
ಹಿಂದೂ ಕಾರ್ಯಕರ್ತನ ಬಂಧನ ಖಂಡಿಸಿ
ಬಿಜೆಪಿ ಪ್ರತಿಭಟನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 03- ಹುಬ್ಬಳ್ಳಿಯಲ್ಲಿ ಹಿಂದೂ ಕಾರ್ಯಕರ್ತನ ಬಂಧನ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮಂಗಳವಾರದಂದು ಕೊಪ್ಪಳದ ಜಿಲ್ಲಾಡಾಳಿತ ಭವನದ ಮುಂದೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಆಕ್ರೋಶ ; ಹಿಂದೂ ಮುಖಂಡ ಪೂಜಾರಿ ಬಂಧನಕ್ಕೆ ಬಿಜೆಪಿ ಮುಖಂಡರು ರಾಜ್ಯಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯಲ್ಲಿ ಸಂಸದ ಕರಡಿ ಸಂಗಣ್ಣ ಸೇರಿದಂತೆ ಮಾಜಿ ಶಾಸಕ ಬಸವರಾಜ ದಡೆಸಗೂರ .ಮುಖಂಡರಾದ ನರಸಿಂಗರಾವ್ ಕುಲಕರ್ಣಿ,ಮಹಾಂತೇಶ ಪಾಟೀಲ್, ಬಸವರಾಜ ಗೌರಾ .ಡಾ. ಬಸವರಾಜ ಅರವಿಂದಗೌಡ ಪಾಟೀಲ್,ಮಂಜುನಾಥ ಪಾಟೀಲ್,ಮಹಿಳಾ ಮುಖಂಡರಾದ ಮಂಜುಳಾ ಕರಡಿ,ಶೋಭಾ ನಗರಿ,ಗೀತಾ ಪಾಟೀಲ್,ಮಹಾಲಕ್ಷ್ಮೀ ಕಂದಾರಿ, ಬಿಜೆಪಿ ವಕ್ತಾರ ಮಹೇಶ ಅಂಗಡಿ ಸೇರಿದಂತೆ ಅನೇಕ ಮುಖಂಡರು,ಕಾರ್ಯಕರ್ತರು ಉಪಸ್ಥಿತರಿದರು.