
ಹೊಲದಲ್ಲಿ ಯುವತಿ ಕಾಣೆ : ಪ್ರಕರಣ ದಾಖಲು
ಕರುನಾಡ ಬೆಳಗು ಸುದ್ದಿ
ವಿಜಯನಗರ, 1- ಕೂಡ್ಲಿಗಿ ತಾಲೂಕಿನ ಗುಡೇಕೋಟೆಯ ಗ್ರಾಮದ ಪವಿತ್ರ ತಂದೆ ಶಿವಣ್ಣ (23) ಇವರು 23-04-2024ರಂದು ಮಧ್ಯಾಹ್ನ 1.30 ರಿಂದ ಅದೇ ದಿನ ಸಂಜೆ 4 ಗಂಟೆಯ ಮಧ್ಯದ ಅವಧಿಯಲ್ಲಿ ಕೋರಿಗೆ ಮಾಡುವ ಹೊಲದಿಂದ ಕಾಣೆಯಾದ ಬಗ್ಗೆ ಗುಡೇಕೋಟೆ ಪೊಲೀಸ್ ಠಾಣೆಯ ಗುನ್ನೆ ನಂ:38/2024 ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಪವಿತ್ರಾ ಅವರು 4.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಮನೆಯಿಂದ ಹೋಗುವಾಗ ಹಸಿರು ಬಣ್ಣದ ಟಾಪ್, ಕಪ್ಪು ಬಣ್ಣದ ಹೂವುಗಳಿರುವ ಬಿಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ. ಬಲ ಹೆಬ್ಬೆರಳಿನ ಹತ್ತಿರ ಮೂರು ಚುಕ್ಕೆ ಗುರುತಿನ ಹಚ್ಚೆ ಇರುತ್ತವೆ. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾಳೆ.
ಈ ಯುವತಿಯ ಬಗ್ಗೆ ಮಾಹಿತಿ ಕಂಡುಬದಲ್ಲಿ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಪೊಲೀಸ್ ಠಾಣೆಯ ಮೊ:9480805767, ಸಿ.ಪಿ.ಐ ಕೂಡ್ಲಿಗಿ ವೃತ್ತ ಮೊ:9480805747, ಡಿ.ಎಸ್.ಪಿ ಕೂಡ್ಲಿಗಿ ಉಪ-ವಿಭಾಗ, ವಿಜಯನಗರ ಮೊ:9480805721, ಎಸ್.ಪಿ ವಿಜಯನಗರ ಮೊ:9480805701ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.