WhatsApp Image 2024-04-18 at 12.53.21 PM

ಐಎಎಸ್ ಪಾಸ್ ಮಾಡಿದ ಮುಧೋಳ ಗ್ರಾಮದ ರೈತನ ಮಗಳು

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ18 ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಸೌಭಾಗ್ಯ ಶರಣಯ್ಯ ಬೀಳಗಿಮಠ ಅವರು 101ನೇ ರಾಂಕ್ ಪಡೆದಿದ್ದಾರೆ.

ಐ.ಎ.ಎಸ್. ಪರೀಕ್ಷೆ ಎಂದೇ ಹೆಸರಾಗಿರುವ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಈ ಸಾಧನೆ ಮಾಡಿರುವ ಸೌಭಾಗ್ಯ ಅವರು
ಮೂಲತಃ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ಬೀಳಗಿಮಠ ಮನೆತನದವರು, ಸಾಲದ ಸಮಸ್ಯೆಯಿಂದ ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಕಳೆದ 26 ವರ್ಷಗಳಿಂದ ಹಾಲಿ ವಸ್ತಿ ದಾವಣಗೆರೆಯಲ್ಲಿ ವಾಸ್ತವ್ಯ ಹೂಡಿದರು, ಶರಣಯ್ಯ ಸ್ವಾಮಿ ಮತ್ತು ಶರಣಮ್ಮ ದಂಪತಿಯ ಪುತ್ರಿ ಸೌಭಾಗ್ಯ ಅವರು ಎರಡನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ.

ದಾವಣಗೇರಿಯ ಸಿದ್ದಗಂಗಾ ಪಿಯು ಸೈನ್ಸ್ ಕಾಲೇಜಿನಲ್ಲಿ ಶೇ. 98 ಅಂಕ ಗಳಿಸಿದ್ದರು. ನಂತರ 2023ರಲ್ಲಿ ಧಾರವಾಡ ಕೃಷಿ ವಿಶ್ವ ವಿದ್ಯಾಲಯದಿಂದ ಬಿಎಸ್.ಸಿ ಕೃಷಿ ಪದವಿ ಪೂರೈಸಿದ್ದರು.

ಮೊದಲಿನಿಂದಾನೂ ಐಎಎಸ್ ಅಧಿಕಾರಿಯಾಗಬೇಕೆಂಬ ಆಸೆ ಇಟ್ಟುಕೊಂಡಿದ್ದವರು.‌ ಇಂದು ಆ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಐಎಎಸ್ ಮಾಡುವ ಕನಸು ಹೊತ್ತುಕೊಂಡು ಧಾರಾವಾಡಕ್ಕೆ ಬಂದರು. 2018ಕ್ಕೆ ಧಾರವಾಡದ ವಿಶ್ವ ವಿದ್ಯಾಲಯಕ್ಕೆ ಬಂದರು. ತಮಗೆ ಶಿಕ್ಷಣ ನೀಡುವ ಪ್ರಾಧ್ಯಾಪಕರಾದ ಡಾ.ಅಶ್ವಿನಿ ಎಂ. ಅವರ ನಿವಾಸದಲ್ಲೇ ಮಗಳಂತೆ ಉಳಿದು ವಿದ್ಯಾಭ್ಯಾಸ ಮಾಡಿದ ಸೌಭಾಗ್ಯ, ಅಶ್ವಿನಿ ಅವರ ಕೊಟ್ಟ ತರಬೇತಿಯನ್ನು ಪಡೆದು ಇದೀಗ ಮೊದಲ ಪ್ರಯತ್ನದಲ್ಲೇ ದೇಶದ ಅತ್ಯುನ್ನತ ಪರೀಕ್ಷೆಯಾದ ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸು ಮಾಡಿದ್ದಾರೆ. ಇನ್ನು ಸೌಭಾಗ್ಯ ಅವರನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ಅವರಿಗೆ ತರಬೇತಿ ನೀಡಿದ ಪ್ರಾಧ್ಯಾಪಕಿ ಡಾ.ಅಶ್ವಿನಿ, ತಮ್ಮ ವಿದ್ಯಾರ್ಥಿನಿ ಮಾಡಿದ ಸಾಧನೆಗೆ ಖುಷಿ ವ್ಯಕ್ತಪಡಿಸಿದ್ದಾರೆ.

ಸೌಭಾಗ್ಯ ಯಾವುದೇ ತರಬೇತಿ ಪಡೆಯಲಿಲ್ಲ, ನಾನೇ ಆಕೆಗೆ ಗೊತ್ತಿದ್ದಷ್ಟು ತರಬೇತಿ ನೀಡಿದೆ. ನನ್ನ ವಿದ್ಯಾರ್ಥಿನಿ ಇಂತಹ ಸಾಧನೆ ಮಾಡಿದ್ದಕ್ಕೆ ಖುಷಿಯಾಗಿದೆ ಎಂದು ಡಾ. ಅಶ್ವಿನಿ ಅವರು ಹೇಳಿದ್ದಾರೆ. ಕಷ್ಟಪಟ್ಟು ಓದುವ ವಿದ್ಯಾರ್ಥಿನಿ ಮನಸ್ಸುಗಳಿಗೆ ಈ ರೀತಿಯ ಶಿಕ್ಷಕರು ಸಿಕ್ಕಿದರೆ ಖಂಡಿತ ಸಾಧನೆಯ ಶಿಖರಕ್ಕೆ ಏರಬಹುದು.

ಈ ಬಗ್ಗೆ ಮಾತನಾಡಿರುವ ಸೌಭಾಗ್ಯ ಯಾವುದೇ ಕೇಂದ್ರದಲ್ಲಿ ಕೋಚಿಂಗ್ ಪಡೆದಿರಲಿಲ್ಲ. ಆನ್‌ಲೈನ್ ಮಾಕ್ ಟೆಸ್ಟ್ ಸರಣಿ ಅಟೆಂಡ್ ಮಾಡಿದ್ದೆ ಅಷ್ಟೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಬೋಧಕಿ ಎಂ.ಅಶ್ವಿನಿ ಅವರು ನನ್ನನ್ನು ತಮ್ಮ ಮನೆಯಲ್ಲೇ ಮಗಳಂತೆ ಇಟ್ಟುಕೊಂಡು ಪರೀಕ್ಷೆಗೆ ಸಿದ್ಧತೆ ನಡೆಸಲು ಪ್ರೋತ್ಸಾಹ ನೀಡಿದರು. ಈ ಪರೀಕ್ಷೆ ತಯಾರಿಗೆ ಅವರೇ ನನಗೆ ಎಲ್ಲ ರೀತಿಯ ಮಾರ್ಗದರ್ಶನ ನೀಡಿದರು ಎಂದು ತಿಳಿಸಿದ್ದಾರೆ. ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಈಗ ಗಳಿಸಿರುವ ರಾಂಕಿಂಗ್‌ಗೆ ಬಹುಶ ಐ.ಪಿ.ಎಸ್. ಸಿಗಬಹುದು. ಐ.ಎ.ಎಸ್. ಹಂತದ ರಾಂಕ್ ಪಡೆಯಲು ಮತ್ತೆ ಪ್ರಯತ್ನ ನಡೆಸುತ್ತೇನೆ ಎಂದು ಹೇಳಿದ್ದಾರೆ.

ಸೌಭಾಗ್ಯ ಅವರ ಸಾಧನೆಗೆ ಮುಧೋಳ ಗ್ರಾಮದ ಗ್ರಾಮಸ್ಥರು,ಮತ್ತು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!