IMG20240625141234

ಹೆಣ್ಣು ಗಂಡು ತಾರತಮ್ಯ ಮಾಡದೇ‌ ಮಕ್ಕಳಿಗೆ ಉತ್ತಮ‌ ಸಂಸ್ಕಾರ‌ ನೀಡಿ : ಜ್ಯೋತಿ

ಕರುನಾಡ ಬೆಳಗು ಸುದ್ದಿ

ಕುಷ್ಟಗಿ, 26- ಸಮಾಜದಲ್ಲಿ ಪುರುಷರಷ್ಟೆ ಮಹಿಳೆಯೂ ಕೂಡ ಪ್ರತಿಯೊಂದು ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುನ್ನುಗ್ಗುವ ಶಕ್ತಿ‌ ಮಹಿಳೆಯರಿಗಿದ್ದು ಹೆಣ್ಣು ಗಂಡು ಎಂಬ ಬೇಧ ಭಾವ ತಾರತಮ್ಯ ಇಟ್ಟುಕೊಳ್ಳದೇ ತಮ್ಮ‌ ಮಕ್ಕಳನ್ನು ಸಮಾನವಾಗಿ‌ ಬೆಳೆಸಿ ಉತ್ತಮ ಸಂಸ್ಕಾರ ನೀಡಿದಲ್ಲಿ ಅತ್ತ್ಯುತ್ತಮ ನಾಗರಿಕರಾಗಲು ಸಾಧ್ಯ ಎಂದು ರಾಜ್ಯಯುವ ಪ್ರಶಸ್ತಿ ಪುರಸ್ಕೃತರಾದ ಜ್ಯೋತಿ ಗೊಂಡಬಾಳ ಅವರು ಹೇಳಿದರು.

ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ದಯಾನಂದಪುರಿ ಕ್ರೀಡೆ, ಸಾಂಸ್ಕೃತೀಕ ಜಾನಪದ ಕಲಾ ಸಂಘ ಹಾಗೂ ಗಾಯತ್ರಿ ಮಹಿಳಾ ಸಂಘ ಸಂಯುಕ್ತಾಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ರಾಜ್ಯಮಟ್ಟದ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಮಹಿಳೆಯರು ಅಭಿವೃದ್ದಿ ಹೊಂದಲು ಹಲವಾರು ಅವಕಾಶಗಳು ಇದ್ದು ತಂದೆ, ತಾಯಿ ಹಿರಿಯರ ಸೂಕ್ತ ಮಾರ್ಗದರ್ಶನಗಳನ್ನು ಪಡೆದುಕೊಂಡು ಉತ್ತಮವಾದ ಸಾಧನೆಯನ್ನು ಮಾಡಬೇಕು. ಶಿಕ್ಷಣಕ್ಕೆ‌ ಹೆಚ್ಚು ಒತ್ತು‌ ನೀಡಿ ಮಕ್ಕಳಿಗೆ ಭವಿಷ್ಯ ರೂಪಿಸಬೇಕು. ಇದರ ಜೊತೆಗೆ ಕಾನೂನು ತಿಳುವಳಿಕೆಯೂ ಅತ್ಯವಶ್ಯವಾಗಿದ್ದು ಪ್ರತಿಯೊಂದನ್ನು ಎದುರಿಸುವ ಶಕ್ತಿಯನ್ನು ಆತ್ಮಸ್ಥೈರ್ಯವನ್ನು ಪಾಲಕರು ಮಕ್ಕಳಿಗೆ ತುಂಬಬೇಕು ಎಂದರು.

ನಂತರ ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣ ಪಾಟೀಲ ಮಾತನಾಡಿ ದೇಶದಲ್ಲಿ ಇನ್ನೂ ಲಿಂಗ ಅಸಮಾನತೆಯು ಜೀವಂತವಾಗಿದೆ. ಇದನ್ನು ಹೊಡೆದೊಡಿಸಲು ಮಹಿಳೆಯರು ಕಡ್ಡಾಯವಾಗಿ ಶಿಕ್ಷಣವನ್ನು ಪಡೆಯಬೇಕು. ಹಾಗೂ ಮಹಿಳಾ ದಿನಾಚರಣೆಗಳು ಕೇವಲ ಆಚರಣೆಗಳಿಗೆ ಮಾತ್ರ ಸೀಮಿತವಾಗಬಾರದು ಸರಕಾರ ಗಂಡು ಹೆಣ್ಣಿಗೆ ಸಮಾನತೆ ಇದೆ ಎಂದು ಹೇಳುತ್ತಿದೆ ಆದರೆ ಅದು ಇನ್ನೂ ಸಂಪೂರ್ಣವಾಗಿ ಸಮಾನತೆಯು ಸಿಕ್ಕಿಲ್ಲ ವಿವಿಧ ಕ್ಷೇತ್ರಗಳಲ್ಲಿ ಮುಕ್ತವಾಗಿ ಪಾಲ್ಗೊಳ್ಳಲು ಅವಕಾಶ ನೀಡಬೇಕಾಗಿದೆ ಎಂದರು.

ಇನ್ನೋರ್ವ ಪ್ರಶಸ್ತಿ ಪುರಸ್ಕೃತರಾದ ಇನ್ನರವೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಶೆಟ್ಟರ ಮಾತನಾಡಿ ನನ್ನ ಸೇವೆಯನ್ನು ಗುರುತಿಸಿ ಈ ಸಂಘದವರು ಪ್ರಶಸ್ತಿಯನ್ನು ನೀಡಿರುವದು ಬಹಳ ಸಂತಸದ ಸಂಗತಿಯಾಗಿದೆ. ಮಹಿಳೆಯರು ತಮ್ಮ ಮಕ್ಕಳಿಗೆ ಹೆಣ್ಣು ಮತ್ತು ಗಂಡು ಎಂಬ ಭೇಧವನ್ನು ಮಾಡದೆ ಉತ್ತಮವಾದ ಗುಣಾತ್ಮಕ ಶಿಕ್ಷಣವನ್ನು ಕೊಡಿಸಬೇಕು ಸಮಾಜದಲ್ಲಿ ಅಭಿವೃದ್ದಿಯ ಪತದತ್ತ ಸಾಗುವಂತೆ ಮಾಡಬೇಕು, ಗರ್ಭೀಣಿ ಮಹಿಳೆಯರು ಪೌಷ್ಟಿಕ ಆಹಾರವನ್ನು ಸೇವನೆ ಮಾಡಬೇಕು. ಈ ನಿಟ್ಟಿನಲ್ಲಿ ನಮ್ಮ ಕ್ಲಬ್ ವತಿಯಿಂದ ಗರ್ಭಿಣಿ ಮಹಿಳೆಯರಿಗೆ, ಬಾಣಂತಿಯರಿಗೆ ಅನೇಕ ಕಾರ್ಯಕ್ರಮಗಳನ್ನು ಸಹ ಮಾಡಿದ್ದೇವೆ ಎಂದರು.

ಇದೇ ವೇಳೆ‌‌ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಾಗೂ ಸಮಾಜ ಸೇವೆ ಸಲ್ಲಿಸುತ್ತಿರುವ ಶಾರದಾ ಶೆಟ್ಟರ, ಪ್ರಭಾವತಿ ದುತ್ತರಗಿ, ಜ್ಯೋತಿ ಗೊಂಡಬಾಳ, ಸಿರಿನ್ ಬಾನು, ಗೀತಾ ಎಮ್, ಮಲ್ಲಿಕಾ ಗಾಧಾರಿ, ಲಕ್ಷ್ಮೀ ಗೋನಾಳ, ಸಾವಿತ್ರಿ ಶಿವನಗುತ್ತಿ, ಸರೋಜಿನಿ ರ್ಯಾಕಿ, ಶಾಂಭವಿ ಹಿರೇಮಠ, ಎಮ್ ಎಚ್ ಮುಲ್ಲಾ, ಸೌಮ್ಯ ಬೋದೂರು ಅವರಿಗೆ ಕಿತ್ತೂರ ರಾಣಿ‌ಚನ್ನಮ್ಮ‌ರಾಜ್ಯ ಪ್ರಶಸ್ತಿ‌ನೀಡಿ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಶಿಕ್ಷಕ ನಟರಾಜ ಸೋನಾರ್, ಪತ್ರಕರ್ತ ಮಂಜುನಾಥ ಗೊಂಡಬಾಳ, ಸಿದ್ರಾಮಪ್ಪ ಅಮರಾವತಿ ಇತರರು ಮಾತನಾಡಿದರು. ಈ ಸಂದರ್ಭದಲ್ಲಿ ಕುಷ್ಟಗಿ ಪಟ್ಟಣ ಸಹಕಾರ ಬ್ಯಾಂಕಿನ ಉಪಾಧ್ಯಕ್ಷೆ ಭುವನೇಶ್ವರಿ ಹಿರೇಮಠ, ಆರೋಗ್ಯ ಇಲಾಖೆಯ ಅಧಿಕಾರಿಗಳಾದ ರವೀಂದ್ರ ನಂದಿಹಾಳ, ಸಲಿಮಾಬೇಗಂ ಅರಗಿದ್ದಿ, ಮಂಜೂರು ಇಲಾಹಿ ಬನ್ನು, ಪೂರ್ಣಿಮಾ ದೇವಾಂಗಮಠ, ಗಾಯತ್ರಿ ಕುದುರಿಮೋತಿ, ಶಂಕ್ರಮ್ಮ ಕೊಳ್ಳಿ, ಶ್ರೀನಿವಾಸ ಕಂಟ್ಲಿ, ನಾಗರಾಜ ಕಾಳಗಿ, ರುಕ್ಮೀಣಿ ನಾಗಶೆಟ್ಟಿ,ಶಶಿಕಲಾ ಅರಳಿಕಟ್ಟಿ, ಅಮರೇಶ ತಾರಿವಾಳ, ನಬಿಸಾಬ ಇಲಕಲ್, ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *

error: Content is protected !!