337078b3-3f07-41de-a845-525ea28179f8

ಹೊಸಪೇಟೆ 25ನೇ ಮತ್ತು 35ನೇ ವಾರ್ಡಿನಲ್ಲಿ ಮಂತ್ರಾಕ್ಷತೆ ವಿತರಣೆ

ಕರುನಾಡ ಬೆಳಗು ಸುದ್ದಿ
ಹೊಸಪೇಟೆ (ವಿಜಯನಗರ), :: ಸೋಮವಾರ 2212024 ಅಯೋಧ್ಯೆಯ ಶ್ರೀರಾಮ ಜನ್ಮಸ್ಥಾನದಲ್ಲಿಭವ್ಯ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಗೆ ಬಂದಿರುವ ಮಂತ್ರಾಕ್ಷತೆಯನ್ನು ಹೊಸಪೇಟೆ ನಗರದ 25ನೇ ಮತ್ತು 35ನೇ ವಾರ್ಡಿನಲ್ಲಿ ಪೂಜೆ ಸಲ್ಲಿಸಿ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹನುಮೇಶ್ ಜೋಶಿ ಅವರು ಶ್ರೀ ರಾಮನ ಮಂದಿರ ಲೋಕಾರ್ಪಣೆ ದಿನ ನಾವುಗಳು ಅಲ್ಲಿಗೆ ಹೋಗಲು ಸಾಧ್ಯವಾಗದಿದ್ದರೂ ನಾವಿರುವ ಜಾಗದಲ್ಲಿ ಭಜನೆ ಕೀರ್ತನೆ ಪೂಜಾ ಮತ್ತು ಆರುತಿಗಳನ್ನು ಮಾಡುವುದು “ಶ್ರೀರಾಮ ಜಯರಾಮ ಜಯ ಜಯ ರಾಮ” ವಿಜಯ ಮಹಾ ಮಂತ್ರವನ್ನು ಸಾಮೂಹಿಕವಾಗಿ 108 ಬಾರಿ ಜಪ ಮಾಡುವುದು ಇದರ ಜೊತೆಗೆ ಹನುಮಾನ್ ಚಾಲೀಸ್ ಸುಂದರಕಾಂಡ ಪಾರಾಯಣ ರಾಮರಕ್ಷಾ ಸೂತ್ರದ ಪಠಣಗಳನ್ನು ಸಹ ಮಾಡಬಹುದು ಪ್ರಾಣ ಪ್ರತಿಷ್ಠಾಪನೆಯ ದಿನದಂದು ಸಂಜೆ ಸೂರ್ಯಾಸ್ತ ವಾದ ಮೇಲೆ ತಮ್ಮ ತಮ್ಮ ಮನೆಗಳ ಮುಂದೆ ಎಲ್ಲಾ ದೇವಾದಿ ದೇವತೆಗಳನ್ನು ಪ್ರಸನ್ನಗೊಳಿಸಲು ದೀಪಗಳನ್ನು ಬೆಳಗುವುದು .

ಜಗತ್ತಿನ ಕೋಟಿ ಕೋಟಿ ಮನೆಗಳ ಮುಂದೆ ದೀಪೋತ್ಸವವು ನಡೆದು ಇಡೀ ಜಗತ್ತು ದೀಪಗಳ ಮಾಲೆಯಿಂದ ಜ್ಯೋತಿರ್ಮಯವಾಗುವುದು ಮತ್ತು ಶ್ರೀ ರಾಮನ ಭಜನೆ ಮಾಡುತ್ತಾ ಮಂತ್ರ ಪಠಣೆ ಮಾಡುವುದರ ಮೂಲಕ ಶ್ರೀರಾಮ ಮಂತ್ರ ಯಶಸ್ವಿಗೊಳಿಸೋಣ ಎಂದು ಹೇಳಿದರು. ಈ ಮೂಲಕ ಮನೆ ಮನೆಗೆ ತೆರಳಿ ಮಂತ್ರಾಕ್ಷತೆಯನ್ನು ವಿತರಣೆ ಮಾಡುತ್ತಿದ್ದೇವೆ ಎಂದು ಹೇಳಿದರು. ಸಂದರ್ಭದಲ್ಲಿ ಪಿ .ಮೋಹನ್. ಶ್ರೀನಿವಾಸ್ ಸೇರಿದಂತೆ ಇನ್ನು ಅನೇಕರು ಇದ್ದರು.

Leave a Reply

Your email address will not be published. Required fields are marked *

error: Content is protected !!