ಉನ್ನತ ಶಿಕ್ಷಣ ಪರಿಷತ್ತ ಸದಸ್ಯರಾಗಿ
ಡಾ. ರಜಾಕ್ ಉಸ್ತಾದ್ ನೇಮಕ
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 11- ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿಗೆ ಕಲ್ಯಾಣ ಕರ್ನಾಟಕ ಹೋರಾಟಗಾರ ಹಾಗೂ ಶಿಕ್ಷಣ ತಜ್ಞ ಮತ್ತು ಕಾಂಗ್ರೆಸ್ ಮುಖಂಡ ಡಾ. ರಜಾಕ್ ಉಸ್ತಾದ್ ನೇಮಕವಾಗಿದ್ದಾರೆ.
ಈ ಕುರಿತು ನೇಮಕಾತಿ ಮಾಡಿ ಆದೇಶ ಹೊರಡಿಸಿರುವ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ವಿದ್ಯಾ ಪೈ ಅವರು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿದ್ದಾರೆ.
ಅವರ ನೇಮಕದಿಂದ ವಿಶ್ವವಿದ್ಯಾಲಯದ ಅನೇಕ ಸಮಸ್ಯಗಳಿದೆ ಪರಿಹಾರ ಸಿಗುವ ನಿರೀಕ್ಷೆ ಇದೆ. ಇವರ ಜೋತೆ ಇನ್ನೊಬ್ಬ ಸದಸ್ಯರಾಗಿ ಬೆಂಗಳೂರಿನ ಡಾ ಹೆಚ್ಚ್ ಜೆ ಜಯಕೃಷ್ಣ ಅವರನ್ನು ಸಹ ನೇಮಕ ಮಾಡಲಾಗಿದೆ.
