
ಹಿರಿಯರ-ಮಾರ್ಗದರ್ಶನದೊಂದಿಗೆ ಕೆಲಸ ನಿರ್ವಹಿಸುವೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ,20- ಹಿಂದೆ ಶಾಸಕನಾಗಿ ನಿರ್ವಹಿಸಿದ ಕೆಲಸ ಕಾಂಗ್ರೇಸ ಪಕ್ಷದ ನಿಷ್ಠೆ ಅವಲೋಕಿಸಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ನನಗೆ ಕಾಡಾ ಅಧ್ಯಕ್ಷ ಸ್ಥಾನ ನೀಡಿದ್ದಾರೆ.
ನಮ್ಮ ಭಾಗದ ಹಿರಿಯರಾದ ಮಾಜಿ ಸಂಸದ ಹೆಚ್.ಜಿ.ರಾಮುಲುರವರ ಆರ್ಶಿವಾದ ಮಾರ್ಗದರ್ಶನ ಜಿಲ್ಲೆಯ ಸಚಿವರು,ಶಾಸಕರು ಮಾಜಿ ಶಾಸಕರ ಸಹಕಾರದೊಂದಿಗೆ ಕಾಡಾ ಕ್ಷೇತ್ರದ ಅಭಿವೃದಿ ಮಾಡುತ್ತನೆ ಎಂದು ನೂತನ ಕಾಡಾ ಅಧ್ಯಕ್ಷ ಮಾಜಿ ಶಾಸಕ ಹಸನಸಾಬ ದೋಟಿಹಾಳ ಹೇಳಿದರು.
ಮುನಿರಾಬಾದ್‌ನಲ್ಲಿ ಅಧಿಕಾರ ಸ್ವೀಕರಿಸಿದ ನಂತರ ನಗರದ ಮಾಜಿ ಸಂಸದ ಹೆಚ್.ಜಿ.ರಾಮುಲು ನಿವಾಸಕ್ಕೆ ಆಗಮಿಸಿ ಅವರ ಆಶೀರ್ವಾದ ಪಡೆದು ನಂತರ ಹೆಚ್.ಆರ್.ಶ್ರೀನಾಥ ಅವರಿಂದ ಸನ್ಮಾನ್ ಸ್ವೀಕರಿಸಿ ಮಾತನಾಡಿ ನನ್ನ ಕ್ಷೇತ್ರ ಕಾಡಾ ವ್ಯಾಪ್ತಿಗೆ ಬರದಿದ್ದರೂ ಸಚಿವರು, ಶಾಸಕರು ಮತ್ತು ಹಿರಿಯರ ಅನುಭವ ಪಡೆದುಕೊಂಡು ನನ್ನ ಹುದ್ದೆಯನ್ನು ನಿಭಾಯಿಸುತ್ತೇನೆ. ಮತ್ತು ತುಂಗಭದ್ರಾ ಜಲಾಶಯದ ಮತ್ತು ಅಚ್ಚುಕಟ್ಟು ಪ್ರದೇಶದ ರೈತರ ನೀರಾವರಿ ಸಮಸ್ಯೆಗಳ ಪರಿಹಾರಕ್ಕೆ ಪ್ರಮಾಣಿಕವಾಗಿ ಸ್ಪಂದಿಸುತ್ತೇನೆ.
ನಾನು ಹೆಚ್.ಜಿ.ರಾಮುಲು ಅವರ ಮಾರ್ಗದರ್ಶನ ಪಡೆದು ಕುಷ್ಟಗಿ ಕ್ಷೇತ್ರದಲ್ಲಿ ಪಕ್ಷದಿಂದ ಶಾಸಕನಾಗಿದ್ದೆ. ಒಮ್ಮೆ ಶಾಸಕನಾಗಿ ಅನುಭವ ಹೊಂದಿದ್ದು, ಮಾಜಿ ಕಾಡಾ ಅಧ್ಯಕ್ಷರಾಗಿರುವ ಶ್ರೀನಾಥ ಅವರನ್ನು ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಬರುವ ಸಚಿವರು, ಶಾಸಕರ ಅನುಭವ ಪಡೆದುಕೊಂಡು ಈ ಜವಬ್ದಾರಿ ನಿಭಾಯಿಸುತ್ತೇನೆ.
ರೈತರ ಸಮಸ್ಯೆಗಳಿಗೆ ಪ್ರಮಾಣಿಕವಾಗಿ ಪರಿಹರಿಸುವ ಕೆಲಸ ಮಾಡುತ್ತೇನೆ. ಮಾಜಿ ಸಂಸದ ಹೆಚ್.ಜಿ.ರಾಮುಲು, ಮಾಜಿಸಚಿವ ಇಕ್ಬಾಲ ಅನ್ಸಾರಿ ತಂದೆ ಎಂ.ಎಸ್.ಅನ್ಸಾರಿ ಅವರ ಮಾರ್ಗದರ್ಶನದಲ್ಲಿ ನಾನು ರಾಜಕಾರಣ ಮಾಡಿದ್ದೇನೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲರು ಸೇರಿ ಲೋಕಸಭೆ ಚುನಾವಣೆ ಎದುರಿಸುತ್ತೇವೆ. ಅಮರೇಗೌಡ ಬಯ್ಯಾಪುರ ಅವರಿಗೆ ಎಂಪಿ ಟಿಕೆಟ್ ನೀಡಲು ನಾನು ಮನವಿ ಮಾಡಿದ್ದೇನೆ. ಹೈಕಮಾಂಡ್ ಯಾರಿಗೆ ಅವಕಾಶ ನೀಡಿದರು ನಾವೆಲ್ಲರು ಸೇರಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ ಎಂದರು.
ದೋಟಿಹಾಳ ಸರಳ ಸಜ್ಜನಿಕೆ ವ್ಯಕ್ತಿ : ಕಾಡಾಮಾಜಿ ಅಧ್ಯಕ್ಷ ವಿಧಾನಪರಿಷತ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ ಮಾತನಾಡಿ ನೂತನ ಕಾಡಾ ಅಧ್ಯಕ್ಷ ಮಾಜಿ ಶಾಸಕ ಹಸನಸಾಬ ದೋಟಿಹಾಳ ಸರಳ ಸಜ್ಜನಿಕೆ-ವ್ಯಕ್ತಿಯಾಗಿದ್ದಾರೆ. ಜಿಲ್ಲೆಯಲ್ಲಿ ಪಕ್ಷದ ಎಲ್ಲರೊಂದಿಗೆ ಬೆರೆಯುವ ಅಲ್ಪಸಂಖ್ಯಾತರ ನಾಯಕರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಸರ್ವೇಶ ಮಾಂತಗೊಂಡ, ಆಸೀಫ್ ಅಲಿ, ಡಾ.ಇಲಿಯಾಸ್‌ಬಾಬಾ, ರಮೇಶ ಗೌಳಿ, ರಾಜಶೇಖರಪ್ಪ ಮುಸ್ಟೂರು, ಸುರೇಶ ಗೌರಪ್ಪ ಉಪಸ್ಥಿತರಿದ್ದರು.