filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42;
ಉತ್ತರ ಕರ್ನಾಟಕದಲ್ಲಿ 12 ಸ್ಥಾನದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ – ಪಾಟೀಲ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 16- ಕಾಂಗ್ರೆಸ್ ಪಕ್ಷ 5 ಗ್ಯಾರಂಟಿ ಮೂಲಕ ಬಡ ಕುಟುಂಬ ಗಳನ್ನು ಬಡತನ ರೇಖೆಗಿಂತ ಮೇಲೆತ್ತುವ ಕೆಲಸ ಮಾಡಲಾಗಿದೆ ಕಾಂಗ್ರೆಸ್ ಉತ್ತರ ಕರ್ನಾಟಕದಲ್ಲಿ 12 ಸ್ಥಾನದಲ್ಲಿ ಗೆಲುವು ಸಾದಿಸಲಾಗುವುದು ಎಂದು ಕಾನೂನು ಸಂಸದಿಯ ಸಚಿವ ಹೆಚ್ಚ,ಕೆ ಪಾಟೀಲ್ ಹೇಳದರು.
ಅವರು ಕೊಪ್ಪಳದಲ್ಲಿ ಮಾತನಾಡಿದ ಅವರು ಹಬ್ಬದ ಸಂತಿಯನ್ನ ಈ ಸಾರಿ ಸಂಭ್ರಮದಿಂದ ಸಾಲವಿಲ್ಲದೆ ಹಬ್ಬ ಆಚರಿಸಿದ್ದಾರೆ.
ಬಡ ಮಹಿಳೆಯರು ಕಾಂಗ್ರೆಸ್ ಪಕ್ಷದ ಪರವಾಗಿದ್ದು ಉತ್ತರ ಕರ್ನಾಟಕದ 12 ಸ್ಥಾನದಲ್ಲಿ ನಾವು ಗೆಲ್ಲೂತ್ತೆವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಡವರಿಗೆ ಕಾಂಗ್ರೆಸ್ ಮಾಡಿರುವ ಸೇವೆಯನ್ನ ಮೋದಿಯವರು ನೆನಪಿಡಬೇಕು, ಬಡವರಿಗೆ ಮನೆ, ರೈತರಿಗೆ ಹಲವಾರು ಯೋಜನೆ, ವೃಧ್ಯಾಪ ವೇತನ, ವಿಧವಾ ವೇತನ ಸೇರಿದಂತೆ ನೂರಾರು ಯೋಜನೆ ನೀಡಿದ್ದು ನಮ್ಮ ಪಕ್ಷ ಎಂದರು.
ಕರ್ನಾಟಕದ ಗ್ಯಾರಂಟಿ ಜಾರಿಗೆ ಯಾದಂತೆ ಕೇಂದ್ರದಲ್ಲಿ ಸಹ ಕಾಂಗ್ರೆಸ್ ನೀಡಿರುವ ಗ್ಯಾರಂಟಿ ಜಾರಿಯಾಗುತ್ತದೆ, ಮೋದಿಯವರು ಭಾಷಣ ಸ್ಪರ್ಧೆಯಂತೆ ಮಾತನಾಡುತ್ತಾರೆ. ಪ್ರಧಾನಿಯಾಗಿ ಸ್ಥಾನದ ಗೌರವ ಕಳೆದಿದ್ದಾರೆ.
ಮೋದಿಯವರು ತಾವು 10 ವರ್ಷ ಮಾಡಿದ ಸಾಧನೆ ಹಾಗೂ ರಾಜ್ಯಕ್ಕೆ ಕೊಟ್ಟ ಕೊಡುಗೆ ಮಾತನಾಡುತ್ತಿಲ್ಲಾ, ಬರ ಪರಿಹಾರ ನೀಡಿಲ್ಲಾ, ರಾಜ್ಯಕ್ಕೆ ಯಾವ ಕೊಡುಗೆ ಕೇಂದ್ರ ಸರ್ಕಾರ ನೀಡಿಲ್ಲಾ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಸತೀಶ್ ಜಾರಕಿಹೋಳಿ, ಶಿವರಾಜ ಎಸ್ ತಂಗಡಗಿ, ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪೂರ, ಶಾಸಕ ಕೆ,ರಾಘವೇಂದ್ರ ಹಿಟ್ನಾಳ , ಹೆಚ್ಚ ಆರ್ ಶ್ರೀನಾಥ್, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಇತರರು ಇದ್ದರು.
