟಿ ಡಿಪಾಜಿಟ್ ಇದೆ. ೧ಕೋಟಿ ಮಿಗಿಲಾಗಿ ಎಸ್.ಬಿ.ಅಕೌಂಟನಲ್ಲಿ ಇದೆ ಎಂದು ಅಧಿಕಾರಿ ರ‍್ಗದವರು ತಿಳಿಸಿದ್ದಾರೆ.ಕೆಲವೋಬ್ಬರು ನಮ್ಮ ಶಾಸಕರು ೫೦ಲಕ್ಷ ಹಣ ಬಿಡುಗಡೆಗೊಳಿಸಿದ್ದಾರೆ ಎಂಬ ತಪ್ಪು ಮಾಹಿತಿ ನಿಡುತ್ತಿರುವ ಬಗ್ಗೆ ಈಗಾಗಲೇ ಅಧಿಕಾರಿರ‍್ಗವೇ ಉತ್ತರಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿರುವ ಹನುಮಮಾಲಾ ವರ‍್ಸಜನಾ ಪರ‍್ವ ಬಾವಿ ಸಭೆಯಲ್ಲಿ ಶಾಸಕ ಗಾಲಿ ಜನರ‍್ಧನರೆಡ್ಡಿಯವರು ಏಕೆ ಭಾಗವಹಿಸಲಿಲ್ಲ. ಸಚಿವರು ಹಾಗೂ ಶಾಸಕರ ಮಧ್ಯೆ ಸಮನ್ವಯ ಕೊರತೆ ಎದ್ದು ಕಾಣುತ್ತದೆ.
ಒಟ್ಟಾರೆ ಬರುವ ಹನುಮಮಾಲಾ ಧಾರಿಗಳಿಗೆ ತೊಂದರೆಯಾಗದಂತೆ ಅಧಿಕಾರಿರ‍್ಗ ಮರ‍್ತುರ‍್ಜಿ ವಹಿಸಬೇಕು ಎಂದರು.ಧರ‍್ಮಿಕ ದತ್ತಿ ಇಲಾಖೆಯ ಆಡಳಿತ ಅಧಿಕಾರಿ ಅರವಿಂದ ಸುತ್ತಗುಂಡಿ ಮಾತನಾಡಿ ಧರ‍್ಮಿಕ ದತ್ತಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿಯವರು ಅಂಜನಾದ್ರಿ ಸ್ಥಳಕ್ಕೆ ಬಂದು ಖುದ್ದಾಗಿವ್ಯವಸ್ಥೇಪ ರಿಶೀಲಿಸುವರಿದ್ದಾರೆ.
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯವರು ಜಿಲ್ಲಾಧಿಕಾರಿಗಳು ವ್ಯವಸ್ಥೇಯ ಬಗ್ಗೆ ಸೂಚಿಸಿದ್ದಾರೆ.ಅಂಜನಾದ್ರಿಯ ಹುಂಡಿಯಿಂದಲೇ ಬಂದ ಹಣದಲ್ಲಿ ೪೦ಲಕ್ಷ ವಿನಿಯೋಗಿಸಲು ಹೆಚ್ಚಿನ ರ‍್ಚು ಬಂದರೂ ವಿನಿಯೋಗಿಸಲು ತಿಳಿಸಿದ್ದಾರೆ ಎಂದರು.
ಈಸಂರ‍್ಭದಲ್ಲಿ ಸಹಕಾರಿ ಧುರಿಣ ಜಿ ಶ್ರೀಧರ,ಬಿಜೆಪಿ ಗ್ರಾಮೀಣ ಅಧ್ಯಕ್ಷ ಚನ್ನಪ್ಪ ಮಳಗಿ ವಕೀಲ,ಹೆಚ್.ಸಿ.ಯಾದವ ವಕೀಲ,ನಗರ ಅಧ್ಯಕ್ಷ ಕಾಶೀನಾಥ ಚಿತ್ರಗಾರ,ಹನುಮಂತಪ್ಪ ನಾಯಕ,ವಿರಭದ್ರಪ್ಪ ನಾಯಕ,ನಗರಸಭೆ ಸದಸ್ಯರುಗಳಾದ ಪರಶುರಾಮ ಮಡ್ಡೇರ,ನವಿನಮಾಲಿಪಾಟೀಲ,ರಾಚಪ್ಪ ಸಿದ್ದಾಪೂರ,ಹೊಸಮಲಿ ಮಲ್ಲೇಶಪ್ಪ ನಾಯಕ,ಹೆಚ್.ಎಂ ಸಿದ್ದರಾಮಸ್ವಾಮಿ, ಗೌರಿಶ ಬಾಗೋಡಿ,ಶ್ರಿನಿವಾಸ ಧೂಳ ಮುಂತಾದವರು ಉಪಸ್ಥೀತರಿದ್ದರು.

Leave a Reply

Your email address will not be published. Required fields are marked *

error: Content is protected !!